ETV Bharat / sports

ಬುಷ್​ಫೈರ್​ ಕ್ರಿಕೆಟ್ ಬ್ಯಾಷ್ ಪಂದ್ಯದಿಂದ 7.7 ಮಿಲಿಯನ್ ಡಾಲರ್ ಹಣ ಸಂಗ್ರಹ - Courtney Walsh

ಕಾಡ್ಗಿಚ್ಚಿನಿಂದ ಹಾನಿಗೊಳಗಾದ ಆಸ್ಟ್ರೇಲಿಯಾಕ್ಕೆ ಸಹಾಯ ಮಾಡಲು ಆಯೋಜನೆ ಮಾಡಿದ್ದ ಬುಷ್‌ಫೈರ್ ಕ್ರಿಕೆಟ್ ಬ್ಯಾಷ್ ಪಂದ್ಯದಿಂದ 7.7 ಮಿಲಯನ್ ಡಾಲರ್​ಗೂ ಹೆಚ್ಚು ಹಣ ಸಂಗ್ರಹ ಆಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.

Bushfire Cricket match,7.7 ಮಿಲಿಯನ್ ಡಾಲರ್ ಹಣ ಸಂಗ್ರಹ
7.7 ಮಿಲಿಯನ್ ಡಾಲರ್ ಹಣ ಸಂಗ್ರಹ
author img

By

Published : Feb 9, 2020, 7:08 PM IST

ಸಿಡ್ನಿ(ಆಸ್ಟ್ರೇಲಿಯಾ): ಕಾಡ್ಗಿಚ್ಚಿನಿಂದ ಹಾನಿಗೊಳಗಾದ ಆಸ್ಟ್ರೇಲಿಯಾಕ್ಕೆ ಸಹಾಯ ಮಾಡಲು ನಿರ್ಧರಿಸಿ ಆಸಿಸ್ ಕ್ರಿಕೆಟಿಗರು ಆಯೋಜನೆ ಮಾಡಿದ್ದ ಬುಷ್‌ಫೈರ್ ಕ್ರಿಕೆಟ್ ಬ್ಯಾಷ್ ಪಂದ್ಯದಿಂದ 7.7 ಮಿಲಿಯನ್ ಡಾಲರ್​ಗೂ ಹೆಚ್ಚು ಹಣ ಸಂಗ್ರಹ ಆಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.

ವಿಶ್ವದ ಶ್ರೇಷ್ಠ ಕ್ರಿಕೆಟಿಗರನ್ನೆಲ್ಲಾ ಒಂದುಗೂಡಿಸಿ ಆಸ್ಟ್ರೇಲಿಯಾ ದಿಗ್ಗಜರಾದ ರಿಕಿ ಪಾಂಟಿಂಗ್​ ಹಾಗೂ ಆ್ಯಡಂ ಗಿಲ್​ಕ್ರಿಸ್ಟ್​ ನಾಯಕತ್ವದಲ್ಲಿ ಎರಡು ತಂಡಗಳನ್ನು ಸೇರಿಸಿ ಮೆಲ್ಬೋರ್ನ್‌ನ ಜಂಕ್ಷನ್‌ ಓವಲ್​ನಲ್ಲಿ 10 ಓವರ್​ಗಳ ಪಂದ್ಯ ಆಡಿಸಲಾಗಿತ್ತು. ಈ ಪಂದ್ಯದಲ್ಲಿ ಪಾಂಟಿಂಗ್​ ಇಲೆವೆನ್ ತಂಡ,​ ಗಿಲ್​ಕ್ರಿಸ್ಟ್​ ಇಲೆವೆನ್ ವಿರುದ್ಧ 1 ರನ್​ನಿಂದ ಗೆಲುವು ಸಾಧಿಸಿದೆ.

ಪಂದ್ಯಕ್ಕೂ ಮೊದಲು ಸಚಿನ್​ ತೆಂಡೂಲ್ಕರ್​ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟರ್​ ಎಲಿಸ್​ ಪೆರ್ರಿ ಅವರ ಮನವಿಗೆ ಸ್ಪಂದಿಸಿ ಒಂದು ಓವರ್​ ಬೌಲಿಂಗ್‌ಗೆ ಬ್ಯಾಟಿಂಗ್​ ಮಾಡುವ ಮೂಲಕ ಐದೂವರೆ ವರ್ಷಗಳ ಬಳಿಕ ಮತ್ತೆ ಕ್ರಿಕೆಟ್​ ಆಡಿದ್ದಾರೆ.

ಈ ಪಂದ್ಯದಲ್ಲಿ ವಿಶ್ವ ಕ್ರಿಕೆಟ್​​ನ ಶ್ರೇಷ್ಠ ಆಟಗಾರರಾದ ಬ್ರಿಯಾನ್ ಲಾರಾ, ಕರ್ಟ್ನಿ ವಾಲ್ಷ್, ಯುವರಾಜ್ ಸಿಂಗ್ ಮತ್ತು ವಾಸಿಮ್ ಅಕ್ರಮ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.