ಲಂಡನ್: ಇಂಗ್ಲೆಂಡ್ ತಂಡದ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ ಮನ್ ಅಗಿರುವ ಜೋಸ್ ಬಟ್ಲರ್ರನ್ನು ವಿಶ್ವಕ್ರಿಕೆಟ್ನ ಮತ್ತೊಬ್ಬ ಧೋನಿ ಎಂದು ಆಸೀಸ್ ಕೋಚ್ ಜಸ್ಟಿನ್ ಲ್ಯಾಂಗರ್ ಅಭಿಪ್ರಾಯ ಪಟ್ಟಿದ್ದಾರೆ.
ಕಳೆದ 15 ವರ್ಷಗಳಿಂದ ಧೋನಿ ಭಾರತ ತಂಡದ ಫಿನಿಶಿಂಗ್ ಪಾತ್ರವನ್ನು ಯಶಸ್ವಿಯಾಗಿ ನಿರ್ವಸುತ್ತಿದ್ದಾರೆ. ಅದೇ ರೀತಿ ಕಳೆದ 2-3 ವರ್ಷಗಳಿಂದ ಬಟ್ಲರ್ ಕೂಡ ಧೋನಿಯಂತೆ ಪಂದ್ಯಗಳನ್ನು ಯಶಸ್ವಿಯಾಗಿ, ಕೆಲವೊಮ್ಮೆ ಏಕಾಂಗಿಯಾಗಿ ಗೆಲ್ಲಿಸಿಕೊಂಡು ಬರುತ್ತಿದ್ದಾರೆ. ಧೋನಿ ಕ್ರಿಕೆಟ್ನಿಂದ ನಿವೃತ್ತಿ ಹೊಂದಿದರುಅವರ ಸ್ಥಾನ ತುಂಬಲು ಬಟ್ಲರ್ರಿಂದ ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.
ಬಟ್ಲರ್ 137 ಏಕದಿನ ಪಂದ್ಯಗಳಿಂದ 120 ಸ್ಟ್ರೈಕ್ರೇಟ್ನಲ್ಲಿ 3728 ರನ್ಗಳಿಸಿದ್ದಾರೆ. ಇದರಲ್ಲಿ 9 ಶತಕಗಳು 19 ಅರ್ಧಶತಕಗಳು ಸೇರಿವೆ.