ಮೆಲ್ಬೋರ್ನ್: ಭಾರತದ ವಿರುದ್ಧ ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಆಸ್ಟೇಲಿಯಾ ತಂಡದ ನಾಯಕ ಟಿಮ್ ಪೇನ್ ರನ್ಔಟ್ನಿಂದ ತಪ್ಪಿಸಿಕೊಂಡಿದ್ದಕ್ಕೆ ಆಸೀಸ್ ಲೆಜೆಂಡರಿ ಸ್ಪಿನ್ನರ್ ಶೇನ್ ವಾರ್ನ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಮೆಲ್ಬೋರ್ನ್ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ನಲ್ಲಿ ಟಿಮ್ ಪೇನ್ ವಿರುದ್ಧ 55ನೇ ಓವರ್ನಲ್ಲಿ ಭಾರತ ತಂಡ ರನ್ ಔಟ್ಗೆ ಅಪೀಲ್ ಮಾಡಿತ್ತು. ಟಿವಿ ರಿವ್ಯೂ ವೀಕ್ಷಿಸಿದ 3ನೇ ಅಂಪೈರ್ ಬ್ಯಾಟ್ ಲೈನ್ನಲ್ಲಿಲ್ಲ ಎನ್ನುವುದಕ್ಕೆ ಯಾವುದೇ ಸ್ಪಷ್ಟ ಪುರಾವೆಗಳಿಲ್ಲ ಎಂದು ಆಸ್ಟ್ರೇಲಿಯಾ ನಾಯಕನನ್ನು ನಾಟೌಟ್ ಎಂದು ಘೋಷಿಸಿದರು.
ಟಿಮ್ ಪೇನ್ ರನ್ಔಟ್ನಿಂದ ತಪ್ಪಿಸಿಕೊಂಡಿದ್ದಕ್ಕೆ ತುಂಬಾ ಅಚ್ಚರಿಯಾಗುತ್ತಿದೆ. ಅವರ ಬ್ಯಾಟ್‌ನ ಯಾವುದೇ ಭಾಗ ಲೈನ್ ಕ್ರಾಸ್ ಮಾಡಿಲ್ಲ. ನನ್ನ ಪ್ರಕಾರ ಇದು ಔಟ್" ಎಂದು ವಾರ್ನ್ ಟ್ವೀಟ್ ಮಾಡಿದ್ದಾರೆ.
-
Very surprised that Tim Paine survived that run out review ! I had him on his bike & thought there was no part of his bat behind the line ! Should have been out in my opinion
— Shane Warne (@ShaneWarne) December 26, 2020 " class="align-text-top noRightClick twitterSection" data="
">Very surprised that Tim Paine survived that run out review ! I had him on his bike & thought there was no part of his bat behind the line ! Should have been out in my opinion
— Shane Warne (@ShaneWarne) December 26, 2020Very surprised that Tim Paine survived that run out review ! I had him on his bike & thought there was no part of his bat behind the line ! Should have been out in my opinion
— Shane Warne (@ShaneWarne) December 26, 2020
ಓದಿ: ಬಾಕ್ಸಿಂಗ್ ಡೇ ಟೆಸ್ಟ್.. ಮೊದಲ ಇನ್ನಿಂಗ್ಸ್‌ನಲ್ಲಿ ಆಸೀಸ್‌ಗೆ ಬುಮ್ರಾ, ಅಶ್ವಿನ್ ಪೆಟ್ಟು ; ಟೀಂ ಇಂಡಿಯಾ 36/1
ಈ ತಪ್ಪು ನಿರ್ಣಯದಿಂದ ಭಾರತಕ್ಕೇನೂ ಹೆಚ್ಚು ನಷ್ಟವಾಗಲಿಲ್ಲ. ಏಕೆಂದರೆ ಪೇನ್ ಕೇವಲ 13 ರನ್ಗಳಿಸಿ ಔಟಾದರು. ಆಸ್ಟ್ರೇಲಿಯಾ ಮೊದಲ ದಿನ ಕೇವಲ 195 ರನ್ಗಳಿಗೆ ಆಲೌಟ್ ಆಯಿತು.
ಭಾರತದ ಪರ ಬುಮ್ರಾ 4, ಅಶ್ವಿನ್ 3 , ಸಿರಾಜ್ 2 ಹಾಗೂ ಜಡೇಜಾ ಒಂದು ವಿಕೆಟ್ ಪಡೆದು ಮಿಂಚಿದರು.
ಭಾರತ 2ನೇ ಇನ್ನಿಂಗ್ಸ್ ಆರಂಭಿಸಿದಾಗ ಮಯಾಂಕ್ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದರು. ಆದರೆ ಗಿಲ್ 28 ಹಾಗೂ ಪೂಜಾರ 7 ರನ್ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.