ಮುಂಬೈ: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ನಲ್ಲಿ ಐರ್ಲೆಂಡ್ ಪರ ಪದಾರ್ಪಣೆ ಮಾಡಿರುವ ರಂಕಿನ್ ಎರಡು ದೇಶಗಳ ಪರ ಟೆಸ್ಟ್ ಕ್ರಿಕೆಟ್ ಆಡಿದ ವಿಶ್ವದ 4ನೇ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
35 ವರ್ಷದ ಬಾಯ್ಡ್ ರಂಕಿನ್ ಕಳೆದ 12 ವರ್ಷಗಳಿಂದ ಐರ್ಲೆಂಡ್ ಪರ ಸೀಮಿತ ಓವರ್ಗಳ ಕ್ರಿಕೆಟ್ ಆಡುತ್ತಿದ್ದಾರೆ. ಐರ್ಲೆಂಡ್ ಇನ್ನೂ ಟೆಸ್ಟ್ಗೆ ಮಾನ್ಯತೆ ಪಡೆದಿರಲಿಲ್ಲವಾದ್ದರಿಂದ 2014ರಲ್ಲಿ ಇಂಗ್ಲೆಂಡ್ ಪರ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಆದರೆ, ಭುಜದ ಗಾಯಕ್ಕೆ ತುತ್ತಾಗಿ ಮುಂದೆ ಎಂದೂ ಇಂಗ್ಲೆಂಡ್ ಪರ ಆಡಲಿಲ್ಲ. ಆದರೆ, ಐರ್ಲೆಂಡ್ ಪರ ಸೀಮಿತ ಓವರ್ ಕ್ರಿಕೆಟ್ನಲ್ಲಿ ಖಾಯಂ ಸದಸ್ಯನಾಗಿದ್ದರು. ಬುಧವಾರದಿಂದ ಆರಂಭವಾಗಿರುವ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್ಗೆ ಐರ್ಲೆಂಡ್ ಪರ ಆಡುವ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಎರಡು ದೇಶ ಪ್ರತಿನಿಧಿಸಿದ 4ನೇ ಕ್ರಿಕೆಟಿಗ ಎಂಬ ಖ್ಯಾತಿಗೆ ಪಾತ್ರರಾದರು.
-
🗓️ 3 Jan 2014 → Boyd Rankin makes his Test debut for England
— ICC (@ICC) July 23, 2019 " class="align-text-top noRightClick twitterSection" data="
🗓️ 24 June 2019 → Boyd Rankin is set to represent Ireland in a Test against Englandhttps://t.co/RDLMHmzLhA
">🗓️ 3 Jan 2014 → Boyd Rankin makes his Test debut for England
— ICC (@ICC) July 23, 2019
🗓️ 24 June 2019 → Boyd Rankin is set to represent Ireland in a Test against Englandhttps://t.co/RDLMHmzLhA🗓️ 3 Jan 2014 → Boyd Rankin makes his Test debut for England
— ICC (@ICC) July 23, 2019
🗓️ 24 June 2019 → Boyd Rankin is set to represent Ireland in a Test against Englandhttps://t.co/RDLMHmzLhA
ಐಸಿಸಿ ದಾಖಲೆಯಂತೆ ಎರಡು ದೇಶಗಳನ್ನು ಪ್ರತಿನಿಧಿಸಿದವರು.
1)ಭಾರತ ತಂಡದ ನಾಯಕ ಇಫ್ತಿಖರ್ ಅಲಿ ಖಾನ್ ಪಟೌಡಿ ಭಾರತ ತಂಡ ಪ್ರತಿನಿಧಿಸುವ ಮೊದಲು ಇಂಗ್ಲೆಂಡ್ ತಂಡದಲ್ಲೂ ಆಡಿದ್ದರು.
2)ಆಸ್ಟ್ರೇಲಿಯಾದ ಬಿಲ್ಲಿ ಮರ್ಡೊಚ್ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳೆರಡನ್ನೂ ಪ್ರತಿನಿಧಿಸಿದ್ದಾರೆ.
3)ದಕ್ಷಿಣ ಆಫ್ರಿಕಾದಲ್ಲಿ ಜನಿಸಿದ್ದ ಕೆಪ್ಲರ್ ವಿಸ್ಸೆಲ್ಸ್ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳನ್ನು ಪ್ರತಿನಿಧಿಸಿದ್ದರು.