ETV Bharat / sports

ಉತ್ತಮ ಫಾರ್ಮ್​ನಲ್ಲಿ ಸಹಾ, ಪಂತ್: ಟೀಂ ಇಂಡಿಯಾಕ್ಕೆ ಹೊಸ ತಲೆನೋವು - ಹನುಮ ವಿಹಾರಿ

ವೃದ್ಧಿಮಾನ್ ಸಹಾ ಮತ್ತು ರಿಷಭ್ ಪಂತ್ ಇಬ್ಬರೂ ಉತ್ತಮ ಫಾರ್ಮ್‌ನಲ್ಲಿದ್ದು, ಆಸ್ಟ್ರೇಲಿಯಾ ವಿರುದ್ಧದ ಅಹರ್ನಿಶಿ ಟೆಸ್ಟ್ ಪಂದ್ಯಕ್ಕೆ ವಿಕೆಟ್ ಕೀಪರ್ ಆಯ್ಕೆ ಕಠಿಣವಾಗಿದೆ ಎಂದು ಹನುಮ ವಿಹಾರಿ ಹೇಳಿದ್ದಾರೆ.

Both Saha, Pant in good form
ಉತ್ತಮ ಫಾರ್ಮ್​ನಲ್ಲಿ ಸಹಾ, ಪಂತ್
author img

By

Published : Dec 13, 2020, 6:21 PM IST

ಸಿಡ್ನಿ (ಆಸ್ಟ್ರೇಲಿಯಾ): ವೃದ್ಧಿಮಾನ್ ಸಹಾ ಮತ್ತು ರಿಷಭ್ ಪಂತ್ ಇಬ್ಬರೂ ಉತ್ತಮ ಫಾರ್ಮ್‌ನಲ್ಲಿರುವ ಕಾರಣ ಮೊದಲ ಟೆಸ್ಟ್‌ನಲ್ಲಿ ಪಂದ್ಯಕ್ಕೆ ವಿಕೆಟ್‌ ಕೀಪರ್ ಆಯ್ಕೆ ಕಠಿಣವಾಗಿದೆ ಎಂದು ಟೀಂ ಇಂಡಿಯಾ ಆಟಗಾರ ಹನುಮ ವಿಹಾರಿ ಹೇಳಿದ್ದಾರೆ.

ಪಿಂಕ್ ಬಾಲ್ ಅಭ್ಯಾಸ ಪಂದ್ಯ ಮುಕ್ತಾಯದ ಬಳಿಕ ಮಾತನಾಡಿರುವ ಹನುಮ ವಿಹಾರಿ, ಮೊದಲ ಪಂದ್ಯಕ್ಕೆ ವಿಕೆಟ್ ಕೀಪರ್ ಆಯ್ಕೆ ತುಂಬಾ ಕಠಿಣವಾಗಿದೆ ಎಂದು ಹೇಳಿದ್ದಾರೆ.

Both Saha, Pant in good form
ರಿಷಭ್ ಪಂತ್

"ಆರೋಗ್ಯಕರ ಸ್ಪರ್ಧೆಯು ಯಾವಾಗಲೂ ತಂಡಕ್ಕೆ ಒಳ್ಳೆಯದು. ಪ್ರತಿ ಸ್ಥಾನಕ್ಕೂ ನಮಗೆ ಉತ್ತಮ ಸ್ಪರ್ಧೆ ಇದೆ ಎಂದು ನಾನು ಭಾವಿಸುತ್ತೇನೆ. ಯಾರನ್ನು ಆಯ್ಕೆ ಮಾಡಬೇಕು ಎಂಬುದು ತಂಡದ ಮ್ಯಾನೇಜ್ಮೆಂಟ್ ನಿರ್ಧಾರಕ್ಕೆ ಬಿಟ್ಟಿದ್ದು. ವೃದ್ಧಿಮಾನ್ ಸಹಾ ಮತ್ತು ಪಂತ್ ಇಬ್ಬರೂ ಅತ್ಯತ್ತಮ ಫಾರ್ಮ್​ನಲ್ಲಿದ್ದಾರೆ. ಆದ್ದರಿಂದ ಆಯ್ಕೆ ಕಠಿಣವಾಗಿದ್ದು, ಇದೊಂದು ಉತ್ತಮ ತಲೆನೋವು" ಎಂದಿದ್ದಾರೆ.

Both Saha, Pant in good form
ವೃದ್ಧಿಮಾನ್ ಸಹಾ

ವೃದ್ಧಿಮಾನ್ ಸಹಾ ಮೊದಲ ಅಭ್ಯಾಸ ಪಂದ್ಯದ ದ್ವಿತೀಯ ಇನ್ನಿಂಗ್ಸ್​ನಲ್ಲಿ ಅಜೇಯ 54 ಸಿಡಿಸಿದ್ರು. ದ್ವಿತೀಯ ಅಭ್ಯಾಸ ಪಂದ್ಯದಲ್ಲಿ ಮೊದಲನೆ ಇನ್ನಿಂಗ್ಸ್​ನಲ್ಲಿ ಸೊನ್ನೆ ಸುತ್ತಿದ್ದ ಸಹಾ ಅವರಿಗೆ ದ್ವಿತೀಯ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಸಿಗಲಿಲ್ಲ. ರಿಷಭ್ ಪಂತ್ ದ್ವಿತೀಯ ಅಭ್ಯಾಸ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ 5 ರನ್ ಗಳಿಸಿದ್ರೆ, ಎರಡನೇ ಇನ್ನಿಂಗ್ಸ್​​​ನಲ್ಲಿ ಸ್ಫೋಟಕ ಶತಕ ಸಿಡಿಸಿದ್ರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.