ETV Bharat / sports

ಸುರೇಶ್​ ರೈನಾ ಸಂಬಂಧಿಕರ ಕೊಲೆ ಪ್ರಕರಣ: ಮೂವರು ಆರೋಪಿಗಳ ಬಂಧನ - ಸುರೇಶ್​ ರೈನಾ

ಪ್ರಕರಣವನ್ನು ಬೇಧಿಸಿರುವ ಪೊಲೀಸರು 3 ಆರೋಪಿಗಳನ್ನು ಬಂಧಿಸಿದ್ದು, ಇನ್ನು 11 ಮಂದಿ ಆರೋಪಿಗಳನ್ನು ಬಂಧಿಸಬೇಕಿದೆ ಎಂದು ಡಿಜಿಪಿ ದಿನಕರ್​ ಗುಪ್ತಾ ಮಾಹಿತಿ ನೀಡಿದ್ದಾರೆ.

ಸುರೇಶ್​ ರೈನಾ ಸಂಬಂಧಿಕರ ಕೊಲೆ ಪ್ರಕರಣ
ಸುರೇಶ್​ ರೈನಾ ಸಂಬಂಧಿಕರ ಕೊಲೆ ಪ್ರಕರಣ
author img

By

Published : Sep 16, 2020, 6:08 PM IST

ಚಂಡೀಘಡ್​: ಭಾರತ ತಂಡದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅವರ ಸಂಬಂಧಿಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಮಂದಿ ಅಂತಾರಾಜ್ಯ ದರೋಡೆಕೋರರನ್ನು ಬಂಧಿಸಲಾಗಿದೆ ಎಂದು ಪಂಜಾಬ್​ ಮುಖ್ಯಮಂತ್ರಿ ಕ್ಯಾಪ್ಟನ್​ ಅಮರಿಂದರ್​ ಸಿಂಗ್​ ಬುಧವಾರ ಮಾಹಿತಿ ನೀಡಿದ್ದಾರೆ.

ಪ್ರಕರಣವನ್ನು ಬೇಧಿಸಿರುವ ಪೊಲೀಸರು 3 ಆರೋಪಿಗಳನ್ನು ಬಂಧಿಸಿದ್ದು, ಇನ್ನು 11 ಮಂದಿ ಆರೋಪಿಗಳನ್ನು ಬಂಧಿಸಬೇಕಿದೆ ಎಂದು ಡಿಜಿಪಿ ದಿನಕರ್​ ಗುಪ್ತಾ ತಿಳಿಸಿದ್ದಾರೆ.

ಆಗಸ್ಟ್ 19 ರಂದು ಪಂಜಾಬ್‌ನ ಪಠಾಣ್‌ಕೋಟ್ ಜಿಲ್ಲೆಯ ತರಿಯಾಲ್ ಗ್ರಾಮದಲ್ಲಿ ನಡೆದಿದ್ದ ದಾಳಿಯಲ್ಲಿ ಕಂಟ್ರ್ಯಾಕ್ಟರ್​ ಆಗಿದ್ದ ರೈನಾ ಅವರ ಮಾವ ಅಶೋಕ್​ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ಮಗ ಕುಶಾಲ್​ ಕುಮಾರ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ರೈನಾ ಅತ್ತೆ ಆಶಾ ರಾಣಿ ಗಂಭೀರ ಗಾಯಗೊಂಡಿದ್ದರು. ದಾಳಿಯಲ್ಲಿ ಗಾಯಗೊಂಡ ಇತರ ಇಬ್ಬರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಪಂಜಾಬ್ ಸಿಎಂ ಅಮರಿಂದರ್ ಸಿಂಗ್​
ಪಂಜಾಬ್ ಸಿಎಂ ಅಮರಿಂದರ್ ಸಿಂಗ್​

ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಮುಖ್ಯಮಂತ್ರಿಗಳು ಅಮೃತಸರದ ಐಜಿಪಿ, ಪಠಾಣ್ ಕೋಟ್​ನ ಎಸ್​ಎಸ್​ಪಿ ಮತ್ತು ಡಿಎಸ್​ಪಿಗಳ ನೇತೃತ್ವದಲ್ಲಿ ಒಂದು ವಿಶೇಷ ತನಿಖಾ ದಳ(ಎಸ್​ಐಟಿ)ವನ್ನು ರಚಿಸಿ, ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸಲು ಆದೇಶ ನೀಡಿದ್ದರು.

ಈ ಎಸ್​ಐಟಿ ತಂಡದ ತನಿಖೆಯ ಸಮಯದಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಸಾಂದರ್ಭಿಕ ಮತ್ತು ಭೌತಿಕ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದರು. ತನಿಖೆಯಲ್ಲಿ 100ಕ್ಕೂ ಹೆಚ್ಚು ಮಂದಿಯನ್ನು ಶಂಕಿತ ವ್ಯಕ್ತಗಳಾಗಿ ವಿಚಾರಣೆ ನಡೆಸಲಾಗಿದೆ ಎಂದು ಡಿಜಿಪಿ ಮಾಹಿತಿ ನೀಡಿದ್ದಾರೆ.

ಘಟನೆಯ ನಂತರ ಬೆಳಿಗ್ಗೆ ಡಿಫೆನ್ಸ್​ ರಸ್ತೆಯಲ್ಲಿ ಕಾಣಿಸಿಕೊಂಡಿದ್ದ ಮೂವರು ಶಂಕಿತರು, ಪಠಾಣ್‌ಕೋಟ್ ರೈಲ್ವೆ ನಿಲ್ದಾಣದ ಬಳಿಯ ಜುಗ್ಗಿಸ್‌ನಲ್ಲಿ ತಂಗಿದ್ದಾರೆ ಎಂಬ ಮಾಹಿತಿ ಎಸ್​ಐಟಿಗೆ ಸಿಕ್ಕ ಕೂಡಲೇ ಅವರನ್ನು ಸೆಪ್ಟೆಂಬರ್​ 15ರಂದು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರನ್ನು ಸಾವನ್​, ಮುಹೊಬ್ಬತ್​ ಮತ್ತು ಶಾರುಖ್​ ಖಾನ್​ ಎಂದು ಗುರುತಿಸಲಾಗಿದೆ. ಇವೆರಲ್ಲರೂ ರಾಜಸ್ಥಾನದ ಜುಂಜುನು ಜಿಲ್ಲೆಯ ಚಿರಾವ ಮತ್ತ ಪಿಲಾನಿ ಜುಗ್ಗಿಸ್​ ಗ್ರಾಮದವರು ಎಂದು ತಿಳಿದುಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.