ETV Bharat / sports

ಭಾರತ - ಬಾಂಗ್ಲಾ ಐತಿಹಾಸಿಕ ಟೆಸ್ಟ್​:   ಐವತ್ತೇ ರೂಪಾಯಿಗೆ ನೀವೂ ಪಂದ್ಯ ವೀಕ್ಷಿಸಿ!

author img

By

Published : Oct 30, 2019, 12:32 PM IST

ನವೆಂಬರ್​ 22 ರಿಂದ ಭಾರತ ಮತ್ತು ಬಾಂಗ್ಲಾದೇಶ ತಂಡಗಳ ನಡುವಿನ ಬಹು ನಿರೀಕ್ಷಿತ ಹಗಲು-ರಾತ್ರಿ ಟೆಸ್ಟ್ ಮಧ್ಯಾಹ್ನ ಆಯೋಜನೆಗೊಂಡಿದೆ. ಟೆಸ್ಟ್​ ಕ್ರಿಕೆಟ್​ಗೆ ಹೆಚ್ಚಿನ ಜನರನ್ನು ಸೆಳೆಯುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿರುವ ಗಂಗೂಲಿ ಯೋಜನೆಗೆ ಸಿಎಬಿ ಕೂಡ ಕೈಜೋಡಿಸಿದ್ದು, ಪಂದ್ಯದ ಟಿಕೆಟ್ ಬೆಲೆಯನ್ನು 50, 100 ಹಾಗೂ 150 ರೂಪಾಯಿಗೆ ನಿಗದಿ ಮಾಡಿದೆ.

Day-Night Test , ಹಗಲು-ರಾತ್ರಿ ಟೆಸ್ಟ್

ಕೋಲ್ಕತಾ: ಭಾರತ ಕ್ರಿಕೆಟ್​ನ ಇತಿಹಾಸದಲ್ಲೇ ಮೊದಲ ಬಾರಿಗೆ ಈಡನ್​ ಗಾರ್ಡನ್​ನಲ್ಲಿ ನಡೆಯುವ ಹಗಲುರಾತ್ರಿ ಟೆಸ್ಟ್​ ಪಂದ್ಯದಲ್ಲಿ ಟಿಕೆಟ್​ ಬೆಲೆಯನ್ನು 50 ರೂ ನಿಂದ ನೀಡಲು ಸಿಎಬಿ ನಿರ್ಧರಿಸಿದೆ.

ನವೆಂಬರ್​ 22 ರಿಂದ ಭಾರತ ಮತ್ತು ಬಾಂಗ್ಲಾದೇಶ ತಂಡಗಳ ನಡುವಿನ ಬಹು ನಿರೀಕ್ಷಿತ ಹಗಲು-ರಾತ್ರಿ ಟೆಸ್ಟ್ ಮಧ್ಯಾಹ್ನ ಆಯೋಜನೆಗೊಂಡಿದೆ. ಟೆಸ್ಟ್​ ಕ್ರಿಕೆಟ್​ಗೆ ಹೆಚ್ಚಿನ ಜನರನ್ನು ಸೆಳೆಯುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿರುವ ಗಂಗೂಲಿ ಯೋಜನೆಗೆ ಸಿಎಬಿ ಕೂಡ ಕೈಜೋಡಿಸಿದ್ದು, ಪಂದ್ಯದ ಟಿಕೆಟ್ ಬೆಲೆಯನ್ನು 50, 100 ಹಾಗೂ 150 ರೂಪಾಯಿಗಳನ್ನು ನಿಗದಿ ಮಾಡಿದೆ.

ಈಡನ್​ ಗಾರ್ಡನ್​ನಲ್ಲಿ ಸುಮಾರು 68,000 ಆಸನ ವ್ಯವಸ್ಥೆಗಳಿದ್ದು, ಪಂದ್ಯವನ್ನು 2:30 ಕ್ಕೆ ಆರಂಭಿಸಲು ನಿರ್ಧರಿಸಲಾಗಿದೆ. ಆದರೆ ವೀಕ್ಷಕರಿಗೆ ಮನೆಗೆ ತೆರಳಲು ತೊಂದರೆಯಾಗದಂತೆ ನೋಡಿಕೊಳ್ಳಲು 1:30ಗೆ ಆಯೋಜಿಸುವಂತೆ ಬಿಸಿಸಿಐ ಅನುಮತಿ ಪಡೆಯುವುದಾಗಿ ಆತಿಥೇಯ ಸಿಎಬಿ ತಿಳಿಸಿದೆ.

ಭಾರತ ಮತ್ತು ಬಾಂಗ್ಲಾದೇಶ ನವೆಂಬರ್ 22 ರಿಂದ 26 ರವರೆಗೆ ಈಡನ್ ಗಾರ್ಡನ್‌ನಲ್ಲಿ ನಡೆಯಲಿದೆ. ಬಾಂಗ್ಲಾದೇಶ ಟೆಸ್ಟ್​ ತಂಡದ ನಾಯಕ ಶಕಿಬ್​ಗೆ ಐಸಿಸಿಯಿಂದ ನಿಷೇಧ ಹೇರಿದ ಬೆನ್ನಲ್ಲೇ ಬಿಸಿಬಿ ಮಾಮಿನಲ್​ ಹಕ್​ಗೆ ಟೆಸ್ಟ್​ ತಂಡ ನಾಯಕತ್ವವನ್ನು , ಮೊಹಮ್ಮದುಲ್ಲಾಗೆ ಟಿ-20 ನಾಯಕತ್ವ ವಹಿಸಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.