ಲಂಡನ್: ಭಾರತ ತಂಡದ ಮಂಚೂಣಿ ಸ್ಪಿನ್ ಬೌಲರ್ ಆರ್ ಅಶ್ವಿನ್ ಸೇರಿದಂತೆ ಮೂವರು ಆಟಗಾರರು ಕೌಂಟಿ ಚಾಂಪಿಯನ್ಶಿಪ್ನಿಂದ ಹೊರಬಂದಿದ್ದಾರೆ.
ಕೊರೊನಾ ವಿಶ್ವದಾದ್ಯಂತ ಏರಿಕೆಯಾಗಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿಯಿಂದ ಒಲಿಂಪಿಕ್ಸ್, ಐಪಿಎಲ್ ಸೇರಿದಂತೆ ಈಗಾಗಲೇ ಹಲವು ಕ್ರೀಡಾಕೂಟಗಳನ್ನು ಮುಂದೂಡಲಾಗಿದೆ. ಇನ್ನು ಕೆಲವು ಕ್ರೀಡಾಕೂಟಗಳು ರದ್ದಾಗಿವೆ.
-
The Yorkshire County Cricket Club can confirm that the contracts for its three overseas players have been cancelled by mutual consent #OneRose
— Yorkshire CCC (@YorkshireCCC) April 27, 2020 " class="align-text-top noRightClick twitterSection" data="
">The Yorkshire County Cricket Club can confirm that the contracts for its three overseas players have been cancelled by mutual consent #OneRose
— Yorkshire CCC (@YorkshireCCC) April 27, 2020The Yorkshire County Cricket Club can confirm that the contracts for its three overseas players have been cancelled by mutual consent #OneRose
— Yorkshire CCC (@YorkshireCCC) April 27, 2020
ಇದೇ ರೀತಿ ಕೌಂಟಿ ಚಾಂಪಿಯನ್ಶಿಪ್ ಕೂಡ ಮುಂದೂಡಲ್ಪಟ್ಟಿದ್ದು, ಭಾರತ ತಂಡದ ಸ್ಪಿನ್ನರ್ ಆರ್ ಅಶ್ವಿನ್, ದಕ್ಷಿಣ ಆಫ್ರಿಕಾದ ಕೇಶವ್ ಮಹಾರಾಜ್, ಹಾಗೂ ವೆಸ್ಟ್ ಇಂಡೀಸ್ನ ನಿಕೋಲಸ್ ಪೂರನ್ ತಮ್ಮ ಒಪ್ಪಂದವನ್ನು ರದ್ದು ಪಡಿಸಿಕೊಂಡಿದ್ದಾರೆಂದು ಕ್ಲಬ್ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ತಿಳಿಸಿದೆ.
ಚಾಂಪಿಯನ್ಶಿಪ್ನ ಹಲವು ಪಂದ್ಯಗಳು ಉಳಿದಿದ್ದರಿಂದ ಯಾರ್ಕ್ಶೈರ್ ಸ್ಪಿನ್ ವಿಭಾಗಕ್ಕೆ ಅನುಭವಿ ಅಶ್ವಿನ್ ಜೊತೆ ಜನವರಿಯಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಅದೇ ರೀತಿ ವಿಂಡೀಸ್ನ ನಿಕೋಲಸ್ ಪೂರನ್ ಕೂಡ ಮತ್ತೆ ತಂಡ ಸೇರಿಕೊಳ್ಳಲು ಒಪ್ಪಿಕೊಂಡಿದ್ದರು.
ಆದರೆ ಜಗತ್ತಿನಾದ್ಯಂತ ಕೊರೊನಾ ಬಿಕ್ಕಟ್ಟು ತಲೆದೂರಿರುವುದರಿಂದ ಮೂವರು ಆಟಗಾರರೂ ಒಪ್ಪಂದಗಳನ್ನು ರದ್ದು ಮಾಡಿಕೊಂಡಿದ್ದಾರೆ. ಈ ವಿಚಾರನನ್ನು ತಿಳಿಸಿರುವ ಯಾರ್ಕ್ಶೈರ್ ಡೈರೆಕ್ಟರ್ ಆಫ್ ಕ್ರಿಕೆಟ್ , ಮಾರ್ಟಿನ್ ಮೊಕ್ಷನ್, ಆಟಗಾರರು ವೃತ್ತಿಪರರು, ಸನ್ನಿವೇಶವನ್ನು ಅರ್ಥಮಾಡಿಕೊಂಡು ಉತ್ತಮ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.