ETV Bharat / state

ಸಿಎಂ ಜೊತೆ ಚರ್ಚೆ ನಡೆಸಿದ ಭಾರತದಲ್ಲಿನ ಬ್ರಿಟಿಷ್‌ ಹೈಕಮಿಷನರ್‌ ಲಿಂಡೆ ಕ್ಯಾಮರೂನ್‌

ಸಿಎಂ ಜೊತೆ ಚರ್ಚೆ ನಡೆಸಿದ ಭಾರತದಲ್ಲಿನ ಬ್ರಿಟಿಷ್‌ ಹೈಕಮಿಷನರ್‌ ಲಿಂಡೆ ಕ್ಯಾಮರೂನ್‌, ಫೆಬ್ರವರಿಯಲ್ಲಿ ನಡೆಯಲಿರುವ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ಮತ್ತು ಏರೋ ಇಂಡಿಯಾ ಕಾರ್ಯಕ್ರಮದಲ್ಲಿ ಬ್ರಿಟನ್‌ನ ಹಲವು ನಿಯೋಗಗಳು ಭಾಗವಹಿಸಲಿವೆ ಎಂದಿದ್ದಾರೆ.

British High Commissioner in India Lindy Cameron held a discussion with CM Siddaramaiah
ಸಿಎಂ ಸಿದ್ದರಾಮಯ್ಯ ಜೊತೆ ಚರ್ಚೆ ನಡೆಸಿದ ಭಾರತದಲ್ಲಿನ ಬ್ರಿಟಿಷ್‌ ಹೈಕಮಿಷನರ್‌ ಲಿಂಡೆ ಕ್ಯಾಮರೂನ್‌ (ETV Bharat)
author img

By ETV Bharat Karnataka Team

Published : 3 hours ago

ಬೆಂಗಳೂರು: ದೇಶದಲ್ಲೇ ಕರ್ನಾಟಕ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಜ್ಯವಾಗಿದ್ದು, ಇಲ್ಲಿನ ಉದ್ಯಮಸ್ನೇಹಿ ವಾತಾವರಣ, ಪ್ರತಿಭೆಗಳನ್ನು ಬಳಸಿಕೊಂಡು ಬಂಡವಾಳ ಹೂಡಿಕೆ ಮಾಡಲು ಎಲ್ಲಾ ರೀತಿಯ ನೆರವು ಒದಗಿಸಲಾಗುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ತಮ್ಮನ್ನು ಭೇಟಿಯಾದ ಭಾರತದಲ್ಲಿನ ಬ್ರಿಟಿಷ್‌ ಹೈಕಮಿಷನರ್‌ ಲಿಂಡೆ ಕ್ಯಾಮರೂನ್‌ ಅವರೊಂದಿಗೆ ವಿವಿಧ ವಿಷಯಗಳ ಕುರಿತು ಸಿಎಂ ಸಮಾಲೋಚನೆ ನಡೆಸಿದರು.

British High Commissioner in India Lindy Cameron held a discussion with CM Siddaramaiah
ಸಿಎಂ ಸಿದ್ದರಾಮಯ್ಯ ಜೊತೆ ಚರ್ಚೆ ನಡೆಸಿದ ಭಾರತದಲ್ಲಿನ ಬ್ರಿಟಿಷ್‌ ಹೈಕಮಿಷನರ್‌ ಲಿಂಡೆ ಕ್ಯಾಮರೂನ್‌ (ETV Bharat)

ಬಂಡವಾಳ ಹೂಡಿಕೆಗೆ ಸರ್ಕಾರದಿಂದ ಎಲ್ಲಾ ನೆರವು; ಉದ್ಯಮಗಳಿಗೆ ಬೆಂಗಳೂರಿನಲ್ಲಿ ವಿಫುಲ ಅವಕಾಶಗಳಿದ್ದು, ಮುಂದಿನ ಫೆಬ್ರವರಿ ತಿಂಗಳಲ್ಲಿ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ಇಲ್ಲಿ ನಡೆಯಲಿದೆ. ಸರ್ಕಾರದ ಮಹತ್ವಾಕಾಂಕ್ಷೆಯ ಕ್ವಿನ್‌ ಸಿಟಿ ಯೋಜನೆಯಡಿ ಸಹ ಅವಕಾಶಗಳನ್ನು ಬಳಸಿಕೊಳ್ಳಬಹುದಾಗಿದೆ. ನಮ್ಮ ರಾಜ್ಯದ ಕೈಗಾರಿಕಾ ನೀತಿಯು ಅತ್ಯಂತ ಪ್ರಗತಿಶೀಲವಾಗಿದೆ. ರಾಜ್ಯದ ಬಹುತೇಕ ನಗರಗಳಿಗೆ ಉತ್ತಮ ವಿಮಾನಯಾನ ಸಂಪರ್ಕವಿದ್ದು, ಇಂತಹ ಎರಡನೇ ಹಂತದ ನಗರಗಳಲ್ಲಿ ಬಂಡವಾಳ ತೊಡಗಿಸಲು ಸರ್ಕಾರ ಎಲ್ಲಾ ನೆರವು ಒದಗಿಸಲಿದೆ ಎಂದು ಸಿಎಂ ಹೇಳಿದರು.

ಹೈಕಮಿಷನರ್‌ ಲಿಂಡೆ ಕ್ಯಾಮರೂನ್‌ ಅವರು ಮಾತನಾಡಿ, ಬೆಂಗಳೂರಿನಲ್ಲಿ ಹಲವು ಬ್ರಿಟಿಷ್‌ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ 15 ಬ್ರಿಟಿಷ್‌ ಕಂಪನಿಗಳು ಭಾಗವಹಿಸುತ್ತಿವೆ. 2025ರ ಫೆಬ್ರವರಿಯಲ್ಲಿ ನಡೆಯಲಿರುವ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ಮತ್ತು ಏರೋ ಇಂಡಿಯಾ ಕಾರ್ಯಕ್ರಮದಲ್ಲಿ ಬ್ರಿಟನ್‌ನ ಹಲವು ನಿಯೋಗಗಳು ಭಾಗವಹಿಸಲಿವೆ ಎಂದು ತಿಳಿಸಿದರು.

ಪ್ರಸ್ತುತ ಕರ್ನಾಟಕದ ಸರ್ಕಾರಿ ಕಾಲೇಜುಗಳ 30 ವಿದ್ಯಾರ್ಥಿಗಳು 15 ದಿನಗಳ ಅಕಾಡೆಮಿಕ್‌ ಅಧ್ಯಯನದ ಮೇಲೆ ಲಂಡನ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಶೈಕ್ಷಣಿಕ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳಿಗೆ ಬ್ರಿಟಿಷ್‌ ಹೈಕಮಿಷನ್ ಮತ್ತು ಕರ್ನಾಟಕ ಜಂಟಿ ಸಹಭಾಗಿತ್ವದಲ್ಲಿ ಸ್ಕಾಲರ್‌ಶಿಪ್‌ ಒದಗಿಸುವ ಪರಸ್ಪರ ಒಡಂಬಡಿಕೆ ರೂಪಿಸಲಾಗಿದೆ. ಇದರನ್ವಯ ಕರ್ನಾಟಕದಲ್ಲಿ ಅದರಲ್ಲೂ ಮುಖ್ಯವಾಗಿ ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ಪದವಿ ಪಡೆದ ಹೆಣ್ಣು ಮಕ್ಕಳಿಗೆ ಯುಕೆಯಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಸ್ಕಾಲರ್‌ಶಿಪ್‌ ಒದಗಿಸಲಾಗುವುದು. ಮೂರು ವರ್ಷಗಳ ಒಡಂಬಡಿಕೆ ಇದಾಗಿದ್ದು, ಈ ವರ್ಷ 15 ಮಂದಿಗೆ ಸ್ಕಾಲರ್‌ಶಿಪ್‌ ಒದಗಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಡೆಪ್ಯುಟಿ ಹೈಕಮಿಷನರ್ ಚಂದ್ರು ಅಯ್ಯರ್, ಮುಖ್ಯಮಂತ್ರಿ ಅವರ ಅಪರ ಮುಖ್ಯ ಕಾರ್ಯದರ್ಶಿ ಎಲ್. ಕೆ ಅತೀಕ್, ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಗೋವಿಂದರಾಜು ಅವರು ಉಪಸ್ಥಿತರಿದ್ದರು.

ಇದನ್ನೂ ಓದಿ: ಜಾಗತಿಕ ಹೂಡಿಕೆದಾರರ ಸಮಾವೇಶ: ’ಇನ್ವೆಸ್ಟ್ ಕರ್ನಾಟಕ-2025’ ರ ಸಮನ್ವಯ ಸಭೆ ನಡೆಸಿದ ಸಚಿವ ಎಂ ಬಿ ಪಾಟೀಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.