ದುಬೈ: ಕಳೆದು ಎರಡು ವಾರಗಳ ಹಿಂದೆ ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಆಗುವ ಮೂಲಕ ತಂಡದ ತರಬೇತಿಯಿಂದ ದೂರ ಉಳಿದಿದ್ದ ಸಿಎಸ್ಕೆ ತಂಡದ ಯುವ ಬ್ಯಾಟ್ಸ್‌ಮನ್ ಋತುರಾಜ್ ಗಾಯಕ್ವಾಡ್ ಪ್ರಸ್ತುತ ಸಂಪೂರ್ಣ ಗುಣಮುಖರಾಗಿದ್ದಾರೆ. ಸೆ.22ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆಯುವ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ತಂಡದ ಅನುಭವಿಗಳಾದ ಸುರೇಶ್ ರೈನಾ ಮತ್ತು ಹರ್ಭಜನ್ ಸಿಂಗ್ರ ಸೇವೆಯನ್ನು ಸಿಎಸ್ಕೆ ತಪ್ಪಿಸಿಕೊಳ್ಳುತ್ತಿದೆ. ಅದರ ಮಧ್ಯೆ ದೀಪಕ್ ಚಹಾರ್ ಮತ್ತು ಋತುರಾಜ್ ಗಾಯಕ್ವಾಡ್ ಕೊರೊನಾ ಪಾಸಿಟಿವ್ ಆದ ಕಾರಣ ತರಬೇತಿಯಿಂದ ಹೊರಬಿದ್ದಿದ್ದರು. ಆರಂಭಿಕ ಪಂದ್ಯಕ್ಕೆ 2 ದಿನಗಳಿರುವಾಗ ದೀಪಕ್ ಚಹಾರ್ ಕೋವಿಡ್-19 ಪರೀಕ್ಷೆಗೊಳಪಟ್ಟು ಮೊದಲ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದರು. ಆದರೆ, ಗಾಯಕ್ವಾಡ್ಗೆ ಪಾಸಿಟಿವ್ ಬಂದಿದ್ದರಿಂದ ಕ್ವಾರಂಟೈನ್ ಮುಂದುವರಿಸಿದ್ದರು.
-
The first thing you wanna see on a Monday morning. Look who's back! 😍 #Ruturaj #WhistlePodu #Yellove pic.twitter.com/GXYIMs1OBx
— Chennai Super Kings (@ChennaiIPL) September 21, 2020 " class="align-text-top noRightClick twitterSection" data="
">The first thing you wanna see on a Monday morning. Look who's back! 😍 #Ruturaj #WhistlePodu #Yellove pic.twitter.com/GXYIMs1OBx
— Chennai Super Kings (@ChennaiIPL) September 21, 2020The first thing you wanna see on a Monday morning. Look who's back! 😍 #Ruturaj #WhistlePodu #Yellove pic.twitter.com/GXYIMs1OBx
— Chennai Super Kings (@ChennaiIPL) September 21, 2020
ಇದೀಗ 23 ವರ್ಷದ ಯುವ ಬ್ಯಾಟ್ಸ್‌ಮನ್ ಎರಡು ಕೋವಿಡ್-19 ಪರೀಕ್ಷೆಗಳಲ್ಲೂ ನೆಗೆಟಿವ್ ಪಡೆಯುವ ಮೂಲಕ ನಿಟ್ಟುಸಿರು ಬಿಟ್ಟಿದ್ದಾರೆ. ಅಂತಿಮವಾಗಿ ಸೋಮವಾರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ತರಬೇತಿ ಕ್ಯಾಂಪ್ಗೆ ಸೇರ್ಪಡೆಗೊಂಡಿದ್ದಾರೆ.
ಇಂಡಿಯಾ ಎ ತಂಡದಲ್ಲಿ ಖಾಯಂ ಸದಸ್ಯನಾಗಿರುವ ಮಹಾರಾಷ್ಟ್ರದ ಬ್ಯಾಟ್ಸ್‌ಮನ್ ಸುರೇಶ್ ರೈನಾ ಅವರ ಸ್ಥಾನ ತುಂಬಲಿದ್ದಾರೆ ಎಂದು ಹೇಳಲಾಗುತ್ತಿದೆ. ಗಾಯಕ್ವಾಡ್ ತಂಡಕ್ಕೆ ಸೇರ್ಪಡೆಗೊಂಡರೆ ಆರಂಭಿಕ ಮುರುಳಿ ವಿಜಯ್ ತಂಡದಿಂದ ಹೊರ ಬೀಳಲಿದ್ದಾರೆ. ನಂತರ ಡುಪ್ಲೆಸಿಸ್ ಅಥವಾ ರಾಯುಡು ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ.