ಕೋಲ್ಕತ್ತಾ: ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ತಂಡದಿಂದ ಸ್ಟಾರ್ ಸ್ಪಿನ್ನರ್ಗಳಾದ ಕುಲ್ದೀಪ್ ಯಾದವ್ ಹಾಗೂ ಯಜುವೇಂದ್ರ ಚಹಲ್ಗೆ ಕೈಬಿಟ್ಟು, ಹೊಸ ಮುಖಗಳಿಗೆ ಮಣೆ ಹಾಕಲಾಗಿತ್ತು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇದೀಗ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಗಂಗೂಲಿ ಮಾತನಾಡಿದ್ದಾರೆ.
ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ 2020ರ ಐಸಿಸಿ ಟಿ-20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಈ ಇಬ್ಬರು ಪ್ಲೇಯರ್ಗಳನ್ನ ತಂಡಕ್ಕೆ ವಾಪಸ್ ಕರೆದು ತನ್ನಿ ಎಂದು ಕ್ಯಾಪ್ಟನ್ ಕೊಹ್ಲಿಗೆ ಮನವಿ ಮಾಡಿದ್ದಾರೆ. ಸದ್ಯ ಮೈದಾನಕ್ಕಿಳಿಯುತ್ತಿರುವ ಟಿ-20 ತಂಡ ಉತ್ತಮವಾಗಿದೆ. ಆದರೆ ಟಿ-20 ಟೂರ್ನಿಯಲ್ಲಿ ಮಣಿಕಟ್ಟಿನ ಸ್ಪಿನ್ನರ್ಗಳು ತಂಡಕ್ಕೆ ಅವಶ್ಯವಾಗಿರುವ ಕಾರಣ, ಚಹಲ್,ಕುಲ್ದೀಪ್ ತಂಡಕ್ಕೆ ವಾಪಸ್ ಬರಲಿ ಎಂದು ಸೂಚನೆ ನೀಡಿದ್ದಾರೆ.
ಟಿ-20 ಟೂರ್ನಿ ವೇಳೆ ತಂಡದಲ್ಲಿ ಇಬ್ಬರು ಎಡಗೈ ಸ್ಪಿನ್ನರ್ಗಳಾದ ರವೀಂದ್ರ ಜಡೇಜಾ ಹಾಗೂ ಕೃನಾಲ್ ಪಾಂಡ್ಯ ಅವಶ್ಯಕತೆ ಇಲ್ಲ. ಸದ್ಯದಲ್ಲೇ ಟೆಸ್ಟ್ ಸರಣಿ ಆರಂಭಗೊಳ್ಳಲಿರುವ ಕಾರಣ, ಉತ್ತಮ ಪ್ರದರ್ಶನ ನೀಡುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಕಳೆದ ಕೆಲ ವರ್ಷಗಳಿಗೆ ಹೋಲಿಕೆ ಮಾಡಿದಾಗ ಸದ್ಯ ಟಿ-20ಯಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಮೇಲಿಂದ ಮೇಲೆ ಕೆಲವೊಂದು ಬದಲಾವಣೆ ಮಾಡುವುದರಿಂದಲೂ ತಂಡ ಮತ್ತಷ್ಟು ಬಲಿಷ್ಠವಾಗುತ್ತಿದೆ. ಆದರೆ ಈ ಇಬ್ಬರು ಪ್ಲೇಯರ್ಸ್ ತಂಡದಲ್ಲಿರುಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಟೀಂ ಇಂಡಿಯಾ 4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ರಿಷಭ್ ಪಂತ್ ಸೂಕ್ತ ಪ್ಲೇಯರ್ ಆಗಿದ್ದು, ಅವರಿಗೆ ಹೆಚ್ಚಿನ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದಾರೆ.