ETV Bharat / sports

ಸಿಪಿಎಲ್​ 2020: ಸಿಪಿಎಲ್​ನಿಂದ ಹೊರಬಂದ ಜಮೈಕಾ ತಂಡದ ಕೋಚ್​ ರಾಮನರೇಶ್​ ಸರವಣ್​

33 ಪಂದ್ಯಗಳ ಸಿಪಿಎಲ್​ ಟೂರ್ನಮೆಂಟ್​ ಆಗಸ್ಟ್​ 18ರಂದು ಟ್ರಿನಿಡಾಡ್​ ಮತ್ತು ಟೊಬಾಗೊದ ಎರಡು ಸ್ಟೇಡಿಯಂನಲ್ಲಿ ನಡೆಯಲಿದೆ.

ರಾಮನರೇಶ್​ ಸರವಣ್​
ರಾಮನರೇಶ್​ ಸರವಣ್​
author img

By

Published : Aug 13, 2020, 2:35 PM IST

ಬಾರ್ಬಡೋಸ್​: ಜಮೈಕಾ ತಲವಾಸ್​ ಸಹಾಯಕ ಕೋಚ್​ ರಾಮನರೇಶ್​ ಸರವಣ್​ ವೈಯಕ್ತಿಕ ಕಾರಣಗಳಿಂದ 2020ರ ಐಪಿಎಲ್​ ಆವೃತ್ತಿಯಿಂದ ಹೊರಬರಲು ನಿರ್ಧರಿಸಿದ್ದಾರೆ. ಅವರ ಬದಲು ವೆಸ್ಟ್​ ಇಂಡೀಸ್​ನ ಮಾಜಿ ಸ್ಪಿನ್ನರ್​ ರ್ಯಾನ್​ ಆಸ್ಟಿನ್​ ತಂಡ ಸೇರಿಕೊಂಡಿದ್ದಾರೆ.

"ಸರವಣ್​ ವೈಯಕ್ತಿಕ ಕಾರಣಗಳಿಗಾಗಿ ರಜೆ ಕೋರಿದ್ದಾರೆ,ನಾವು ಅದಕ್ಕೆ ಅನುಮತಿ ನೀಡಿದ್ದೇವೆ" ಎಂದು ತಲವಾಸ್ ಸಿಇಒ ಜೆಫ್ ಮಿಲ್ಲರ್ ಟ್ರಿನಿಡಾಡ್ ಮತ್ತು ಟೊಬಾಗೊ ನ್ಯೂಸ್ ಗೆ ತಿಳಿಸಿದ್ದಾರೆ.

ರಾಮನರೇಶ್​ ಸರವಣ್​
ರಾಮನರೇಶ್​ ಸರವಣ್​

" ಸರವಣ್​ ಇಲ್ಲದಿರುವುದು ಒಂದು ದೊಡ್ಡ ನಷ್ಟ. ಸಾರ್ಸ್ (ಸರವಣ್​) ಅವರು ನಮಗಾಗಿ ಸಾಕಷ್ಟು ಪಂದ್ಯಗಳನ್ನು ಗೆಲ್ಲಲು ನೆರವಾಗುತ್ತಿದ್ದರು. ಅವರ ಜ್ಞಾನ, ಅನುಭವ ಮತ್ತು ಆಟಗಾರರೊಂದಿಗೆ ಅವರು ವ್ಯವಹರಿಸಿದ ರೀತಿ ಅತ್ಯುತ್ತಮವಾಗಿತ್ತು. ಆದ್ದರಿಂದ ಅವರ ಅನುಪಸ್ಥಿತಿ ದೊಡ್ಡ ನಷ್ಟವಾಗಿದೆ " ಎಂದಿದ್ದಾರೆ.

33 ಪಂದ್ಯಗಳ ಟೂರ್ನಮೆಂಟ್​ ಆಗಸ್ಟ್​ 18ರಂದು ಟ್ರಿನಿಡಾಡ್​ ಮತ್ತು ಟೊಬಾಗೊದ ಎರಡು ಸ್ಟೇಡಿಯಂನಲ್ಲಿ ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.