ಸಿಡ್ನಿ:ನ್ಯೂ ಸೌತ್ ವೇಲ್ಸ್ ರಾಜ್ಯದಲ್ಲಿ ಕೊರೊನಾವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್‌ಗೆ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ವೀಕ್ಷಕರ ಸಂಖ್ಯೆಯನ್ನು ಶೇ. 50 ರಿಂದ ಶೇ.25ಕ್ಕೆ ಕಡಿತಗೊಳಿಸಲಾಗಿದೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಒಟ್ಟು 38,000 ಆಸನ ವ್ಯವಸ್ಥೆಯಿದ್ದು, ಕೋವಿಡ್ 19 ಪರಿಣಾಮ ಸಾಮಾಜಿಕ ಅಂತರ ಕಾಪಾಡಲು ಅರ್ಧದಷ್ಟು ಮಂದಿಗೆ ಮಾತ್ರ ಪಂದ್ಯ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಇದೀಗ ಮತ್ತೆ ಅರ್ಧದ ಬದಲು ಕೇವಲ ಶೇ 25 ಮಂದಿಗೆ ಮಾತ್ರ ವೀಕ್ಷಣೆ ಮಾಡಲು ಅವಕಾಶ ನೀಡಲು ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಸಿಡ್ನಿ ಕ್ರಿಕೆಟ್ ಮೈದಾನದ ಆಡಳಿತ ಮಂಡಳಿ ನಿರ್ಧರಿಸಿವೆ.
ಇದಕ್ಕೂ ಮೆಲ್ಬೋರ್ನ್ನಲ್ಲಿ ನಡೆದಿದ್ದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ 25 ಸಾವಿರಕ್ಕೆ ನಿಗದಿ ಮಾಡಿದ್ದ ವೀಕ್ಷಕರ ಸಂಖ್ಯೆಯನ್ನ 30 ಸಾವಿರಕ್ಕೆ ಏರಿಸಲಾಗಿತ್ತು. ಆದರೆ ಸಿಡ್ನಿ ಟೆಸ್ಟ್‌ಗೆ ಶೇ. 25 ರಷ್ಟು ವೀಕ್ಷಕರಿಗೆ ಅವಕಾಶ ಮಾಡಿಕೊಟ್ಟಿರುವುದರಿಂದ ಸುಮಾರು 9500 ಮಂದಿ ಮಾತ್ರ ಮೂರನೇ ಪಂದ್ಯವನ್ನು ಕಣ್ತುಂಬಿಕೊಳ್ಳಲಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಜನವರಿ 7ರಿಂದ ಆರಂಭಗೊವಾಗಲಿದೆ.