ಮೆಲ್ಬೋರ್ನ್: ಇದೇ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾ ಅಂಗಳದಲ್ಲಿ ಟೀಂ ಇಂಡಿಯಾ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಲಿದ್ದು, ಅದಕ್ಕಾಗಿ ಉಭಯ ತಂಡಗಳು ಬಯೋ ಸೆಕ್ಯೂರ್ ಮೈದಾನದಲ್ಲಿ ಕ್ರಿಕೆಟ್ ಪಂದ್ಯದಲ್ಲಿ ಭಾಗಿಯಾಗಲಿವೆ.
ಕ್ರಿಕೆಟ್ ಪಂದ್ಯ ಆಯೋಜನೆಗಾಗಿ 160 ಕೋಟಿ ರೂ ಖರ್ಚು ಆಗಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಮಾಹಿತಿ ನೀಡಿದೆ. ಹೀಗಾಗಿ ಇದರ ಪ್ರಾಯೋಜಕತ್ವ 300 ಮಿಲಿಯನ್ ಜೊತೆಗೆ ಪ್ರಸಾರ ಹಕ್ಕು ನೀಡಲು ಅದು ಮುಂದಾಗಿದೆ. ಭಾರತ ಪ್ರವಾಸ ಹಾಗೂ ಬಿಗ್ ಬ್ಯಾಷ್ ಲೀಗ್ ಕೂಡ ಇದರಲ್ಲಿ ಸೇರಿಕೊಂಡಿದ್ದು, ಎಲ್ಲ ಪಂದ್ಯಗಳು ಬಯೋ ಸೆಕ್ಯೂರ್ನಲ್ಲಿ ನಡೆಯಬೇಕಾಗಿದ್ದು, ಇಷ್ಟೊಂದು ಹಣ ಖರ್ಚು ಆಗಲಿದೆ ಎಂದು ತಿಳಿಸಿದೆ.
ಕೊರೊನಾ ವೈರಸ್ ಕಾರಣ ದೇಶದಲ್ಲಿ ಎಲ್ಲದರ ಬೆಲೆ ಮೂರು ಪಟ್ಟು ಹೆಚ್ಚಾಗಿದೆ. ಚಾರ್ಟರ್ ಫ್ಲೈಟ್ಗಳಿಂದ ಹಿಡಿದು ಹೋಟೆಲ್ ಕಾಯ್ದಿರಿಸುವಿಕೆ, ಕೋವಿಡ್ ಟೆಸ್ಟ್ ಕಿಟ್ ಸಹ ಹೆಚ್ಚಾಗಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾ 14 ದಿನಗಳ ಕಾಲ ಕ್ವಾರಂಟೈನ್ಗೊಳಗಾಗುವ ಸಾಧ್ಯತೆ ದಟ್ಟವಾಗಿದ್ದು, ಹೀಗಾಗಿ ಟೀಂ ಇಂಡಿಯಾ ತಂಡಕ್ಕೆ ಎಲ್ಲ ರೀತಿಯ ಸೌಲಭ್ಯ ಒದಗಿಸಬೇಕಾಗಿದೆ.