ETV Bharat / sports

ಫುಟ್​ಬಾಲ್​ ಶೈಲಿಯಲ್ಲಿ ಕಿಕ್​ಮಾಡಿ ರನ್​ಔಟ್​ ಮಾಡಿದ ಕ್ರಿಸ್ ​ಮೋರಿಸ್

ಐಪಿಎಲ್​ನಲ್ಲಿ ರಾಯಲ್​ ಚಾಲೆಂಜರ್ಸ್​ ತಂಡದಲ್ಲಿರುವ  ಕ್ರಿಸ್ ​ಮೋರಿಸ್​​ ಇಂದು ನಡೆದ ಸಿಡ್ನಿ ಸಿಕ್ಸರ್​ ವಿರುದ್ಧದ ಪಂದ್ಯದಲ್ಲಿ ಅದ್ಭುತ ರನ್​ಔಟ್​ ಮಾಡಿ ನೆರದಿದ್ದ ಅಭಿಮಾನಿಗಳನ್ನು ರಂಜಿಸಿದ್ದಾರೆ.

author img

By

Published : Jan 18, 2020, 6:02 PM IST

Chris Morris Showcases Super Football Skills

ಸಿಡ್ನಿ: ಆಸ್ಟ್ರೇಲಿಯಾ ಬಿಗ್​ಬ್ಯಾಶ್​ ಲೀಗ್​ನಲ್ಲಿ ಸಿಡ್ನಿ ಥಂಡರ್​ ಕ್ರಿಸ್ ​ಮೋರಿಸ್​​ ಅವರ ಫುಟ್​ಬಾಲ್​ ಶೈಲಿಯಲ್ಲಿ ಕಿಕ್​ ಮಾಡುವ ಮೂಲಕ ರನ್​ಔಟ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ಐಪಿಎಲ್​ನಲ್ಲಿ ರಾಯಲ್​ ಚಾಲೆಂಜರ್ಸ್​ ತಂಡದಲ್ಲಿರುವ ಕ್ರಿಸ್ ​ಮೋರಿಸ್​​ ಇಂದು ನಡೆದ ಸಿಡ್ನಿ ಸಿಕ್ಸರ್​ ವಿರುದ್ಧದ ಪಂದ್ಯದಲ್ಲಿ ಅದ್ಭುತ ರನ್​ಔಟ್​ ಮಾಡಿ ನೆರದಿದ್ದ ಅಭಿಮಾನಿಗಳನ್ನು ರಂಜಿಸಿದರು.

ಸಿಡ್ನಿ ಸಿಕ್ಸರ್​ ತಂಡದ ಡೇನಿಯಲ್​ ಹ್ಯೂಜಸ್​ ಅವರು ಚೆಂಡನ್ನು ಡಿಫೆನ್ಸ್​ ಮಾಡಿ ಒಂದು ರನ್​ ಕದಿಯಲು ಪ್ರಯತ್ನಿಸಿದರು. ಆದರೆ ಮತ್ತೊಂದು ಬದಿಯಲ್ಲಿದ್ದ ಬ್ಯಾಟ್ಸ್​ಮನ್​ ಇವರ ಕರೆಗೆ ಬರದಿದ್ದಾಗ ಹಿಂತಿರುಗಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಬೌಲಿಂಗ್​ ಮಾಡಿದ್ದ ಮೋರಿಸ್​ ಚೆಂಡನ್ನು ಕಾಲಿನಲ್ಲಿ ಒದ್ದು ವಿಕೆಟ್​ಗೆ ತಾಗಿಸಿ ರನ್​ಔಟ್​ ಮಾಡಿದರು. ಇವರ ಫುಟ್​ಬಾಲ್​ ಶೈಲಿ ಒದೆತದಿಂದ ಹ್ಯೂಸ್​ ರನ್​ಔಟ್​ ಆದರು. ಈ ವಿಡಿಯೋವನ್ನು ಬಿಬಿಎಲ್​ ತನ್ನ ಅಧಿಕೃತ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದು ಅಭಿಮಾನಿಗಳ ಮೋರಿಸ್​ರ ಸಮಯ ಪ್ರಜ್ಞೆ ಹಾಗೂ ಕಾಲ್ಚಳಕಕ್ಕೆ ಶಹಬ್ಬಾಸ್​ಗಿರಿ ನೀಡಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ ಸಿಡ್ನಿ ಸಿಕ್ಸರ್​ ಕೇವಲ 76 ರನ್​ಗಳಿಗೆ ಆಲೌಟ್ ಆಯಿತು. 77 ರನ್​ಗಳ ಟಾರ್ಗೆಟ್​ ಬೆನ್ನೆತ್ತಿದ ಥಂಡರ್ಸ್ 2 ವಿಕೆಟ್​ ಕಳೆದುಕೊಂಡು ​ 28ರನ್​ ಗಳಿಸಿದ್ದ ವೇಳೆ ಬಂದಿದ್ದರಿಂದ ಡಕ್ವರ್ಥ್​ ಲೂಯಿಸ್​ ನಿಯಮದನ್ವಯ ಥಂಡರ್ಸ್​ 4 ರನ್​ಗಳ ಜಯ ಸಾಧಿಸಿತು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.