ETV Bharat / sports

ಚೆನ್ನೈ ಸೂಪರ್​ ಕಿಂಗ್ಸ್​​ ನಮಗೆ ಎಲ್ಲಾ ತಂಡಗಳಂತೆ ಸಾಮಾನ್ಯ ಎದುರಾಳಿ : ರೋಹಿತ್ ಶರ್ಮಾ - CSK vs MI 2020

ಐಪಿಎಲ್​ ಅತ್ಯಂತ ಯಶಸ್ವಿ ತಂಡಗಳಾಗಿರುವ ಮುಂಬೈ ಹಾಗೂ ಚೆನ್ನೈ ಪರಸ್ಪರ 28 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ರೋಹಿತ್ ಪಡೆ 17 ಹಾಗೂ ಧೋನಿ ಬಳಗ 11ರಲ್ಲಿ ಗೆಲುವು ಸಾಧಿಸಿವೆ. ಕಳೆದ 4 ಮುಖಾಮುಖಿಯಲ್ಲಿ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ಗೆಲುವು ಸಾಧಿಸಿದೆ..

CSK vs MI
ರೋಹಿತ್ ಶರ್ಮಾ- ಧೋನಿ
author img

By

Published : Sep 19, 2020, 4:18 PM IST

ಅಬುಧಾಬಿ : ಬಹುನಿರೀಕ್ಷಿತ 2020ರ ಐಪಿಎಲ್​ ಟೂರ್ನಿಗೆ ಕ್ಷಣಗಣನೆ ಶುರುವಾಗಿದೆ. ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ತನ್ನ ಮೊದಲ ಪಂದ್ಯದಲ್ಲಿ ಸಿಎಸ್​ಕೆ ತಂಡವನ್ನು ಎದುರಿಸುತ್ತಿದೆ. ಧೋನಿ ನೇತೃತ್ವದ ತಂಡದ ವಿರುದ್ಧ ಆಡುವುದಕ್ಕೆ ನಾನು ಹೆಚ್ಚು ಆನಂದಿಸುತ್ತೇನೆ. ಆದರೆ, ಸಿಎಸ್​ಕೆ ಕೂಡ ಎಲ್ಲಾ ತಂಡದಂತೆ ಸಾಮಾನ್ಯ ಎದುರಾಳಿಯಷ್ಟೇ ಎಂದು ರೋಹಿತ್​ ಹೇಳಿದ್ದಾರೆ.

ಅಂಕಿ ಅಂಶಗಳನ್ನು ನೋಡುವುದಾದರೆ ಮೊದಲ ಪಂದ್ಯ ಮುಂಬೈಗೆ ಅದೃಷ್ಟವಿಲ್ಲ. ರೋಹಿತ್ ಪಡೆ ಕಳೆದ ಮೂರು ಐಪಿಎಲ್​ಗಳಲ್ಲಿ ತನ್ನ ಮೊದಲ ಪಂದ್ಯದಲ್ಲಿ ಸೋತಿದೆ. ಆದರೆ,ಸಿಎಸ್​ಕೆ ತನ್ನ ಕೊನೆಯ ಮೂರು ಆವೃತ್ತಿಗಳ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಒಂದು ಕಡೆ ಬಲಿಷ್ಠ ತಂಡ ಮತ್ತೊಂದು ಕಡೆ ಅನುಭವಿಗಳ ತಂಡ ಇಂದು ಅರಬ್​ ನಾಡಿನಲ್ಲಿ ಮೊದಲ ಗೆಲುವಿಗಾಗಿ ಹೋರಾಟ ನಡೆಸಲಿದೆ.

ರೋಹಿತ್ ಶರ್ಮಾ
ರೋಹಿತ್ ಶರ್ಮಾ

ಐಪಿಎಲ್​ ಅತ್ಯಂತ ಯಶಸ್ವಿ ತಂಡಗಳಾಗಿರುವ ಮುಂಬೈ ಹಾಗೂ ಚೆನ್ನೈ ಪರಸ್ಪರ 28 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ರೋಹಿತ್ ಪಡೆ 17 ಹಾಗೂ ಧೋನಿ ಬಳಗ 11ರಲ್ಲಿ ಗೆಲುವು ಸಾಧಿಸಿವೆ. ಕಳೆದ 4 ಮುಖಾಮುಖಿಯಲ್ಲಿ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ಗೆಲುವು ಸಾಧಿಸಿದೆ.

'ಸಿಎಸ್​ಕೆ ವಿರುದ್ಧ ಆಡುವುದು ಯಾವಾಗಲು ಮೋಜಿನಿಂದ ಕೂಡಿರುತ್ತದೆ. ಅವರ ವಿರುದ್ಧದ ಹೋರಾಟವನ್ನು ನಾವು ಆನಂದಿಸುತ್ತೇವೆ. ಆದರೆ, ಆ ತಂಡ ನಮಗೆ ಮತ್ತೊಂದು ಪ್ರತಿಸ್ಪರ್ಧಿ ಅಷ್ಟೇ.. ನಾವು ಎಂದಿನಂತೆ ಮುಂದುವರಿಯಲು ಬಯಸುತ್ತೇವೆ. ಎದುರಾಳಿಗಳಿಂದ ಅತಿಯಾದ ಪ್ರಭಾವಿತರಾಗಬಾರದು' ಎಂದು ರೋಹಿತ್ ಶರ್ಮಾ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಎರಡು ಬಲಿಷ್ಠ ತಂಡಗಳ ನಡುವಿನ ಐಪಿಎಲ್​ ಕದನ ಇಂದು ಸಂಜೆ 7:30ಕ್ಕೆ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.