ನವದೆಹಲಿ: ಟೀಮ್ ಇಂಡಿಯಾ ಹಿರಿಯ ವೇಗಿ ಜಸ್ಪ್ರೀತ್ ಬುಮ್ರಾ, ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಜತೆ ಹಸೆಮಣೆ ಏರಲಿದ್ದಾರೆ.
ಸಂಜನಾ ಗಣೇಶನ್ 2014ರ ಮಿಸ್ ಇಂಡಿಯಾ ಫೈನಲಿಸ್ಟ್ ಆಗಿದ್ದವರು. ನಂತರ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ಕ್ರೀಡಾ ಕಾರ್ಯಕ್ರಮದ ನಿರೂಪಕಿಯಾಗಿ ಹೆಸರುವಾಸಿಯಾದರು. ಐಪಿಎಲ್, ಬ್ಯಾಡ್ಮಿಂಟನ್ ಲೀಗ್ ಗಳ ನಿರೂಪಣೆ ಮಾಡಿದ್ದಾರೆ. 2019ರ ಕ್ರಿಕೆಟ್ ವಿಶ್ವಕಪ್ ವೇಳೆಯೂ ಸ್ಟಾರ್ ಸ್ಪೋರ್ಟ್ಸ್ನಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದ್ದರು.
- " class="align-text-top noRightClick twitterSection" data="
">


ಇದನ್ನೂ ಓದಿ: ಐಪಿಎಲ್ 2021 : ಪಂಜಾಬ್ ಕಿಂಗ್ಸ್ಗೆ ಹೊಸ ಬೌಲಿಂಗ್ ಕೋಚ್ ಆಯ್ಕೆ
‘ನಿಮ್ಮ ಮುಂಬರುವ ವಿವಾಹಕ್ಕೆ ಅಭಿನಂದನೆಗಳು.’ ಎಂದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಜಸ್ಪ್ರೀತ್ ಮುದುವೆ ಸುದ್ದಿಯನ್ನು ನಟ ತಾರಾ ಶರ್ಮಾ ಸಲೂಜಾ ಖಚಿತಪಡಿಸಿದ್ದಾರೆ.
2016 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಜಸ್ಪ್ರೀತ್ ಬುಮ್ರಾ, ಐದು ವರ್ಷಗಳ ಬಳಿಕ ಮೂರೂ ಸ್ವರೂಪದ ಕ್ರಿಕೆಟ್‌ನಲ್ಲಿಯೂ ವಿಶ್ವದ ಅತ್ಯುತ್ತಮ ವೇಗಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಇಂಗ್ಲೆಂಡ್ ಸರಣಿಯ ಕೊನೆಯ ಟೆಸ್ಟ್ನಿಂದ ರಜೆ ಪಡೆದ ಬುಮ್ರಾ, ಮುಂದಿನ ಟಿ20 ಸರಣಿಗೂ ಲಭ್ಯರಾಗುತ್ತಿಲ್ಲ.
ಇದನ್ನೂ ಓದಿ: ನಮ್ಮ ದೋಷಗಳನ್ನು ಸರಿಪಡಿಸಿಕೊಂಡು ಕಣಕ್ಕಿಳಿಯಬೇಕಾಗಿದೆ : ವಿರಾಟ್ ಕೊಹ್ಲಿ
ವರದಿಗಳ ಪ್ರಕಾರ, ಕೇವಲ 20 ಅತಿಥಿಗಳು ಮಾತ್ರ ಗೋವಾದಲ್ಲಿ ನಡೆಯುವ ವಿವಾಹ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಬುಮ್ರಾ ಮತ್ತು ಸಂಜನಾ ಇಬ್ಬರೂ ತಮ್ಮ ವಿವಾಹವು ಖಾಸಗಿ ಕಾರ್ಯಕ್ರಮವಾಗಿರಬೇಕೆಂದು ಬಯಸುತ್ತಾರಂತೆ.
ಮಾರ್ಚ್ 14 ಮತ್ತು 15 ರಂದು ಗೋವಾದಲ್ಲಿ ಪ್ರಖ್ಯಾತ ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಅವರೊಂದಿಗೆ ಬುಮ್ರಾ ಸಪ್ತಪದಿ ತುಳಿಯಲಿದ್ದಾರೆ.