ಮ್ಯಾಂಚೆಸ್ಟರ್ : ಇಂಗ್ಲೆಂಡ್ ತಂಡದ ಹಿರಿಯ ವೇಗಿ ಸ್ಟುವರ್ಟ್ ಬ್ರಾಡ್ ಐಸಿಸಿ ಬಿಡುಗಡೆ ಮಾಡಿದ ನೂತನ ಬೌಲಿಂಗ್ ರ್ಯಾಂಕಿಂಗ್ನಲ್ಲಿ 10ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ವೆಸ್ಟ್ ವಿರುದ್ಧ 3 ಪಂದ್ಯಗಳ ಸರಣಿಯಲ್ಲಿ 2 ಪಂದ್ಯಗಳನ್ನಷ್ಟೇ ಆಡಿದರೂ 16 ವಿಕೆಟ್ ಪಡೆಯಲು ಯಶಸ್ವಿಯಾಗಿದ್ದ ಸ್ಟುವರ್ಟ್ ಬ್ರಾಡ್ ಐಸಿಸಿ ರ್ಯಾಂಕಿಂಗ್ನಲ್ಲಿ 3ನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ.
-
It just keeps getting better for @StuartBroad8!
— ICC (@ICC) July 29, 2020 " class="align-text-top noRightClick twitterSection" data="
After becoming the latest entrant in the highly exclusive 500 Test wicket club, he has jumped seven spots to go to No.3 in the @MRFWorldwide ICC Test Rankings for bowlers 👏👏👏 pic.twitter.com/XgX4YRdZLh
">It just keeps getting better for @StuartBroad8!
— ICC (@ICC) July 29, 2020
After becoming the latest entrant in the highly exclusive 500 Test wicket club, he has jumped seven spots to go to No.3 in the @MRFWorldwide ICC Test Rankings for bowlers 👏👏👏 pic.twitter.com/XgX4YRdZLhIt just keeps getting better for @StuartBroad8!
— ICC (@ICC) July 29, 2020
After becoming the latest entrant in the highly exclusive 500 Test wicket club, he has jumped seven spots to go to No.3 in the @MRFWorldwide ICC Test Rankings for bowlers 👏👏👏 pic.twitter.com/XgX4YRdZLh
3ನೇ ಟೆಸ್ಟ್ನಲ್ಲಿ ಎರಡೂ ಇನ್ನಿಂಗ್ಸ್ ಸೇರಿ 67 ರನ್ ನೀಡಿ 10 ವಿಕೆಟ್ ಕಬಳಿಸಿದ ಬ್ರಾಡ್ 500 ವಿಕೆಟ್ಗಳ ಮೈಲುಗಲ್ಲನ್ನು ತಲುಪಿದ್ದರು. ಅಗಸ್ಟ್ 2016ರ ಬಳಿಕ ಇದೇ ಮೊದಲ ಬಾರಿಗೆ ಮೊದಲ 3 ಸ್ಥಾನಕ್ಕೇರಿದ್ದಾರೆ. 3ನೇ ಟೆಸ್ಟ್ನ 2ನೇ ಇನಿಂಗ್ಸ್ನಲ್ಲಿ 5 ವಿಕೆಟ್ ಗೊಂಚಲು ಪಡೆದಿದ್ದ ಕ್ರಿಸ್ ವೋಕ್ಸ್ 654 ಅಂಕ ಪಡೆದು 20ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.
ಆದರೆ, ಭಾರತ ತಂಡದ ವೇಗಿ ಜಸ್ಪ್ರೀತ್ ಬುಮ್ರಾ ಒಂದು ಸ್ಥಾನ ಕುಸಿದು 8ನೇ ಸ್ಥಾನ ಪಡೆದಿದ್ದಾರೆ. 3ನೇ ಸ್ಥಾನದಲ್ಲಿದ್ದ ವಿಂಡೀಸ್ ತಂಡ ನಾಯಕ ಜೇಸನ್ ಹೋಲ್ಡರ್ ಕೂಡ 5ನೇ ಸ್ಥಾನಕ್ಕೆ ಕುಸಿದಿದ್ದಾರೆ. ಪ್ಯಾಟ್ ಕಮಿನ್ಸ್(904) ಮೊದಲ ಹಾಗೂ ನೈಲ್ ವಾಗ್ನರ್(843) 2ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಇನ್ನು, ಬ್ಯಾಟಿಂಗ್ ಶ್ರೇಯಾಂಕದಲ್ಲಿ ರೋನಿ ಬರ್ನ್ಸ್ 13 ಸ್ಥಾನ ಏರಿಕೆ ಕಂಡಿದ್ದು 17ನೇ ಸ್ಥಾನ ಪಡೆದಿದ್ದಾರೆ. ಅವರು ಕೊನೆಯ ಟೆಸ್ಟ್ನಲ್ಲಿ 57 ಮತ್ತು 80 ರನ್ ಗಳಿಸಿದ್ದರು. ಒಲ್ಲಿ ಪೋಪ್ 24 ಸ್ಥಾನ ಬಡ್ತಿ ಪಡೆದು 46ಕ್ಕೆ, ಬಟ್ಲರ್ 50ರಿಂದ 44ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಉಳಿದಂತೆ ಸ್ಮಿತ್(911),ಕೊಹ್ಲಿ(886) ಹಾಗೂ ಲಾಬುಶೇನ್(827) ಮತ್ತು ಸ್ಟೋಕ್ಸ್(814) ನಂತರದ ಸ್ಥಾನದಲ್ಲಿದ್ದಾರೆ.