ಸಿಡ್ನಿ: ಮಂಗಳವಾರ ನಡೆದಿದ್ದ ಪಂದ್ಯದಲ್ಲಿ ಡಿಆರ್‌ಎಸ್ ತೆಗೆದುಕೊಳ್ಳುವ ಮುನ್ನವೇ ಟಿವಿಯಲ್ಲಿ ರಿಪ್ಲೇ ಪ್ರಸಾರ ಮಾಡಿದ್ದಕ್ಕೆ ಸ್ಕ್ರೀನ್ ಮ್ಯಾನೇಜ್ಮೆಂಟ್ ಸಿಬ್ಬಂದಿ ವಿರುದ್ಧ ಕೊಹ್ಲಿ ಅಸಮಾಧಾನ ಹೊರಹಾಕಿದ್ದಾರೆ. ಅವರ ಅತುರದ ಕೆಲಸದಿಂದ ನಾವು ಪಂದ್ಯ ಕಳೆದುಕೊಳ್ಳಬೇಕಾಯಿತು ಎಂದು ಕೊಹ್ಲಿ ಹೇಳಿದ್ದಾರೆ.
ನಟರಾಜನ್ ಎಸೆದಿದ್ದ 11 ಓವರ್ನಲ್ಲಿ ಮ್ಯಾಥ್ಯೂ ವೇಡ್ ವಿರುದ್ಧ ಎಲ್ಬಿಗೆ ಅಪೀಲ್ ಮಾಡಿದ್ದರು. ಆದರೆ ಅಂಪೈರ್ ಔಟ್ಗೆ ನಿರಾಕರಿಸಿದ್ದರಿಂದ ಕೊಹ್ಲಿ ರಿವ್ಯೂವ್ ತೆಗದುಕೊಳ್ಳುವ ವಿಚಾರದಲ್ಲಿ ಬೌಲರ್ ಹಾಗೂ ಕೀಪರ್ ಜೊತೆ ಮಾತನಾಡುತ್ತಿದ್ದರು. ಕೊನೇ ಕ್ಷಣದಲ್ಲಿ ಡಿಆರ್‌ಎಸ್ ಮೊರೆ ಹೋದರು. ಆದರೆ ಅಷ್ಟರಲ್ಲಾಗಲ್ಲೇ ಟಿವಿಯಲ್ಲಿ ರಿಪ್ಲೇ ಪ್ರಸಾರವಾಗಿತ್ತು. ಈ ಕಾರಣದಿಂದ ಕೊಹ್ಲಿ ಮಾಡಿದ ರಿವ್ಯೂವ್ಅನ್ನು ಮೈದಾನದಲ್ಲಿದ್ದ ಅಂಪೈರ್ಗಳು ತಿರಸ್ಕರಿಸಿದರು. ಆ ಸಮಯದಲ್ಲಿ ವೇಡ್ 34 ಎಸೆತಗಳಲ್ಲಿ 50 ರನ್ ಗಳಿಸಿದ್ದರು. ನಂತರ ಜೀವದಾನ ಪಡೆದು ಆ ಮೊತ್ತಕ್ಕೆ ಹೆಚ್ಚು 30 ರನ್ ಸೇರಿಸಿದರು.

ಇದನ್ನು ಓದಿ: ಇಂಗ್ಲೆಂಡ್ ಆಲ್ರೌಂಡರ್ ಬೆನ್ಸ್ಟೋಕ್ಸ್ ತಂದೆ ನಿಧನ
ಈ ಬಗ್ಗೆ ಪ್ರತಿಕ್ರಿಯಿಸಿರುವ ಕೊಹ್ಲಿ ಈ ಡಿಆರ್‌ಎಸ್ ಗೊಂದಲಕ್ಕೆ ಕಾರಣ ಪಂದ್ಯದ ಅಧಿಕಾರಿಗಳು, ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್‌ನಲ್ಲಿ ಈ ರೀತಿಯ ಗೊಂದಲಗಳು ಆಗಬಾರದು ಎಂದು ಕೊಹ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
"ಡಿಆರ್‌ಎಸ್ ಮನವಿ ಮಾಡಲು ತಂಡಕ್ಕೆ 15 ಸೆಕೆಂಡ್‌ಗಳ ಕಾಲಾವಕಾಶವಿರುತ್ತದೆ. ವೇಡ್ ವಿರುದ್ಧ ಎಲ್‌ಬಿಡಬ್ಲ್ಯೂ ಡಿಆರ್‌ಎಸ್ ಪಡೆಯಲು ನಾನು ಆಟಗಾರರ ಜೊತೆಗೆ ಚರ್ಚಿಸುತ್ತಿದ್ದೆ, ಇನ್ನು ಸಮಯವಿದ್ದರೂ ಪರದೆಯಲ್ಲಿ ಅಷ್ಟರಲ್ಲಾಗಲೇ ರಿಪ್ಲೇ ಪ್ರಸಾರವಾಯಿತು. ಈ ಕಾರಣದಿಂದಾಗಿ ಮೈದಾನ ಅಂಪೈರ್ಗಳು ನಮ್ಮ ಡಿಆರ್‌ಎಸ್ ಮನವಿಯನ್ನು ನಿರಾಕರಿಸಿದರು" ಎಂದು ಕೊಹ್ಲಿ ಪಂದ್ಯದ ನಂತರ ನಡೆದ ಮಾಧ್ಯಮಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಈ ಕುರಿತು ನಾನು ಏನು ಮಾಡಬಹುದೆಂದು ಅಂಪೈರ್ ರೊಡ್ ಟಕ್ಕರ್ ಜೊತೆ ಮಾತನಾಡಿದೆ. ಅವರು ಈಗ ಏನು ಮಾಡಲಾಗುವುದಿಲ್ಲ. ಇದು ಟಿವಿ ಅಧಿಕಾರಿಗಳ ತಪ್ಪು ಎಂದರು. ಇಂತಾ ತಪ್ಪುಗಳು ಅತ್ಯುನ್ನತ ಸಂದರ್ಭಗಳಲ್ಲಿ ನಡೆಯಬಾರದೆಂಬುದು ನಮ್ಮ ಭಾವನೆಯಾಗಿದೆ. ಅದರಲ್ಲೂ ನಿರ್ಣಾಯಕ ಪಂದ್ಯಗಳಲ್ಲಿ ಇದು ದೊಡ್ಡ ಪರಿಣಾಮವನ್ನುಂಟು ಮಾಡುತ್ತದೆ. ಟಿವಿ ನಿರ್ವಹಣಕಾರರದಿಂದ ತಪ್ಪಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆಯವುದಿಲ್ಲ ಎಂಬ ಖಾತ್ರಿ ನನಗಿದೆ ಎಂದಿದ್ದಾರೆ.