ETV Bharat / sports

ಲಾಕ್​​​​ಡೌನ್ ಎರಡು ಅಲಗಿನ​ ಕತ್ತಿ ಇದ್ದಂಗೆ: ಮೊಹಮ್ಮದ್ ಶಮಿ - ಲಾಕ್ ಡೌನ್ ಕುರಿತು ಮೊಹಮ್ಮದ್ ಶಮಿ ಪ್ರತಿಕ್ರಿಯೆ

ಶಾಹಸ್ಪುರದ ಪೂರ್ವಜರ ಮನೆಯಲ್ಲಿ ವಿರಾಮ ಪಡೆದುಕೊಳ್ಳುತ್ತಿದ್ದೇನೆ. ಇಲ್ಲೇ ತರಬೇತಿ ಪಡೆಯುತ್ತ ಮಹಾನಗರಗಳಲ್ಲಿ ವಾಸಿಸುತ್ತಿರುವ ಇತರ ಆಟಗಾರರಿಗಿಂತ ಅನುಕೂಲದಲ್ಲಿದ್ದೇನೆ ಎಂದು ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ತಿಳಿಸಿದ್ದಾರೆ.

Mohammad Shami
ಮೊಹಮ್ಮದ್ ಶಮಿ
author img

By

Published : Jul 10, 2020, 11:20 AM IST

ನವದೆಹಲಿ : ಕೊರೊನಾ ಲಾಕ್​​​​ಡೌನ್ ಆಟಗಾರರಿಗೆ ವಿರಾಮ ನೀಡಿ ಫಿಟ್​ ಆಗಲು ಸಾಕಷ್ಟು ಸಮಯ ನೀಡಬಹುದು, ಆದರೆ, ದೀರ್ಘ ಕಾಲದ ವಿರಾಮ ಆಟಗಾರರ ಲಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಲಾಕ್​​​​ಡೌನ್​ ಒಂದು ರೀತಿಯಲ್ಲಿ ಡಬಲ್ ಎಡ್ಜ್​ ಕತ್ತಿ ಇದ್ದ ಹಾಗೆ ಎಂದು ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಅಭಿಪ್ರಾಯಪಟ್ಟಿದ್ದಾರೆ.

ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಶಮಿ, ಶಾಹಸ್ಪುರದ ಪೂರ್ವಜರ ಮನೆಯಲ್ಲಿ ವಿರಾಮ ಪಡೆದುಕೊಳ್ಳುತ್ತಿದ್ದೇನೆ. ಇಲ್ಲೇ ತರಬೇತಿ ಪಡೆಯುತ್ತ ಮಹಾನಗರಗಳಲ್ಲಿ ವಾಸಿಸುತ್ತಿರುವ ಇತರ ಆಟಗಾರರಿಗಿಂತ ಅನುಕೂಲದಲ್ಲಿದ್ದೇನೆ ಎಂದು ಹೇಳಿದ್ದಾರೆ.

ಭಾರತೀಯ ತಂಡವು ಯಾವಾಗಲೂ ಪ್ಯಾಕ್​ ಮಾಡಿದ ವೇಳಾ ಪಟ್ಟಿಯನ್ನು ಹೊಂದಿರುತ್ತದೆ. ಆದರೆ ಇಲ್ಲಿ ವಿರಾಮ ತೆಗೆದುಕೊಂಡು ದೇಹದ ದಣಿವಾರಿಸಲು ಸಾಧ್ಯವಾಗಿದೆ ಎಂದು ಶಮಿ ತಿಳಿಸಿದ್ದಾರೆ. ಸದ್ಯ, ಆಟಗಾರರು ಒಂದೇ ಕಡೆ ಇರುವುದರಿಂದ ಖಂಡಿತವಾಗಿಯೂ ದೇಹಕ್ಕೆ ವಿರಾಮ ಸಿಗುತ್ತದೆ. ಸಾಕಷ್ಟು ತರಬೇತಿ ಪಡೆದುಕೊಂಡು ಫಿಟ್​ ಅಂಡ್​​ ಫೈನ್ ಆಗುತ್ತೀರಿ. ಆದರೆ, ಇನ್ನೊಂದೆಡೆ ಆಟ ಆಡದೇ ಇರುವುದರಿಂದ ಲಯ ಕಳೆದುಕೊಳ್ಳುತ್ತಿದ್ದೀರಿ. ಆದ್ದರಿಂದ ಲಾಕ್​​​ಡೌನ್​ನಿಂದ ಸಾಧಕ ಮತ್ತು ಬಾಧಕ ಎರಡೂ ಇವೆ. ನೀವು ವ್ಯತ್ಯಾಸವನ್ನು ಕಂಡುಕೊಳ್ಳಬಹುದು ಎಂದಿದ್ದಾರೆ.

ಬಿಸಿಸಿಐ ತರಬೇತಿ ಪ್ರಾರಂಭಿಸಿದರೆ, ವಿರಾಮದ ವೇಳೆ ನಾನು ತೆಗೆದುಕೊಂಡ ತರಬೇತಿ ಖಂಡಿತವಾಗಿಯೂ ನನಗೆ ಅನುಕೂಲವಾಗಲಿದೆ. ಅದೃಷ್ಡವಶಾತ್​ ನಾನು ಲಯ ಕಳೆದುಕೊಂಡಿಲ್ಲ ಎಂದು ಶಮಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.