ಆ್ಯಂಟಿಗುವಾ: ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ನಲ್ಲಿ 318 ರನ್ಗಳ ಬೃಹತ್ ಜಯ ಸಾಧಿಸಿದೆ. ಈ ಜಯದಲ್ಲಿ ಭಾರತದ ನಂಬರ್ ಒನ್ ಬೌಲರ್ ಬುಮ್ರಾರ ಅದ್ಭುತ ಬೌಲಿಂಗ್ ಸ್ಪೆಲ್ನಿಂದ ಎಂಬುದು ಗಮನಾರ್ಹ.
ಭಾನುವಾರ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ಗೆ 419 ರನ್ಗಳ ಟಾರ್ಗೆಟ್ ನೀಡಿತ್ತು. ಆದರೆ, ಬಿರುಗಾಳಿ ಬೌಲಿಂಗ್ ದಾಳಿ ನಡೆಸಿದ ಜಸ್ಪ್ರೀತ್ ಬುಮ್ರಾ 8 ಓವರ್ಗಳಲ್ಲಿ 7 ರನ್ ನೀಡಿ 5 ವಿಕೆಟ್ ಉಡಾಯಿಸಿ ವಿಂಡೀಸ್ ತಂಡವನ್ನು 100 ರನ್ಗೆ ಕಟ್ಟಿ ಹಾಕಿದರು.
7 ರನ್ಗಳಿಗೆ 5ವಿಕೆಟ್ ಪಡೆಯುವ ಮೂಲಕ ಬುಮ್ರಾ 10ಕ್ಕಿಂತ ಕಡಿಮೆ ರನ್ ನೀಡಿ 5ಕ್ಕಿಂತ ಹೆಚ್ಚು ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಹಾಗೂ ವಿಶ್ವದ 11ನೇ ಬೌಲರ್ ಎನಿಸಿಕೊಂಡರು. ಈ ಹಿಂದೆ ವೆಂಕಟಪತಿ ರಾಜು ಶ್ರೀಲಂಕಾ ವಿರುದ್ಧ 12 ರನ್ ನೀಡಿ 6 ವಿಕೆಟ್ ಪಡೆದಿದ್ದರು.
10 ಕ್ಕಿಂತ ಕಡಿಮೆ ರನ್ ನೀಡಿ 5 ಕ್ಕಿಂತ ಹೆಚ್ಚು ವಿಕೆಟ್ ಪಡೆದವರು.
- ಜಾರ್ಜ್ ಲಹ್ಮನ್(ಇಂಗ್ಲೆಂಡ್) 7ಕ್ಕೆ 8
- ಎರ್ನಿ ಟೊಶಾಕ್(ಆಸ್ಟ್ರೇಲಿಯಾ) 2ಕ್ಕೆ 5
- ಜರ್ಮೈನ್ ಲಾಸನ್(ಆಸ್ಟ್ರೆಲಿಯಾ) - 3ಕ್ಕೆ 6
- ಡೇಲ್ ಸ್ಟೈನ್(ದಕ್ಷಿಣ ಆಫ್ರಿಕಾ) - 8ಕ್ಕೆ 6
- ಮೈಕಲ್ ಕ್ಲಾರ್ಕ್(ಆಸ್ಟ್ರೆಲಿಯಾ)- 9ಕ್ಕೆ 6
- ವೆರ್ನಾನ್ ಫಿಲಾಂಡರ್(ದಕ್ಷಿಣ ಆಫ್ರಿಕಾ) -7ಕ್ಕೆ 5
- ಬೆರ್ಟ್ ಇರೋನ್ಮೊಂಗರ್(ಆಸ್ಟ್ರೇಲಿಯಾ)- 6ಕ್ಕೆ 5
- ಜಸ್ಪ್ರೀತ್ ಬುಮ್ರಾ( ಭಾರತ)-7ಕ್ಕೆ5
- ಗಿಲ್ಲಿಗಾನ್(ವೆಸ್ಟ್ ಇಂಡೀಸ್) - 7ಕ್ಕೆ 6
- ಕೆಮರ್ ರೋಚ್ (ವೆಸ್ಟ್ ಇಂಡೀಸ್ -8ಕ್ಕೆ 5
- ಟಿಮ್ ಮೇ(ಆಸ್ಟ್ರೆಲಿಯಾ) -9ಕ್ಕೆ5