ನವದೆಹಲಿ: ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಮನೀಷ್ ಪಾಂಡೆ ದಕ್ಷಿಣ ಭಾರತದ ನಟಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ಎಂಬ ಮಾತು ಕೇಳಿ ಬಂದಿದೆ
ಈಗಾಗಲೇ ಮದುವೆ ದಿನಾಂಕ ಸಹ ಫಿಕ್ಸ್ ಆಗಿದ್ದು, 30 ವರ್ಷದ ಮನೀಷ್ ಪಾಂಡೆ, ದಕ್ಷಿಣ ಭಾರತದ ನಟಿ ಆಶ್ರಿತಾ ಶೆಟ್ಟಿ ಜೊತೆ ಡಿಸೆಂಬರ್ 2ರಂದು ಮದುವೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿಂದಿನಿಂದಲೂ ಉತ್ತಮ ಸಂಬಂಧ ಹೊಂದಿರುವ ಇವರು ಇದೀಗ ಮದುವೆಯಾಗಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
26 ವರ್ಷದ ಆಶ್ರಿತಾ ದಕ್ಷಿಣ ಭಾರತದ ಫೇಮಸ್ ನಟಿಗಳಲ್ಲಿ ಒಬ್ಬರಾಗಿದ್ದು, ಈಗಾಗಲೇ Indrajith, Oru Kanniyum Moonu Kalavaanikalum ಹಾಗೂ Udhayam NH4 ಚಿತ್ರಗಳಲ್ಲಿ ನಟಿಸಿದ್ದಾರೆ.
ಸದ್ಯ ವಿಜಯ್ ಹಜಾರೆ ಟ್ರೋಫಿಯಲ್ಲಿ ಅಬ್ಬರಿಸುತ್ತಿರುವ ಮನೀಷ್ ಪಾಂಡೆ ಕರ್ನಾಟಕ ತಂಡವನ್ನು ಮುನ್ನಡೆಸುತ್ತಿದ್ದು, ಈಗಾಗಲೇ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಟೀಂ ಇಂಡಿಯಾ ಪರ 23 ಏಕದಿನ ಪಂದ್ಯ, 31 ಟಿ20 ಹಾಗೂ 89 ಪ್ರಥಮ ಶ್ರೇಣಿ ಪಂದ್ಯಗಳಲ್ಲಿ ಭಾಗಿಯಾಗಿದ್ದಾರೆ. 2009ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮನೀಷ್ ಪಾಂಡೆ ಶತಕ ಸಿಡಿಸಿ ಮಿಂಚಿದ್ದರು.