ಮುಂಬೈ: 2021ಕ್ಕೆ ಐಪಿಎಲ್ಗೂ ಮುನ್ನ ಮೆಗಾ ಹರಾಜು ನಡೆಯಬಹುದು ಎನ್ನಲಾಗುತ್ತಿದೆ. ಒಂದು ವೇಳೆ ಹರಾಜು ನಡೆದರೆ ಸಿಎಸ್ಕೆ ತಂಡದ ನಾಯಕ ಧೋನಿಯನ್ನು ಚೆನ್ನೈ ಫ್ರಾಂಚೈಸಿ ತಂಡದಿಂದ ಕೈಬಿಡಬೇಕು ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಸಲಹೆ ನೀಡಿದ್ದಾರೆ.
2021ರ ಐಪಿಎಲ್ಗೆ ಇನ್ನು 1 ಅಥವಾ 2 ತಂಡಗಳು ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ. ಹೊಸ ತಂಡಗಳ ಸೇರ್ಪಡೆಗೆ ಬಿಸಿಸಿಐ ಅಸ್ತು ಅಂದರೆ ಫೆಬ್ರವರಿಯಲ್ಲಿ ಮೆಗಾ ಆ್ಯಕ್ಷನ್ ನಡೆಯಲಿದೆ.
" ನನ್ನ ಪ್ರಕಾರ ಸಿಎಸ್ಕೆ ಧೋನಿಯನ್ನು ಮೆಗಾ ಆ್ಯಕ್ಷನ್ ವೇಳೆ ಕೈಬಿಡಬೇಕೆಂದು ನಾನು ಭಾವಿಸುತ್ತೇನೆ. ಮೆಗಾ ಆ್ಯಕ್ಷನ್ ವೇಳೆ ನಡೆದರೆ ನೀವು ಉಳಿಸಿಕೊಳ್ಳುವ ಆಟಗಾರನೊಂದಿಗೆ ಮುಂದಿನ ಮೂರು ವರ್ಷಗಳ ಕಾಲ ಇರಬೇಕಾಗುತ್ತದೆ. ಆದರೆ ಧೋನಿ 3 ವರ್ಷ ನಿಮ್ಮೊಂದಿಗೆ ಇರುತ್ತಾರೆಯೇ? ಧೋನಿಯನ್ನು ಇರಿಸಿಕೊಳ್ಳಬೇಡಿ ಎಂದು ನಾನು ಹೇಳುತ್ತಿಲ್ಲ. ಅವರು ಮುಂದಿನ ಐಪಿಎಲ್ ಆಡಲಿದ್ದಾರೆ. ಆದರೆ ನೀವು ಅವರನ್ನು ರೀಟೈನ್ ಆಟಗಾರನಾಗಿ ಉಳಿಸಿಕೊಂಡರೆ 15 ಕೋಟಿ ರೂ. ಪಾವತಿಸಬೇಕಾಗುತ್ತದೆ " ಎಂದು ಅವರು ತಮ್ಮ ಫೇಸ್ಬುಕ್ ಪೋಸ್ಟ್ನಲ್ಲಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಹೇಳಿದ್ದಾರೆ.
ಧೋನಿ ನಿಮ್ಮೊಂದಿಗೆ ಮೂರು ವರ್ಷಗಳ ಕಾಲ ಉಳಿಯದಿದ್ದರೆ ಮತ್ತು ಅವರು ಕೇವಲ 2021 ಆವೃತ್ತಿಯಲ್ಲಿ ಮಾತ್ರ ಆಡುವುದಾದರೆ, 2022 ಆವೃತ್ತಿಗೆ ನೀವು 15 ಕೋಟಿ ರೂ.ಗಳನ್ನು ಮರಳಿ ಪಡೆಯುತ್ತೀರಿ. ಆದರೆ ಆ ವೇಳೆ ನೀವು 15 ಕೋಟಿ ಮೌಲ್ಯದ ಆಟಗಾರರನ್ನು ಹೇಗೆ ಹುಡುಕುತ್ತೀರಾ? ಹಾಗಾಗಿ ನಿಮ್ಮ ಬಳಿ ಹಣವಿದ್ದರೆ ದೊಡ್ಡ ತಂಡವನ್ನು ರಚಿಸಬಹುದು ಎಂದು ಚೊಪ್ರಾ ವಿವರಿಸಿದ್ದಾರೆ.
ಧೋನಿಯನ್ನು ನೀವು ಬಿಟ್ಟುಕೊಟ್ಟರೆ, ಮತ್ತೆ ಅವರನ್ನು ರೈ ಟು ಮ್ಯಾಚ್ ಕಾರ್ಡ್ ಬಳಸಿ ಕೊಂಡುಕೊಳ್ಳಬಹುದು. ಅಲ್ಲದೇ ನೀವು ನಿಮ್ಮ ಬಳಿ ಇರುವ ಹಣದಿಂದ ಅರ್ಹ ಆಟಗಾರರನ್ನು ಖರೀದಿಸಬಹುದು. ಆ ವೇಳೆ ಧೋನಿ ತಂಡದಲ್ಲಿ ಉಳಿಯುತ್ತಾರೆ. ಇದು ಸಿಎಸ್ಕೆಗೆ ತುಂಬಾ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.
ಮೆಗಾ ಆ್ಯಕ್ಷನ್ ನಡೆದರೆ ಮೂವರು ಆಟಗಾರರನ್ನು ಮಾತ್ರ ಐಪಿಎಲ್ ತಂಡಗಳು ಉಳಿಸಿಕೊಳ್ಳಬಹುದಾಗಿದೆ. ರೈಟ್ ಟು ಮ್ಯಾಚ್ ಕಾರ್ಡ್ ಬಳಸಿ ಮತ್ತೆ ತಮಗಿಷ್ಟದ ಆಟಗಾರರನ್ನು ಹರಾಜಿನಲ್ಲಿ ಬಿಕರಿಯಾಗಿರುವ ಮೊತ್ತವನ್ನು ನೀಡಿ ಸೇರ್ಪಡೆಗೊಳಿಸುವ ಅವಕಾಶವಿರುತ್ತದೆ.