ETV Bharat / sports

ಲೈವ್ ಕ್ರಿಕೆಟ್​​ ಪಂದ್ಯಗಳ ವೇಳೆ ಡ್ರೋಣ್​ ಬಳಕೆಗೆ ಅನುಮತಿ ನೀಡಿದ ಕೇಂದ್ರ ಸರ್ಕಾರ

author img

By

Published : Feb 8, 2021, 7:18 PM IST

ಡ್ರೋಣ್​ ಬಳಕೆಗೆ ಅನುಮತಿ ನೀಡುವುದು ದೇಶದಲ್ಲಿ ಡ್ರೋಣ್​ ವಾಣಿಜ್ಯ ಬಳಕೆ ಉತ್ತೇಜಿಸುವ ಭಾರತ ಸರ್ಕಾರದ ಉದ್ದೇಶಗಳಿಗೆ ಅನುಗುಣವಾಗಿರುತ್ತದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಂಬರ್ ದುಬೆ ತಿಳಿಸಿದ್ದಾರೆ..

Centre grants permission to BCCI to use drones
ಡ್ರೋಣ್​ ಬಳಕೆಗೆ ಬಿಸಿಸಿಐಗೆ ಅನುಮತಿ ನೀಡಿದ ಕೇಂದ್ರ ಸರ್ಕಾರ

ನವದೆಹಲಿ : 2021ರ ಆವೃತ್ತಿಯ ಕ್ರಿಕೆಟ್​ ಪಂದ್ಯಗಳ ವೇಳೆ ಡ್ರೋಣ್​ ಬಳಕೆ ಮಾಡಿ ಲೈವ್​ ಪಂದ್ಯಗಳ ಚಿತ್ರೀಕರಣಕ್ಕೆ ಬಿಸಿಸಿಐ ಮಾಡಿದ್ದ ಮನವಿಯನ್ನು ಸ್ವೀಕರಿಸಿರುವ ನಾಗರಿಕ ವಿಮಾನಯಾನ ಸಚಿವಾಲಯ(MoCA) ಮತ್ತು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ(DGCA)ಗಳು ಷರತ್ತು ಬದ್ಧ ಅನುಮತಿ ನೀಡಿವೆ.

ಬಿಸಿಸಿಐ ಲೈವ್ ವೈಮಾನಿಕ ಚಿತ್ರೀಕರಣಕ್ಕಾಗಿ ರಿಮೋಟ್​ ಪೈಲಟ್ ಏರ್​ಕ್ರಾಫ್ಟ್​ ಸಿಸ್ಟಮ್​ (ಆರ್‌ಪಿಎಎಸ್) ಬಳಕೆ ಮಾಡುವುದಕ್ಕೆ MoCA ಅನುಮತಿ ಕೇಳಿತ್ತು. ಡ್ರೋಣ್​ ಪರಿಸರ ವ್ಯವಸ್ಥೆ ನಮ್ಮ ದೇಶದಲ್ಲಿ ವಿಕಸನಗೊಳ್ಳುತ್ತಿದೆ. ಇದರ ಬಳಕೆ ಕೃಷಿ, ಗಣಿಗಾರಿಕೆ, ಆರೋಗ್ಯ ಮತ್ತು ವಿಪತ್ತು ನಿರ್ವಹಣೆ ಕ್ಷೇತ್ರಗಳಿಂದ ಇದೀಗ ಕ್ರೀಡೆ ಮತ್ತು ಮನರಂಜನೆಗೆ ವಿಸ್ತರವಾಗುತ್ತಿದೆ.

ಡ್ರೋಣ್​ ಬಳಕೆಗೆ ಅನುಮತಿ ನೀಡುವುದು ದೇಶದಲ್ಲಿ ಡ್ರೋಣ್​ ವಾಣಿಜ್ಯ ಬಳಕೆ ಉತ್ತೇಜಿಸುವ ಭಾರತ ಸರ್ಕಾರದ ಉದ್ದೇಶಗಳಿಗೆ ಅನುಗುಣವಾಗಿರುತ್ತದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಂಬರ್ ದುಬೆ ತಿಳಿಸಿದ್ದಾರೆ. 2021ರ ಡ್ರೋಣ್ ಬಳಕೆಯ ನಿಮಗಳ ಬಗ್ಗೆ ಕಾನೂನು ಸಚಿವಾಲಯದ ಜೊತೆಗೆ ಚರ್ಚೆ ಅಂತಿಮ ಹಂತದಲ್ಲಿದೆ. ಮಾರ್ಚ್​ 2021ರ ವೇಳೆಗೆ ಅನುಮೋದನೆಗಳನ್ನು ಸ್ವೀಕರಿಸುವ ಆಶಯದಲ್ಲಿ ನಾವಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಬಿಸಿಸಿಐಗೆ 2021 ಡಿಸೆಂಬರ್​ 31ರವರೆಗೆ ಡ್ರೋಣ್​ ಬಳಕೆಗೆ ಅನುಮತಿ ನೀಡಲಾಗಿದೆ. ಇದಕ್ಕಾಗಿ ಕೆಲವು ಷರುತ್ತಗಳು ಮತ್ತು ಮಿತಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ತಿಳಿಸಿದೆ. ಒಂದು ವೇಳೆ ಷರತ್ತಿನ ಉಲ್ಲಂಘನೆಯಾದಲ್ಲಿ ಅನುಮತಿ ಅನೂರ್ಜಿತಗೊಳಿಸಲಾಗುವುದು ಎಂದು ಬಿಸಿಸಿಐಗೆ ನಾಗರಿಕ ವಿಮಾನಯಾನ ಸಚಿವಾಲಯ(MoCA) ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(DGCA)ಗಳು ಎಚ್ಚರಿಕೆ ನೀಡಿವೆ.

ಬಿಸಿಸಿಐ ಡ್ರೋಣ್​ ಬಳಕೆಗೂ ಮೊದಲು ಸ್ಥಳೀಯ ಆಡಳಿತ(ಬಿ), ರಕ್ಷಣಾ ಸಚಿವಾಲಯ (ಸಿ) ಗೃಹ ವ್ಯವಹಾರ ಸಚಿವಾಲಯದಿಂದ ಬಿಸಿಸಿಐ ಅಗತ್ಯ ಅನುಮತಿಗಳನ್ನು ಪಡೆಯಬೇಕಿದೆ. ಜೊತೆಗೆ ಆರ್‌ಪಿಎಎಸ್ ಕಾರ್ಯಾಚಾರಣೆಗೂ ಮುನ್ನ ಮೊದಲು ಭಾರತೀಯ ವಾಯುಪಡೆ ಮತ್ತು (ಇ) ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾದಿಂದ ಅನುಮತಿ ಪಡೆಯಬೇಕಿರುತ್ತದೆ.

ಇದನ್ನು ಓದಿ:ಚೆನ್ನೈ ಟೆಸ್ಟ್​ ಗೆಲ್ಲಲು ಬೇಕು 381ರನ್..​ ಕೊಹ್ಲಿ ಪಡೆಯಿಂದ 2008ರ ಸಾಧನೆ ಮರುಕಳಿಸುವುದೇ!?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.