ETV Bharat / sports

ಮಹಿಳಾ ಟಿ-20 ಫೈನಲ್​​ ಪಂದ್ಯ ವೀಕ್ಷಿಸಲು ಬಂದಿದ್ದ ಓರ್ವನಲ್ಲಿ ಕೊರೊನಾ! - ಇಂಡಿಯಾ ವರ್ಸಸ್​​ ಆಸ್ಟ್ರೇಲಿಯಾ

ಚೀನಾದಲ್ಲಿ ಹರಡಿರುವ ಮಾರಣಾಂತಿಕ ಕೊರೊನಾ ವೈರಸ್‌ ವಿಶ್ವದೆಲ್ಲೆಡೆ ವ್ಯಾಪಿಸುತ್ತಿದ್ದು, ಕಳೆದ ಭಾನುವಾರ ಭಾರತ-ಆಸ್ಟ್ರೇಲಿಯಾ ನಡುವೆ ನಡೆದ ಟಿ-20 ಫೈನಲ್​ ಪಂದ್ಯದಲ್ಲೂ ಓರ್ವ ವ್ಯಕ್ತಿಗೆ ಕೊರೊನಾ ಇತ್ತು ಎಂಬ ಮಾಹಿತಿ ಹೊರಬಿದ್ದಿದೆ.

Coronavirus who watched Women T20 World Cup final

author img

By

Published : Mar 12, 2020, 2:08 PM IST

ಮೆಲ್ಬೋರ್ನ್​: ಮಹಾಮಾರಿ‌ ಕೊರೊನಾ ವೈರಸ್​​ನಿಂದಾಗಿ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ವಿಶ್ವದೆಲ್ಲೆಡೆ ಆತಂಕ ಸೃಷ್ಟಿ ಮಾಡಿದೆ. ಈಗಾಗಲೇ ಭಾರತದಲ್ಲಿ 73 ಮಂದಿಗೆ ಈ ವೈರಸ್​ ತಗುಲಿದ್ದು, ಚೀನಾದಲ್ಲೇ ಬರೋಬ್ಬರಿ 3500ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

  • The MCC, as ground managers of the MCG, is aware that a person who attended the ICC Women’s T20 World Cup Final at the MCG on Sunday March 8 has now been diagnosed with COVID-19.

    Read our full statement here: https://t.co/XkXmMygCPA pic.twitter.com/l9NiBQYXVG

    — Melbourne Cricket Ground (@MCG) March 12, 2020 " class="align-text-top noRightClick twitterSection" data=" ">

ಇದೀಗ ಹೊರ ಬಿದ್ದಿರುವ ಮಾಹಿತಿ ಪ್ರಕಾರ, ಮಾರ್ಚ್​ 8ರಂದು ಭಾರತ-ಆಸ್ಟ್ರೇಲಿಯಾ ನಡುವೆ ನಡೆದಿದ್ದ ವಿಶ್ವಕಪ್​ ಟಿ-20 ಫೈನಲ್​​ ಪಂದ್ಯ ನೋಡಲು ಆಗಮಿಸಿದ್ದ ಓರ್ವ ವ್ಯಕ್ತಿಗೆ ಕೊರೊನಾ ಇರುವುದು ಕನ್ಫರ್ಮ್​ ಆಗಿದೆ. ಆಸ್ಟ್ರೇಲಿಯಾದ ಮೆಲ್ಬೋರ್ನ್​ ಕ್ರಿಕೆಟ್​ ಮೈದಾನದಲ್ಲಿ ನಡೆದಿದ್ದ ಪಂದ್ಯ ವೀಕ್ಷಣೆ ಮಾಡಲು ದಾಖಲೆಯ 85000ಕ್ಕೂ ಹೆಚ್ಚು ಮಂದಿ ಆಗಮಿಸಿದ್ದರು.

ಇದೀಗ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ಮ್ಯಾನೇಜ್‌ಮೆಂಟ್​ ಬೆಚ್ಚಿ ಬೀಳಿಸುವ ಮಾಹಿತಿ ಹೊರ ಹಾಕಿದೆ. ವಿಶ್ವಕಪ್ ಫೈನಲ್ ವೀಕ್ಷಿಸಿದ ವ್ಯಕ್ತಿಯೊಬ್ಬರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಖಚಿತಪಡಿಸಿದೆ. ಆರೋಗ್ಯ ಹಾಗೂ ಮಾನವ ಸೇವೆಗಳ ಇಲಾಖೆಯು (ಡಿಎಚ್‌ಹೆಚ್‌ಎಸ್) ಇದನ್ನು ದೃಢಪಡಿಸಿದೆ. ಕ್ರಿಕೆಟ್​ ಮೈದಾನದಲ್ಲಿ ಉತ್ತರ ಸ್ಟ್ಯಾಂಡ್‌ನಲ್ಲಿ N42 ಸೀಟ್​​​ನಲ್ಲಿ ಸೋಂಕಿತ ವ್ಯಕ್ತಿ ಕುಳಿತುಕೊಂಡಿದ್ದರು ಎಂಬ ಮಾಹಿತಿ ನೀಡಲಾಗಿದ್ದು, ಪಕ್ಕದಲ್ಲಿ ಕುಳಿತುಕೊಂಡವರಿಗೆ ಸೋಂಕು ತಗಲಿರುವ ಪ್ರಮಾಣ ಕಡಿಮೆ ಎಂದು ಹೇಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.