ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ ನವ್ದೀಪ್ ಸೈನಿ ಮೊದಲ ಪಂದ್ಯದಲ್ಲೇ 3 ವಿಕೆಟ್ ಪಡೆದು ಮಿಂಚಿದ್ದರು. ಈ ಸಂದರ್ಭದಲ್ಲಿ ಟ್ವೀಟ್ ಮಾಡಿದ್ದ ಗಂಭೀರ್, ಸೈನಿ ಕ್ರಿಕೆಟ್ ಜೀವನಕ್ಕೆ ಆರಂಭದಲ್ಲಿ ಮುಳುವಾಗಿದ್ದರೆಂದು ದೆಹಲಿ ತಂಡದ ಆಯ್ಕೆ ಸಮಿತಿಯಲ್ಲಿದ್ದ ಬಿಷನ್ ಸಿಂಗ್ ಬೇಡಿ ಹಾಗೂ ಚೇತನ್ ಚೌಹಾಣ್ ಕಾಲೆಳೆದಿದ್ದರು.
-
Kudos Navdeep Saini on ur India debut. U already have 2 wkts even before u have bowled— @BishanBedi & @ChetanChauhanCr. Their middle stumps are gone seeing debut of a player whose cricketing obituary they wrote even before he stepped on the field, shame!!! @BCCI pic.twitter.com/skD77GYjk9
— Gautam Gambhir (@GautamGambhir) August 3, 2019 " class="align-text-top noRightClick twitterSection" data="
">Kudos Navdeep Saini on ur India debut. U already have 2 wkts even before u have bowled— @BishanBedi & @ChetanChauhanCr. Their middle stumps are gone seeing debut of a player whose cricketing obituary they wrote even before he stepped on the field, shame!!! @BCCI pic.twitter.com/skD77GYjk9
— Gautam Gambhir (@GautamGambhir) August 3, 2019Kudos Navdeep Saini on ur India debut. U already have 2 wkts even before u have bowled— @BishanBedi & @ChetanChauhanCr. Their middle stumps are gone seeing debut of a player whose cricketing obituary they wrote even before he stepped on the field, shame!!! @BCCI pic.twitter.com/skD77GYjk9
— Gautam Gambhir (@GautamGambhir) August 3, 2019
ಈ ಹಿಂದೆಯೇ ಸೈನಿ ಆಯ್ಕೆಗೆ ಮುಳುವಾಗಿದ್ದರು ಎಂದು ದೆಹಲಿ ತಂಡದ ಆಯ್ಕೆ ಸಮಿತಿಯಲ್ಲಿದ್ದ ಬಿಷನ್ ಸಿಂಗ್ ಬೇಡಿ ಹಾಗೂ ಚೇತನ್ ಚೌಹಾಣ್ ಮೇಲೆ ಗೌತಿ ಆರೋಪ ಮಾಡಿದ್ದರು. ಆದರೆ ಗಂಭೀರ್ ಆರೋಪವನ್ನ ಬಿಷನ್ ಸಿಂಗ್ ಬೇಡಿ ತಳ್ಳಿಹಾಕಿದ್ದಾರೆ.
ಮತ್ತೊಬ್ಬರ ಗೆಲುವಿಗೆ ನಾನು ಮುಳುವಾಗಿದ್ದೆ ಎಂಬುದನ್ನ ನಂಬೋದಿಲ್ಲ. ಟ್ವಿಟರ್ನಲ್ಲಿ ಬಂದ ಕಮೆಂಟ್ಗೆ ಪ್ರತಿಕ್ರಿಯೆ ನೀಡೋದಿಲ್ಲ. ಆದರೆ ನಾನು ಎಂದೂ ನವ್ದೀಪ್ ಸೈನಿ ಬಗ್ಗೆ ನಕಾರಾತ್ಮಕವಾಗಿ ಹೇಳಿಲ್ಲ ಎಂದಿದ್ದಾರೆ.
ಅಲ್ಲದೆ ಹರಿಯಾಣ ಮೂಲದ ಆಟಗಾರರನನ್ನ ದೆಹಲಿ ತಂಡಕ್ಕೆ ಆಯ್ಕೆ ಮಾಡಬಾರದು ಎಂದು ನಾನು ಎಲ್ಲೂ ಹೇಳಿಲ್ಲ ಎಂದಿದ್ದಾರೆ. ಆ ಹುಡುಗ ಅದ್ಭುತ ಆಟಗಾರ. ನಾನು ಅವನನ್ನ ಟಿವಿಯಲ್ಲಿ ಮಾತ್ರ ನೋಡಿದ್ದೆ. ಅಲ್ಲದೆ ಸೈನಿ ಭಾರತದ ಪರ ಆಡಿರೋದು ಒಂದೇ ಒಂದು ಪಂದ್ಯ ಮಾತ್ರ. ಹೀಗಾಗಿ ನಾವು ಇನ್ನೂ ಸ್ವಲ್ಪ ದಿನ ಕಾಯಬೇಕು ಎಂದಿದ್ದಾರೆ.
ಇನ್ನು ಗೌತಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಚೇತನ್ ಚೌಹಾಣ್, ಸೈನಿಯನ್ನ ರಣಜಿ ತಂಡಕ್ಕೆ ಆಯ್ಕೆ ಮಾಡುವಾಗ ನಿಯಮಗಳ ಪ್ರಕಾರ ನಡೆದುಕೊಂಡಿದ್ದೆ ಅಷ್ಟೆ ಎಂದಿದ್ದಾರೆ.
ಬಿಷನ್ ಸಿಂಗ್ ಬೇಡಿ ಮತ್ತು ಚೇತನ್ ಚೌಹಾಣ್ ಹೇಳಿಕೆಗೆ ಟ್ವಿಟರ್ ಮೂಲಕ ಟಾಂಗ್ ಕೊಟ್ಟಿರುವ ಗೌತಿ, ಬಿಷನ್ ಸಿಂಗ್ ಬೇಡಿ ತನ್ನ ಅನರ್ಹ ಮಗನನ್ನ ಆಯ್ಕೆ ಮಾಡಲು ಮುಂದಾದವರು. ಚೇತನ್ ಚೌಹಾಣ್ ತನ್ನ ಸೋದರ ಅಳಿಯನನ್ನ ದೆಹಲಿ ತಂಡಕ್ಕೆ ಆಯ್ಕೆ ಮಾಡುವಂತೆ ಡಿಡಿಸಿಎ ಮುಂದೆ ತಲೆಬಾಗಿದವರು. ನಾಚಿಕೆ ಆಗಬೇಕು ನಿಮಗೆ ಎಂದು ಕುಟುಕಿದ್ದಾರೆ.
-
😂 @BishanBedi talking about “stooping to conquer” 😂,man who was pushing his undeserving son for selection or @ChetanChauhanCr bent on getting his nephew in DDCA team. Shame. Also reproducing Bedi’s comments on Navdeep in a protest letter of 2013. Read onhttps://t.co/hhwMDViipZ
— Gautam Gambhir (@GautamGambhir) August 4, 2019 " class="align-text-top noRightClick twitterSection" data="
">😂 @BishanBedi talking about “stooping to conquer” 😂,man who was pushing his undeserving son for selection or @ChetanChauhanCr bent on getting his nephew in DDCA team. Shame. Also reproducing Bedi’s comments on Navdeep in a protest letter of 2013. Read onhttps://t.co/hhwMDViipZ
— Gautam Gambhir (@GautamGambhir) August 4, 2019😂 @BishanBedi talking about “stooping to conquer” 😂,man who was pushing his undeserving son for selection or @ChetanChauhanCr bent on getting his nephew in DDCA team. Shame. Also reproducing Bedi’s comments on Navdeep in a protest letter of 2013. Read onhttps://t.co/hhwMDViipZ
— Gautam Gambhir (@GautamGambhir) August 4, 2019
ಸೈನಿ ಮೊದಲ ಓವರ್ನಲ್ಲೇ ಎರಡು ವಿಕೆಟ್ ಪಡೆಯುತ್ತಿದ್ದಂತೆ ಟ್ವೀಟ್ ಮಾಡಿದ್ದ ಗಂಭೀರ್, "ಸೈನಿ ಭಾರತ ತಂಡದ ಪರ ನಿನ್ನ ಪದಾರ್ಪಣೆ ಅದ್ಭುತವಾಗಿತ್ತು. ಮೊದಲ ಓವರ್ನಲ್ಲೇ 2 ವಿಕೆಟ್ ಪಡೆದಿದ್ದೀಯ. ಈ ಪ್ರದರ್ಶನ ನೋಡಿ ಬಿಷನ್ ಸಿಂಗ್ ಬೇಡಿ ಹಾಗೂ ಚೇತನ ಶರ್ಮಾರಿಗೆ ತಕ್ಕ ಉತ್ತರ ಕೊಟ್ಟಂತಾಗಿದೆ. ನೀನು ಮೈದಾನಕ್ಕಿಳಿಯುವ ಮುನ್ನವೇ ನಿನ್ನನ್ನು ತುಳಿಯಲು ನೋಡಿದವರಿಗೆ ಅವಮಾನವಾಗಿದೆ" ಎಂದು ಟ್ವೀಟ್ ಮೂಲಕ ಮಾಜಿ ಆಟಗಾರರ ಕಾಲೆಳೆದಿದ್ದರು.