ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮಿಂಚು ಹರಿಸುತ್ತಿರುವ ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಇದೀಗ ಟಿ-20 ಕ್ರಿಕೆಟ್ನಲ್ಲಿ ಹೊಸ ದಾಖಲೆ ನಿರ್ಮಾಣ ಮಾಡಿದ್ದು, ಈ ರೆಕಾರ್ಡ್ ಬರೆದಿರುವ ಮೊದಲ ಕ್ರಿಕೆಟಿಗ ಎಂಬ ದಾಖಲೆ ಬರೆದಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 13ನೇ ಆವೃತ್ತಿಯಲ್ಲಿ ಆರಂಭಿಕ 8 ಕ್ರಿಕೆಟ್ ಪಂದ್ಯಗಳ ನಂತರ ಪಂಜಾಬ್ ತಂಡದ ಪರ ಕಣಕ್ಕಿಳಿದಿರುವ ಕ್ರಿಸ್ ಗೇಲ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡ್ತಿದ್ದಾರೆ. ಇಂದಿನ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 8 ಸಿಕ್ಸರ್ ಸಿಡಿಸಿದ್ದು, ಈ ಮೂಲಕ 99 ರನ್ಗಳಿಕೆ ಮಾಡಿದ್ದಾರೆ. ಜತೆಗೆ ಟಿ-20 ಕ್ರಿಕೆಟ್ನಲ್ಲಿ ಸಾವಿರ ಸಿಕ್ಸರ್ ಸಿಡಿಸಿರುವ ದಾಖಲೆ ನಿರ್ಮಿಸಿದ್ದಾರೆ.
-
🐐 One 🐐 thousand 🐐 T20 🐐 sixes 🐐#SaddaPunjab #IPL2020 #KXIP #KXIPvRR @henrygayle pic.twitter.com/vMf9oseXmM
— Kings XI Punjab (@lionsdenkxip) October 30, 2020 " class="align-text-top noRightClick twitterSection" data="
">🐐 One 🐐 thousand 🐐 T20 🐐 sixes 🐐#SaddaPunjab #IPL2020 #KXIP #KXIPvRR @henrygayle pic.twitter.com/vMf9oseXmM
— Kings XI Punjab (@lionsdenkxip) October 30, 2020🐐 One 🐐 thousand 🐐 T20 🐐 sixes 🐐#SaddaPunjab #IPL2020 #KXIP #KXIPvRR @henrygayle pic.twitter.com/vMf9oseXmM
— Kings XI Punjab (@lionsdenkxip) October 30, 2020
41ನೇ ವಯಸ್ಸಿನಲ್ಲಿ ಟಿ-20 ಕ್ರಿಕೆಟ್ನಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡ್ತಿರುವ ಗೇಲ್ ಇಲ್ಲಿಯವರೆಗೆ 410 ಟಿ-20 ಪಂದ್ಯಗಳನ್ನಾಡಿದ್ದಾರೆ. ಇಂದಿನ ಪಂದ್ಯದಲ್ಲಿ ಕೇವಲ 1ರನ್ನಿಂದ ಶತಕ ವಂಚಿತರಾದ ಗೇಲ್ ಚುಟುಕು ಕ್ರಿಕೆಟ್ನಲ್ಲಿ ಸಾವಿರ ಸಿಕ್ಸರ್ ಸಿಡಿಸಿದ್ದಾರೆ. ಗೇಲ್ ಸಿಡಿಸಿರುವ ಸಾವಿರ ಸಿಕ್ಸರ್ಗಳಲ್ಲಿ 105 ಸಿಕ್ಸರ್ ಅಂತಾರಾಷ್ಟ್ರೀಯ ಪಂದ್ಯಗಳಿಂದ, ಐಪಿಎಲ್ನಲ್ಲಿ 345 ಸಿಕ್ಸರ್ ಹಾಗೂ ವಿವಿಧ ಟಿ-20 ಟೂರ್ನಿಗಳಲ್ಲಿ ಉಳಿದ ಸಿಕ್ಸರ್ಗಳು ಮೂಡಿ ಬಂದಿವೆ. ಇನ್ನು ಟಿ-20 ಕ್ರಿಕೆಟ್ನಲ್ಲಿ 22 ಶತಕ ಮತ್ತು 85 ಅರ್ಧಶತಕ ಸಹಿತ 13 ಸಾವಿರಕ್ಕೂ ಅಧಿಕ ರನ್ಗಳಿಸಿದ್ದಾರೆ.
ಟಿ-20ಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರರು
- ಕ್ರಿಸ್ ಗೇಲ್ 1000 ಸಿಕ್ಸರ್
- ಕಿರಾನ್ ಪೊಲಾರ್ಡ್ 690
- ಬ್ರೆಂಡಂ ಮೆಕಲಂ 485
- ಶೇನ್ ವಾಟ್ಸನ್ 467
- ಆಂಡ್ರೋ ರಸೆಲ್ 447
- ಎಬಿಡಿ ವಿಲಿಯರ್ಸ್ 417