ETV Bharat / sports

ಗಂಗೂಲಿ ಐಸಿಸಿ ಅಧ್ಯಕ್ಷರಾಗಲಿ ಎಂದ ಬೆನ್ನಲ್ಲೇ ಉಲ್ಟಾ ಹೊಡೆದ ದಕ್ಷಿಣ ಕ್ರಿಕೆಟ್​ ಮಂಡಳಿ! - ದಕ್ಷಿಣ ಆಫ್ರಿಕಾ ಕ್ರಿಕೆಟ್​ ಮಂಡಳಿ

ಕೊರೊನಾ ಬಿಕ್ಕಟ್ಟಿನಿಂದ ಸಂಕಷ್ಟದಲ್ಲಿರುವ ಕ್ರಿಕೆಟ್​ ಮತ್ತೆ ಚೇತರಿಕೆ ಕಾಣುವಂತೆ ಮಾಡಲು ಗಂಗೂಲಿ ಸೂಕ್ತ ವ್ಯಕ್ತಿ. ಅವರು ಉನ್ನತ ಮಟ್ಟದ ಕ್ರಿಕೆಟ್ ಆಡಿರುವುದಿಂದ ಎಲ್ಲಾ ಸಂಗತಿಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಕ್ರಿಕೆಟ್‌ ಮುನ್ನಡೆಸಲು ಅವರ ನಾಯಕತ್ವ ಮಹತ್ವದ್ದಾಗಲಿದೆ ಎಂದು ಗ್ರೇಮ್​ ಸ್ಮಿತ್​ ಹೇಳಿಕೆ ನೀಡಿದ್ದರು.

ಐಸಿಸಿ ಅಧ್ಯಕ್ಷ ಸ್ಥಾನ
ಸೌರವ್​ ಗಂಗೂಲಿ
author img

By

Published : May 23, 2020, 1:24 PM IST

ಕೇಪ್​ಟೌನ್​: ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿಯ ಐಸಿಸಿ ಅಧ್ಯಕ್ಷರಾಗಲು ಅರ್ಹರಿದ್ದಾರೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್​ ಮಂಡಳಿಯ ಡೈರೆಕ್ಟರ್​ ಆಗಿರುವ ಮಾಜಿ ಕ್ರಿಕೆಟಿಗ ಗ್ರೇಮ್ ಸ್ಮಿತ್​ ಹೇಳಿಕೆ ನೀಡಿದ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ಕ್ರಿಕೆಟ್​ ಮಂಡಳಿ ಉಲ್ಟಾ ಹೊಡೆದಿದೆ.

ಕೊರೊನಾ ಬಿಕ್ಕಟ್ಟಿನಿಂದ ಸಂಕಷ್ಟದಲ್ಲಿರುವ ಕ್ರಿಕೆಟ್​ ಮತ್ತೆ ಚೇತರಿಕೆ ಕಾಣುವಂತೆ ಮಾಡಲು ಗಂಗೂಲಿ ಸೂಕ್ತ ವ್ಯಕ್ತಿ. ಅವರು ಉನ್ನತ ಮಟ್ಟದ ಕ್ರಿಕೆಟ್ ಆಡಿರುವುದಿಂದ ಎಲ್ಲಾ ಸಂಗತಿಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಕ್ರಿಕೆಟ್‌ ಮುನ್ನಡೆಸಲು ಅವರ ನಾಯಕತ್ವ ಮಹತ್ವದ್ದಾಗಲಿದೆ ಎಂದು ಗ್ರೇಮ್​ ಸ್ಮಿತ್​ ಹೇಳಿಕೆ ನೀಡಿದ್ದರು.

ಆದರೆ ಅದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಎಸ್​ಎ ಅಧ್ಯಕ್ಷ ಕ್ರಿಸ್​ ನೆಂಜಾನಿ, ನಾವು ಯಾವುದೇ ಅಭ್ಯರ್ಥಿಯನ್ನು ಬೆಂಬಲಿಸುವ ಮುನ್ನ ಐಸಿಸಿ ಪ್ರೋಟೋಕಾಲ್ ಮತ್ತು ನಮ್ಮದೇ ಆದ ಪ್ರೋಟೋಕಾಲ್​ಗಳನ್ನು ಗೌರವಿಸಬೇಕಿದೆ. ಇನ್ನು ಯಾವ ಅಭ್ಯರ್ಥಿಗಳ ಹೆಸರು ನಾಮ ನಿರ್ದೇಶನಗೊಂಡಿಲ್ಲ. ಒಮ್ಮೆ ನಾಮನಿರ್ದೇಶನಗೊಂಡ ನಂತರವಷ್ಟೇ ಸಿಎಸ್​ಎ ತನ್ನ ಪ್ರೋಟೋಕಾಲ್ ಪ್ರಕಾರ ಮತ ಚಲಾಯಿಸಲು ಅಧ್ಯಕ್ಷರಿಗೆ ಸೂಚಿಸುತ್ತದೆ ಎಂದು ಹೇಳಿದ್ದಾರೆ.

ಗ್ರೇಮ್​ ಸ್ಮಿತ್​ ದಕ್ಷಿಣ ಆಫ್ರಿಕಾ ಕ್ರಿಕೆಟ್​ಗೆ ಅಪಾರ ಸೇವೆ ಸಲ್ಲಿಸಿದವರಾಗಿದ್ದಾರೆ. ಗಂಗೂಲಿ ಅವರ ಮೇಲಿನ ಅಭಿಪ್ರಾಯವನ್ನು ನಾವು ಗೌರವಯುತವಾಗಿ ಕಾಣುತ್ತೇವೆ. ಆದರೆ ನಾವು ಒಮ್ಮೆ ಚುನಾವಣೆಗೆ ನಾಮನಿರ್ದೇಶನಗೊಂಡ ಮೇಲೆ ನಮ್ಮ ನಿರ್ಧಾರ ತೆಗೆದುಕೊಳ್ಳಬೇಕು ಎಂದಿದ್ದಾರೆ.

ಈಗಾಗಲೆ ಐಸಿಸಿ ಅಧ್ಯಕ್ಷರಾಗಿರುವ ಭಾರತದ ಶಶಾಂಕ್​ ಮನೋಹರ್​ ಅವರ ಅಧಿಕಾರಾವಧಿ ಮುಂದಿನ ಮೇ ತಿಂಗಳಿಗೆ ಅಂತ್ಯವಾಗಲಿದೆ. ಮನೋಹರ್​ ಈಗಾಗಲೇ ತಾವು ಮುಂದಿನ ಅವಧಿಗೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.