ಜಮೈಕಾ: ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ನೇತೃತ್ವದ ಟ್ರೆಂಬ್ಯಾಗೋ ನೈಟ್ ರೈಡರ್ಸ್ 2019ರ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ 267 ರನ್ ದಾಖಲಿಸಿ ಟಿ-20 ಇತಿಹಾಸದಲ್ಲಿ 3ನೇ ಗರಿಷ್ಠ ದಾಖಲೆ ನಿರ್ಮಿಸಿದೆ.
ಶನಿವಾರ ನಡೆದ ಪಂದ್ಯದಲ್ಲಿ ಟಿಕೆಆರ್ ತಂಡ ಜಮೈಕಾ ತಲೈವಾಸ್ ವಿರುದ್ಧ 267 ರನ್ ಗಳಿಸುವ ಮೂಲಕ ಸಿಪಿಎಲ್ ಇತಿಹಾಸದಲ್ಲಿ ಗರಿಷ್ಠ ರನ್ ದಾಖಲಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ ಟಿಕೆಆರ್ ತಂಡಕ್ಕೆ ಲೆಂಡ್ಲ್ ಸಿಮ್ಮನ್ಸ್ 42 ಎಸೆತಗಳಲ್ಲಿ 86, ಕಾಲಿನ್ ಮನ್ರೊ 50 ಎಸೆತಗಳಲ್ಲಿ 96, ಕೀರನ್ ಪೊಲಾರ್ಡ್ 17 ಎಸೆತಗಳಲ್ಲಿ 45 ರನ್ ಗಳಿಸಿ ಈ ದಾಖಲೆಗೆ ನೆರವಾದರು.
-
#TKR - 267/2, 20 overs
— TrinbagoKnightRiders (@TKRiders) September 14, 2019 " class="align-text-top noRightClick twitterSection" data="
Highest score in #CPL
Highest score in the history of #TKR franchise
Highest T20 score at Sabina Park
3rd highest T20 score!
What more do we say about this performance❓#JTvTKR #LandOfChampions #TKR #PlayFightWinRepeat #CPL19
">#TKR - 267/2, 20 overs
— TrinbagoKnightRiders (@TKRiders) September 14, 2019
Highest score in #CPL
Highest score in the history of #TKR franchise
Highest T20 score at Sabina Park
3rd highest T20 score!
What more do we say about this performance❓#JTvTKR #LandOfChampions #TKR #PlayFightWinRepeat #CPL19#TKR - 267/2, 20 overs
— TrinbagoKnightRiders (@TKRiders) September 14, 2019
Highest score in #CPL
Highest score in the history of #TKR franchise
Highest T20 score at Sabina Park
3rd highest T20 score!
What more do we say about this performance❓#JTvTKR #LandOfChampions #TKR #PlayFightWinRepeat #CPL19
ಟಿ-20 ಕ್ರಿಕೆಟ್ ಇತಿಹಾಸದಲ್ಲಿ ಟಿಕೆಆರ್ ತಂಡ 267 ರನ್ ಗಳಿಸಿದ 3ನೇ ಸ್ಥಾನ ಪಡೆದಿದ್ದರೆ, ಅಫ್ಘಾನಿಸ್ತಾನ ತಂಡ ಐರ್ಲೆಂಡ್ ವಿರುದ್ಧ ಇದೇ ವರ್ಷ 278 ರನ್ ಗಳಿಸಿದ್ದು ಟಿ-20ಯ ಗರಿಷ್ಠ ಸ್ಕೋರ್ ಆಗಿದೆ. 2ನೇ ಸ್ಥಾನದಲ್ಲಿರುವ ಜೆಕ್ ಗಣರಾಜ್ಯ ಟರ್ಕಿ ವಿರುದ್ಧ 278 ರನ್ ಗಳಿಸಿ 2ನೇ ಸ್ಥಾನ ಅಲಂಕರಿಸಿದೆ.
ಈ ಪಂದ್ಯವನ್ನು ಟಿಕೆಆರ್ ತಂಡ ಜಮೈಕಾ ತಂಡವನ್ನು 41 ರನ್ಗಳಿಂದ ಮಣಿಸಿತು. ಜಮೈಕಾ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 226 ರನ್ ಗಳಿಸಿತು.