ETV Bharat / sports

ವೆಸ್ಟ್ ಇಂಡೀಸ್ - ಆಸ್ಟ್ರೇಲಿಯಾ ಟಿ 20 ಐ ಸರಣಿ ಮುಂದೂಡಿಕೆ

ಕ್ವೀನ್ಸ್‌ಲ್ಯಾಂಡ್​ನಲ್ಲಿ ನಿಗದಿಯಾಗಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಪುರುಷರ ಟಿ 20 ಐ ಸರಣಿಯನ್ನು ಮುಂದೂಡಲಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ದೃಢಪಡಿಸಿದೆ.

Cricket Australia announces postponement of T20I series against Windies
ಟಿ 20 ಐ ಸರಣಿ ಮುಂದೂಡಿಕೆ
author img

By

Published : Aug 4, 2020, 5:04 PM IST

ಮೆಲ್ಬೋರ್ನ್ : ವೆಸ್ಟ್ ಇಂಡೀಸ್ ವಿರುದ್ಧದ ಪುರುಷರ ಟಿ 20 ಐ ಸರಣಿಯನ್ನು ಮುಂದೂಡಲಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ದೃಢಪಡಿಸಿದೆ.

ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ಕ್ರಿಕೆಟ್ ಒಮ್ಮತದಿಂದ ಈ ನಿರ್ಧಾರದಿಂದ ಕೈಗೊಂಡಿದ್ದು, ಅಕ್ಟೋಬರ್‌ನಲ್ಲಿ ಕ್ವೀನ್ಸ್‌ಲ್ಯಾಂಡ್​ನಲ್ಲಿ ನಿಗದಿಯಾಗಿದ್ದ ಪಂದ್ಯವಗಳನ್ನು ಮುಂದೂಡಲಾಗಿದೆ ಎಂದು ಅದು ಹೇಳಿದೆ.

ಅಕ್ಟೋಬರ್ 4, 6 ಮತ್ತು 9 ರಂದು ಕ್ವೀನ್ಸ್‌ಲ್ಯಾಂಡ್​ನ ಟೌನ್‌ಸ್ವಿಲ್ಲೆ, ಕೈರ್ನ್ಸ್ ಮತ್ತು ಗೋಲ್ಡ್ ಕೋಸ್ಟ್‌ನಲ್ಲಿ ಪಂದ್ಯಗಳನ್ನು ಆಡಲು ನಿರ್ಧರಿಸಲಾಗಿತ್ತು. ಈ ಪಂದ್ಯಗಳು ಐಸಿಸಿ ಟಿ 20 ವಿಶ್ವಕಪ್‌ಗೆ ಅಭ್ಯಾಸ ಪಂದ್ಯವಾಗಿ ಆಯೋಜಿಸಲಾಗಿತ್ತು. ಆದರೆ, ಕೊರೊನಾ ಹಿನ್ನೆಲೆ ಪಂದ್ಯಾವಳಿಯನ್ನು ಮುಂದೂಡಲಾಗಿದೆ ಎಂದು ಸಿಎ ಹೇಳಿದೆ.

ಸದ್ಯದ ಬೆಳವಣಿಗೆಯಲ್ಲಿ ವೆಸ್ಟ್ ಇಂಡೀಸ್​ ವಿರುದ್ಧ ನಡೆಯಬೇಕಿದ್ದ ಟಿ 20 ಐ ಪಂದ್ಯಗಳನ್ನು ಮುಂದೂಡಲಾಗಿದೆ (ಇದು 2021 ಅಥವಾ 2022 ರಲ್ಲಿ ನಡೆಯಲಿದೆ). ಪರಸ್ಪರ ಒಮ್ಮತದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ​ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿಕೆ ಬಿಡುಗಡೆ ಮಾಡಿದೆ.

ಈ ವರ್ಷ ಟಿ 20 ವಿಶ್ವಕಪ್ ನಡೆಯುವುದಿಲ್ಲ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಈ ಹಿಂದೆ ದೃಢಪಡಿಸಿತ್ತು. ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾ ಇಂಗ್ಲೆಂಡ್​ ವಿರುದ್ಧ ಮೂರು ಏಕದಿನ ಮತ್ತು ಮೂರು ಟಿ 20 ಐಗಳನ್ನು ಒಳಗೊಂಡ ಸೀಮಿತ ಓವರ್ ಸರಣಿಯನ್ನು ಆಡಲಿದೆ. ಮತ್ತೊಂದೆಡೆ, ವೆಸ್ಟ್ ಇಂಡೀಸ್ ಇತ್ತೀಚೆಗೆ ಸುರಕ್ಷಿತೆಯೊಂದಿಗೆ ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.