ಹೈದರಾಬಾದ್ : ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಬುಧವಾರ ಟೆಸ್ಟ್ ಫಾರ್ಮೆಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.
36 ರ ಹರೆಯದ ಫಾಫ್ ಡು ಪ್ಲೆಸಿಸ್ ಸೌತ್ ಆಫ್ರಿಕಾ ಪರ 69 ಟೆಸ್ಟ್ ಪಂದ್ಯವಾಡಿದ್ದಾರೆ. 69 ಪಂದ್ಯಗಳಲ್ಲಿ 4,163 ರನ್ ಗಳಿಸಿದ್ದು, 10 ಶತಕ ಹಾಗೂ 21 ಅರ್ಧಶತಕ ಸಿಡಿಸಿದ್ದಾರೆ. 2012 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದರು.
- " class="align-text-top noRightClick twitterSection" data="
">
ಮುಂದೆ ಬರುವ ಟಿ-20 ವಿಶ್ವಕಪ್ ಮತ್ತು ಏಕದಿನ ಕ್ರಿಕೆಟ್ ಮನದಲ್ಲಿಟ್ಟುಕೊಂಡು ಟೆಸ್ಟ್ ಫಾರ್ಮೆಟ್ಗೆ ನಿವೃತ್ತಿ ಘೋಷಿಸಿರುವುದಾಗಿ ಫಾಫ್ ಡು ಪ್ಲೆಸಿಸ್ ತಿಳಿಸಿದ್ದಾರೆ.
-
🗣️ "I stand in a place of utmost gratitude for a Test career full of blessing bestowed on me."
— ICC (@ICC) February 17, 2021 ." class="align-text-top noRightClick twitterSection" data="
More on Faf du Plessis' retirement announcement 👇
.">🗣️ "I stand in a place of utmost gratitude for a Test career full of blessing bestowed on me."
— ICC (@ICC) February 17, 2021
More on Faf du Plessis' retirement announcement 👇
.🗣️ "I stand in a place of utmost gratitude for a Test career full of blessing bestowed on me."
— ICC (@ICC) February 17, 2021
More on Faf du Plessis' retirement announcement 👇
ಫಾಫ್ ಡು ಪ್ಲೆಸಿಸ್ 2012 ರ ನವೆಂಬರ್‌ನಲ್ಲಿ ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದರು. ರಾವಲ್ಪಿಂಡಿಯಲ್ಲಿ ಫೆಬ್ರವರಿ 4, 2021ರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯವೇ ಅವರ ಕೊನೆಯ ಪಂದ್ಯವಾಗಿದೆ. ಬಲಗೈ ಆಟಗಾರ ತನ್ನ ಕೊನೆಯ ಟೆಸ್ಟ್ ಸರಣಿಯಲ್ಲಿ 10, 23, 17 ಮತ್ತು 5 ರನ್ ಸ್ಕೋರ್‌ಗಳನ್ನು ದಾಖಲಿಸಿದ್ದಾರೆ.
ಪ್ರಿಟೋರಿಯಾ ಮೂಲದ ಡು ಪ್ಲೆಸಿಸ್ 40.02 ಸರಾಸರಿಯಲ್ಲಿ 4,163 ರನ್ ಗಳಿಸಿದ್ದಾರೆ. ಅವರು ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 10 ಶತಕ ಮತ್ತು 21 ಅರ್ಧಶತಕಗಳನ್ನು ಗಳಿಸಿದ್ದಾರೆ. 2020 ರ ಡಿಸೆಂಬರ್‌ನಲ್ಲಿ ಸೆಂಚುರಿಯನ್‌ನಲ್ಲಿ ಶ್ರೀಲಂಕಾ ವಿರುದ್ಧ 199 ರನ್ಗಳಿಸಿದ್ದು ಅವರ ಟೆಸ್ಟ್ ಕ್ರಿಕೆಟ್ನ ಅತ್ಯಧಿಕ ಸ್ಕೋರ್ ಆಗಿದೆ. ಅವರು ದಕ್ಷಿಣ ಆಫ್ರಿಕಾ ಟೆಸ್ಟ್ ತಂಡದ ನಾಯಕನಾಗಿ 36 ಪಂದ್ಯಗಳನ್ನ ಮುನ್ನೆಡೆಸಿದ್ದು, ಅದರಲ್ಲಿ 18 ಪಂದ್ಯಗಳಲ್ಲಿ ತಂಡ ಜಯ ಸಾಧಿಸಿದೆ.
-
Faf du Plessis has announced his retirement from Test cricket.
— ICC (@ICC) February 17, 2021 " class="align-text-top noRightClick twitterSection" data="
He played 69 Tests for South Africa scoring 4163 runs at 40.02, including 10 centuries. pic.twitter.com/QfhRjsWqxr
">Faf du Plessis has announced his retirement from Test cricket.
— ICC (@ICC) February 17, 2021
He played 69 Tests for South Africa scoring 4163 runs at 40.02, including 10 centuries. pic.twitter.com/QfhRjsWqxrFaf du Plessis has announced his retirement from Test cricket.
— ICC (@ICC) February 17, 2021
He played 69 Tests for South Africa scoring 4163 runs at 40.02, including 10 centuries. pic.twitter.com/QfhRjsWqxr
ಭಾರತದಲ್ಲಿ (2021) ಮತ್ತು ಆಸ್ಟ್ರೇಲಿಯಾದಲ್ಲಿ (2022) ಮುಂಬರುವ ಎರಡು ವಿಶ್ವಕಪ್‌ಗಳನ್ನು ಮನದಲ್ಲಿಟ್ಟುಕೊಂಡು ನೀವೃತ್ತಿ ಘೋಷಿಸಿದ್ದೇನೆ. ಟಿ- 20 ಫಾರ್ಮ್ಯಾಟ್‌ನಲ್ಲಿ ಹೆಚ್ಚು ಗಮನಹರಿಸಲು ಬಯಸುತ್ತೇನೆ, ಹಾಗೆಯೇ ಪ್ರಮುಖ ಐಸಿಸಿ ಈವೆಂಟ್‌ಗಳಿಗೆ ಉತ್ತಮವಾಗಿ ತಯಾರಾಗಲು ಏಕದಿನ ಮತ್ತು ಟಿ-20 ಸ್ವರೂಪದಲ್ಲಿ ಆಡಲು ಬಯಸುತ್ತೇನೆ ಎಂದು ತಮ್ಮ ಪೋಸ್ಟ್‌ನಲ್ಲಿ ಫಾಫ್ ಡು ಪ್ಲೆಸಿಸ್ ಬರೆದುಕೊಂಡಿದ್ದಾರೆ.
ವಿಶ್ವಕಪ್ 2019 ರಲ್ಲಿ ದಕ್ಷಿಣ ಆಫ್ರಿಕಾ ಕಳಪೆ ಪ್ರದರ್ಶನದ ನಂತರ ಫಾಫ್ ಡು ಪ್ಲೆಸಿಸ್ ಅವರನ್ನು ಏಕದಿನ ತಂಡದ ನಾಯಕನ ಜವಬ್ದಾರಿಯಿಂದ ಕೆಳಗಿಳಿಸಲಾಗಿತ್ತು. ನಂತರ ಫೆಬ್ರವರಿ 2020 ರಲ್ಲಿ, ಸ್ವತಃ ಟೆಸ್ಟ್ ಮತ್ತು ಟಿ-20 ಫಾರ್ಮೆಟ್ ನಾಯಕ ಸ್ಥಾನದಿಂದ ಡು ಪ್ಲೆಸಿಸ್ ಕೆಳಗಿಳಿದಿದ್ದರು.