ETV Bharat / sports

ಕೋವಿಡ್​ ಸ್ಫೋಟದ ನಡುವೆಯೂ ಅಡಿಲೇಡ್​ನಲ್ಲಿ ಭಾರತದ ವಿರುದ್ಧ ಟೆಸ್ಟ್ ಆಯೋಜಿಸಲು ಬದ್ಧ: ಸಿಎ - ಸಿಎ

ಭಾನುವಾರದಂದು ಕೋವಿಡ್​ ಸೋಂಕಿತರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ ಎಂದು ಸೋಮವಾರ ಸೌತ್​ ಆಸ್ಟ್ರೇಲಿಯಾ ಹೇಳಿಕೆ ಬಿಡುಗಡೆ ಮಾಡಿತ್ತು. ಈ ಘೋಷಣೆಯ ನಂತರ ವೆಸ್ಟರ್ನ್​ ಆಸ್ಟ್ರೇಲಿಯಾ, ಟಸ್ಮೇನಿಯಾ ಮತ್ತು ಉತ್ತರ ಪ್ರಾಂತ್ಯಗಳು ಕ್ವೀನ್ಸ್​ಲ್ಯಾಂಡ್​ನೊಂದಗಿನ ಗಡಿಯನ್ನು ಮುಚ್ಚಿದ್ದು, ಅಡಿಲೇಡ್​ನಿಂದ ಬರುವವರು 14 ದಿನಗಳ ಕಾಲ ಕ್ವಾರಂಟೈನ್​ ಮಅಡಬೇಕೆಂದು ಘೋಷಿಸಿಕೊಂಡಿವೆ..

ಭಾರತ ಮತ್ತು ಆಸ್ಟ್ರೇಲಿಯಾ ಟೆಸ್ಟ್​ ಸರಣಿ
ಭಾರತ ಮತ್ತು ಆಸ್ಟ್ರೇಲಿಯಾ ಟೆಸ್ಟ್​ ಸರಣಿ
author img

By

Published : Nov 17, 2020, 5:39 PM IST

ಮೆಲ್ಬೋರ್ನ್ ​: ಸೌತ್​ ಆಸ್ಟ್ರೇಲಿಯಾದಲ್ಲಿ ಕೋವಿಡ್​-19 ಪ್ರಕರಣಗಳು ದಿಢೀರ್​ ಏರಿಕೆಗೊಂಡಿವೆ. ಆದರೂ ಭಾರತದ ವಿರುದ್ದದ ಡೇ ಅಂಡ್ ನೈಟ್​ ಟೆಸ್ಟ್​ ಆಯೋಜಿಸಲು ನಾವು ಬದ್ಧವಾಗಿದ್ದೇವೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಖಚಿತಪಡಿಸಿದೆ.

ಭಾನುವಾರದಂದು ಕೋವಿಡ್​ ಸೋಂಕಿತರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ ಎಂದು ಸೋಮವಾರ ಸೌತ್​ ಆಸ್ಟ್ರೇಲಿಯಾ ಹೇಳಿಕೆ ಬಿಡುಗಡೆ ಮಾಡಿತ್ತು. ಈ ಘೋಷಣೆಯ ನಂತರ ವೆಸ್ಟರ್ನ್​ ಆಸ್ಟ್ರೇಲಿಯಾ, ಟಸ್ಮೇನಿಯಾ ಮತ್ತು ಉತ್ತರ ಪ್ರಾಂತ್ಯಗಳು ಕ್ವೀನ್ಸ್​ಲ್ಯಾಂಡ್​ನೊಂದಗಿನ ಗಡಿಯನ್ನು ಮುಚ್ಚಿದ್ದು, ಅಡಿಲೇಡ್​ನಿಂದ ಬರುವವರು 14 ದಿನಗಳ ಕಾಲ ಕ್ವಾರಂಟೈನ್​ ಮಾಡಬೇಕೆಂದು ಘೋಷಿಸಿಕೊಂಡಿವೆ.

ಆದರೆ, ಕ್ರಿಕೆಟ್ ಆಸ್ಟ್ರೇಲಿಯಾ ಮಾತ್ರ ಟೆಸ್ಟ್​ ಸರಣಿಯ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದೆ. " ಸೌತ್​ ಆಸ್ಟ್ರೇಲಿಯಾದಲ್ಲಿನ ಸನ್ನಿವೇಶವನ್ನು ಕ್ರಿಕೆಟ್​ ಆಸ್ಟ್ರೇಲಿಯಾ ಮೇಲ್ವಿಚಾರಣೆ ಮಾಡುವುದನ್ನು ಮುಂದುವರೆಸಿದೆ. ಆದರೆ, ಅಡಿಲೇಡ್ ಓವಲ್‌ನಲ್ಲಿ ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಆಯೋಜಿಸಲು ಬದ್ಧವಾಗಿದೆ ಎಂದು ಹೇಳಿಕೆ ಬಿಡುಗಡೆ ಮಾಡಿದೆ.

ಏಕದಿನ ಮತ್ತು ಟಿ20 ಸರಣಿಯ ಭಾಗವಾಗಲಿರುವ ವೆಸ್ಟರ್ನ್​ ಆಸ್ಟ್ರೇಲಿಯಾ, ಟಸ್ಮೇನಿಯಾ, ಕ್ವೀನ್ಸ್​ಲ್ಯಾಂಡ್​ ಭಾಗದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಮಂಗಳವಾ ಸಿಡ್ನಿಗೆ ಪ್ರಯಾಣ ಬೆಳೆಸಲು ಸಿದ್ದರಾಗುತ್ತಿದ್ದಾರೆ ಎಂದು ತಿಳಿಸಿದೆ.

ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ನವೆಂಬರ್ 27,29 ಮತ್ತು ಡಿಸೆಂಬರ್ 2 ರಂದು 2 ಏಕದಿನ ಪಂದ್ಯಗಳನ್ನು, ಡಿಸೆಂಬರ್​ 4.6 ಮತ್ತು 8ರಂದು ಟಿ20 ಪಂದ್ಯಗಳನ್ನು ಆಡಲಿವೆ. ಡಿಸೆಂಬರ್​ 17ರಿಂದ ಬಾರ್ಡರ್​ ಗವಾಸ್ಕರ್​ ಸರಣಿ ಆರಂಭವಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.