ETV Bharat / sports

ಚಾಮರಿ ಅಟಪಟ್ಟು ಅಬ್ಬರ: 146 ರನ್​ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿದ ಸೂಪರ್ ನೋವಾಸ್

ಪ್ರಿಯಾ ಪೂನಿಯಾ ಅವರ 30 ರನ್​ ಹಾಗೂ ಅಟಪಟ್ಟು ಅವರ 67 ರನ್​ಗಳ ನೆರವಿನಿಂದ ಸೂಪರ್ ನೋವಾಸ್​ 146 ರನ್​ಗಳಿಸಿದೆ.

ಜಿಯೋ ವುಮೆನ್ಸ್ ಟಿ20 ಚಾಲೆಂಜ್
ಜಿಯೋ ವುಮೆನ್ಸ್ ಟಿ20 ಚಾಲೆಂಜ್
author img

By

Published : Nov 7, 2020, 9:38 PM IST

ಶಾರ್ಜಾ: ಫೈನಲ್​ ಪ್ರವೇಶಿಸಲು ಗೆಲ್ಲಲೇಬೇಕಾದ ಪಂದ್ಯದಲ್ಲಿ ಸೂಪರ್ ನೋವಾಸ್​ ತಂಡದ ಬ್ಯಾಟರ್​ಗಳು ಉತ್ತಮ ಪ್ರದರ್ಶನ ತೋರಿದ್ದು, ಟ್ರೈಲ್ ಬ್ಲೇಜರ್ಸ್​ ತಂಡಕ್ಕೆ 147 ರನ್​ಗಳ ಟಾರ್ಗೆಟ್ ನೀಡಿದೆ.

ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಸೂಪರ್ ನೋವಾಸ್​ ತಂಡಕ್ಕೆ ಪ್ರಿಯಾ ಪೂನಿಯಾ(30) ಮತ್ತು ಚಾಮರಿ ಅಟಪಟ್ಟು ಮೊದಲ ವಿಕೆಟ್​ಗೆ 89 ರನ್​ಗಳ ಜೊತೆಯಾಟ ನೀಡಿದರು.

37 ಎಸೆತಗಳಲ್ಲಿ 3 ಬೌಂಡರಿ ಸಹಿತ ಪ್ರಿಯ 30 ರನ್​ಗಳಿಸಿದರೆ, ಅಟಪಟ್ಟು 48 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್​ ಸಹಿತ 67 ರನ್​ಗಳಿಸಿದರು. ನಾಯಕಿ ಹರ್ಮನ್​ಪ್ರೀತ್ ಕೌರ್​ 29 ಎಸೆತಗಳಲ್ಲಿ 31 ರನ್​ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.

ಟ್ರೈಲ್​ಬ್ಲೇಜರ್ಸ್​ ತಂಡದ ಪರ ಜೂಲನ್ ಗೋಸ್ವಾಮಿ 17ಕ್ಕೆ1, ಸಲ್ಮಾ ಖತುನ್ 25ಕ್ಕೆ 1 ಹಾಗೂ ಹರ್ಲಿನ್ ಡಿಯೋಲ್ 34ಕ್ಕೆ 1 ವಿಕೆಟ್ ಪಡೆದು ಮಿಂಚಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.