ಕೊಲೊಂಬೊ : ಶ್ರೀಲಂಕಾ ಕ್ರಿಕೆಟಿಗ ಕುಸಾಲ್ ಮೆಂಡಿಸ್ ಅವರ ಕಾರು ಸೈಕಲ್ನಲ್ಲಿ ತೆರಳುತ್ತಿದ್ದ 74 ವರ್ಷದ ವೃದ್ಧನಿಗೆ ಗುದ್ದಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದರು.
ವಾಹನ ಚಲಾಯಿಸಿ ಪಾದಚಾರಿ ಸಾವಿಗೆ ಕಾರಣರಾಗಿದ್ದಕ್ಕಾಗಿ ಕುಸಾಲ್ ಮೆಂಡಿಸ್ರನ್ನು ಭಾನುವಾರ ಸ್ಥಳೀಯ ಪೊಲೀಸರು ಬಂಧಿಸಿದ್ದರು. ನಂತರ ಅವರನ್ನು ಮ್ಯಾಜಿಸ್ಟ್ರೇಟ್ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ಶ್ರೀಲಂಕಾದ ಡೈಲಿ ಮಿರರ್ ಮಾಧ್ಯಮ ಸಿಸಿಟಿವಿ ಅಪಘಾತದ ಸಿಸಿಟಿವಿ ವಿಡಿಯೋವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಕುಸಾಲ್ ಮೆಂಡಿಸ್ ಸೈಕಲ್ಗೆ ಡಿಕ್ಕಿ ಹೊಡೆದ ದೃಶ್ಯ ಹಾಗೂ ನಂತರ ಸೈಕಲ್ ನಜ್ಜು-ಗುಜ್ಜಾಗಿರುವುದು, ಕಾರಿನ ಮುಂಭಾಗ ಕೂಡ ಹಾನಿಯಾಗಿರುವುದು ಸ್ಪಷ್ಟವಾಗಿದೆ.
-
Cricketer Kusal Mendis was arrested following an accident involving his vehicle that killed a man at Horethuduwa, Panadura early this morning #DailyMirror #NewsUpdates #lka #SriLanka pic.twitter.com/BgeF56fizf
— DailyMirror (@Dailymirror_SL) July 5, 2020 " class="align-text-top noRightClick twitterSection" data="
">Cricketer Kusal Mendis was arrested following an accident involving his vehicle that killed a man at Horethuduwa, Panadura early this morning #DailyMirror #NewsUpdates #lka #SriLanka pic.twitter.com/BgeF56fizf
— DailyMirror (@Dailymirror_SL) July 5, 2020Cricketer Kusal Mendis was arrested following an accident involving his vehicle that killed a man at Horethuduwa, Panadura early this morning #DailyMirror #NewsUpdates #lka #SriLanka pic.twitter.com/BgeF56fizf
— DailyMirror (@Dailymirror_SL) July 5, 2020
ಕುಸಾಲ್ ಮೆಂಡಿಸ್ ಅಪಘಾತಕ್ಕೆ ಕಠಿಣ ಶಿಕ್ಷೆಯನ್ನು ಎದುರಿಸಬೇಕಾಗಿದೆ. 2003ರಲ್ಲಿ ಶ್ರೀಲಂಕಾದ ಮಾಜಿ ಲೆಗ್ ಸ್ಪಿನ್ನರ್ ಕೌಶಲ್ ಲೋಕುವಾರ್ಚಿ ಪಾದಚಾರಿಗೆ ಡಿಕ್ಕಿ ಹೊಡೆದು ಆತನ ಸಾವಿಗೆ ಕಾರಣವಾಗಿದ್ದಕ್ಕೆ 4 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿತ್ತು.
ಸದ್ಯಕ್ಕೆ ಸೋಮವಾರ ಬೇಲ್ ಮೇಲೆ ಕುಸಾಲ್ ಮೆಂಡಿಸ್ ಬಿಡುಗಡೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಕೋವಿಡ್ 19 ವಿರಾಮದ ನಂತರ ಶ್ರೀಲಂಕಾ ಕ್ರಿಕೆಟ್ ಮಂಡಳಿ ತರಬೇತಿ ಆರಂಭಿಸಿತ್ತು. ಆ ತಂಡದಲ್ಲಿ ಮೆಂಡಿಸ್ ಕೂಡ ಅವಕಾಶ ಪಡೆದಿದ್ದರು.