ಫ್ಲೋರಿಡಾ: ಕೆರಿಬಿಯನ್ನರನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದ ಟೀಂ ಇಂಡಿಯಾ ಮೊದಲ ಟಿ-20 ಕ್ರಿಕೆಟ್ ಪಂದ್ಯದಲ್ಲಿ 4 ವಿಕೆಟ್ಗಳ ಜಯ ಸಾಧಿಸಿದ್ದು, ಪಾದಾರ್ಪಣೆ ಪಂದ್ಯದಲ್ಲೇ ಮಿಂಚಿದ ಯುವ ವೇಗಿ ನವದೀಪ್ ಸೈನಿ ಪ್ರದರ್ಶನಕ್ಕೆ ನಾಯಕ ವಿರಾಟ್ ಕೊಹ್ಲಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಅಮೆರಿಕದ ಫ್ಲೋರಿಡಾದಲ್ಲಿ ನಡೆದ ಮೊದಲ ಟಿ-20 ಪಂದ್ಯದಲ್ಲಿ ಭಾರತೀಯ ಬೌಲಿಂಗ್ ದಾಳಿಗೆ ತತ್ತರಿಸಿದ ವಿಂಡೀಸ್ 20 ಓವರ್ಗಳಲ್ಲಿ ಕೇವಲ 95 ರನ್ಗೆ ಕುಸಿಯಿತು. ಭಾರತದ ಪರ ಮೊದಲ ಅಂತಾರಾಷ್ಟ್ರೀಯ ಪಂದ್ಯವಾಡಿದ ವೇಗದ ಬೌಲರ್ ಸೈನಿ 3 ವಿಕೆಟ್ (4-1-17-3) ಪಡೆದು ಮಿಂಚಿದರು. ಅಲ್ಲದೆ ಸೈನಿ ಟಿ-20 ಕ್ರಿಕೆಟ್ ಇತಿಹಾಸದಲ್ಲಿ ಕೊನೆಯ ಓವರ್ ಮೇಡನ್ ಸಾಧಿಸಿದ ಮೊದಲ ಭಾರತೀಯ ಬೌಲರ್ ಹಾಗೂ ವಿಶ್ವದ 4ನೇ ಬೌಲರ್ ಎನಿಸಿಕೊಂಡಿದ್ದಾರೆ.
-
Innings Break!
— BCCI (@BCCI) August 3, 2019 " class="align-text-top noRightClick twitterSection" data="
A three-wkt haul for Saini as #TeamIndia bowlers restrict West Indies to a total of 95/9 after 20 overs.#WIvIND pic.twitter.com/MMn9drOxh1
">Innings Break!
— BCCI (@BCCI) August 3, 2019
A three-wkt haul for Saini as #TeamIndia bowlers restrict West Indies to a total of 95/9 after 20 overs.#WIvIND pic.twitter.com/MMn9drOxh1Innings Break!
— BCCI (@BCCI) August 3, 2019
A three-wkt haul for Saini as #TeamIndia bowlers restrict West Indies to a total of 95/9 after 20 overs.#WIvIND pic.twitter.com/MMn9drOxh1
ಪಂದ್ಯದ ಬಳಿಕ ಮಾತನಾಡಿದ ವಿರಾಟ್, ನವದೀಪ್ ಸೈನಿ ಒಬ್ಬ ಪ್ರತಿಭಾನ್ವಿತ ಬೌಲರ್. ವೇಗವಾಗಿ ಬೌಲಿಂಗ್ ಮಾಡುವ ಸಾಮರ್ಥ್ಯ ಅವರಿಗಿದೆ. 150 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡುವವರಲ್ಲಿ ನವದೀಪ್ ಕೂಡ ಒಬ್ಬರಾಗಿದ್ದಾರೆ. ಸೈನಿ ದೈಹಿಕವಾಗಿ ಫಿಟ್ ಆಗಿದ್ದು, ಅವರಷ್ಟು ವೇಗವಾಗಿ ಬೌಲ್ ಮಾಡುವವರು ತಂಡದಲ್ಲಿಲ್ಲ. ಸ್ವಂತ ಪ್ರತಿಭೆಯಿಂದಲೇ ಮುಂದೊಂದು ದಿನ ಖ್ಯಾತಿ ಗಳಿಸುವ ಶಕ್ತಿ ಸೈನಿಯವರಲ್ಲಿದೆ. ಅವರಲ್ಲಿನ ಆಸಕ್ತಿಯು ಉತ್ತಮ ಬೌಲರ್ ಆಗಿ ರೂಪುಗೊಳಿಸಲಿದೆ ಎಂದು ವಿರಾಟ್ ಯುವ ಬೌಲರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹಾಗೆಯೇ ತಂಡದ ಬೌಲಿಂಗ್ ಹಾಗೂ ಫೀಲ್ಡಿಂಗ್ ಚೆನ್ನಾಗಿತ್ತು. ಅಲ್ಲದೆ ಪಿಚ್ನಲ್ಲಿ ಬ್ಯಾಟಿಂಗ್ ಮಾಡುವುದು ಸುಲಭವಾಗಿರಲಿಲ್ಲ. ಮುಂದಿನ ಪಂದ್ಯದಲ್ಲಿ ಇಡೀ ತಂಡ ಗೆಲುವಿಗೆ ಕೊಡುಗೆ ನೀಡುವತ್ತ ಗಮನಹರಿಸಲಿದೆ. ಕಳೆದ ಮೂರು ದಿನಗಳಿಂದ ಮಳೆಯಾಗಿದ್ದರೂ ಕೂಡ ಪಂದ್ಯಕ್ಕೆ ಮೈದಾನವನ್ನು ಸಿದ್ಧಗೊಳಿಸುವಲ್ಲಿ ಸಿಬ್ಬಂದಿಯು ಉತ್ತಮ ಕೆಲಸ ಮಾಡಿದ್ದಾರೆ ಎಂದು ಹೇಳಿದರು.