ETV Bharat / sports

ಮ್ಯಾಚ್​ ಸೋತರು ಟಿ-20 ಕ್ರಿಕೆಟ್​ನಲ್ಲಿ ವಿಶ್ವದಾಖಲೆ ಬರೆದ ಶ್ರೀಲಂಕಾ ಆಟಗಾರ್ತಿ!

ಎರಡು ದಿನಗಳ ಹಿಂದೆಯಷ್ಟೇ ನೇಪಾಳ ತಂಡದ ನಾಯಕ ಪರಾಸ್​ ಖಡ್ಕ ಟಿ-20 ಕ್ರಿಕೆಟ್​ನಲ್ಲಿ ಸಿಂಗಾಪುರ​ ವಿರುದ್ಧ ಚೇಸಿಂಗ್​ ವೇಳೆ ಶತಕ ಬಾರಿಸಿದ ಮೊದಲ ನಾಯಕ ಎಂಬ ದಾಖಲೆಗೆ ಪಾತ್ರರಾಗಿದ್ದರು. ಇದೀಗ ಲಂಕಾ ತಂಡದ ನಾಯಕ ಚಾಮರಿ ಅಟಪಟ್ಟು ಚೇಸಿಂಗ್​ ವೇಳೆ ಶತಕ ಸಿಡಿಸಿದ ವಿಶ್ವದ ಮೊದಲ ಮಹಿಳಾ ತಂಡದ ನಾಯಕಿ ಎಂಬ ವಿಶ್ವದಾಖಲೆಗೆ ಪಾತ್ರರಾದರು.

chamari atapattu
author img

By

Published : Sep 30, 2019, 1:08 PM IST

ಸಿಡ್ನಿ: ಶ್ರೀಲಂಕಾ ಮಹಿಳಾ ತಂಡದ ನಾಯಕ ಚಾಮರಿ ಅಟಪಟ್ಟು ಆಸ್ಟ್ರೇಲಿಯ ವನಿತೆಯರ ವಿರುದ್ಧ ನಡೆದ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಹೌದು ಎರಡು ದಿನಗಳ ಹಿಂದೆಯಷ್ಟೇ ನೇಪಾಳ ತಂಡದ ನಾಯಕ ಪರಾಸ್​ ಖಡ್ಕ ಟಿ -20 ಕ್ರಿಕೆಟ್​ನಲ್ಲಿ ಸಿಂಗಾಪುರ್​ ವಿರುದ್ಧ ಚೇಸಿಂಗ್​ ವೇಳೆ ಶತಕ ಬಾರಿಸಿದ ಮೊದಲ ನಾಯಕ ಎಂಬ ದಾಖಲೆಗೆ ಪಾತ್ರರಾಗಿದ್ದರು. ಇದೀಗ ಲಂಕಾ ತಂಡದ ನಾಯಕ ಚಾಮರಿ ಅಟಪಟ್ಟು ಚೇಸಿಂಗ್​ ವೇಳೆ ಶತಕ ಸಿಡಿಸಿದ ವಿಶ್ವದ ಮೊದಲ ಮಹಿಳಾ ತಂಡದ ನಾಯಕಿ ಎಂಬ ವಿಶ್ವದಾಖಲೆಗೆ ಪಾತ್ರರಾದರು.

ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ಆರಂಭಿಕ ಆಟಗಾರ್ತಿ ಬೆತ್​ ಮೋನಿ (113) ಅವರ ಶತಕದ ನೆರವಿನಿಂದ 217 ರನ್​ಗಳ ಬೃಹತ್​ ಮೊತ್ತ ದಾಖಲಿಸಿತ್ತು. ಮೋನಿ 61 ಎಸೆತಗಳಲ್ಲಿ 20 ಬೌಂಡರಿ ಬಾರಿಸಿದ್ದರು.

218 ರನ್​ಗಳ ಬೃಹತ್​ ಮೊತ್ತ ಬೆನ್ನಟ್ಟಿದ ಲಂಕಾ 20 ಓವರ್​ಗಳಲ್ಲಿ 176 ರನ್​ಗಳನ್ನಷ್ಟೇ ಗಳಿಸಲು ಶಕ್ತವಾಗಿ 41 ರನ್​ಗಳ ಸೋಲನಭವಿಸಿತು. ಆದರೆ, ಲಂಕಾ ನಾಯಕಿ ಚಾಮರಿ ಅಟಪಟ್ಟು 66 ಎಸೆತಗಳಲ್ಲಿ 12 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸರ್​ ನೆರವಿನಿಂದ 116 ರನ್​ಗಳಿಸಿ ಏಕಾಂಗಿ ಹೋರಾಟ ನಡೆಸಿದರು.

ಚಾಮರಿ ಅಟಪಟ್ಟು ವಿಶ್ವದಾಖಲೆಯ ಶತಕದ ಹೊರತಾಗಿಯೂ ಲಂಕಾ ತಂಡ 20 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 176 ರನ್​ಗಳಿಗೆ ಸೀಮಿತವಾಯಿತು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.