ETV Bharat / sports

ಚಾಂಪಿಯನ್​ ಆಗಲು 5 ತಂಡಗಳಿಗೆ ಅನುಕೂಲವಾಗುವಂತ ಫಾರ್ಮೆಟ್​​... ಇದು ಬಿಬಿಎಲ್​ನ ವಿಶೇಷತೆ! - ಬಿಗ್​ಬ್ಯಾಶ್​ ಲೀಗ್​ 2020

ಟಿ20 ಇತಿಹಾಸದಲ್ಲಿ ಮೊದಲ ಪ್ರಾಂಚೈಸಿ ಲೀಗ್​ ಆದ ಐಪಿಎಲ್​ನಲ್ಲಿ ಎಲಿಮಿನೇಟರ್​, ಕ್ವಾಲಿಫೈಯರ್​ ಪದ್ದತಿಯಿದೆ. ಅಲ್ಲಿ ಮೊದಲೆರಡು ತಂಡಗಳು ಫೈನಲ್​ಗೇರಲು ಎರಡು ಅವಕಾಶವಿರುತ್ತದೆ. ಮೂರು-ನಾಲ್ಕನೇ ತಂಡಗಳು ಫೈನಲ್ಗೇರಲು ಎರಡು ಪಂದ್ಯಗಳನ್ನು ಆಡಬೇಕಿರುತ್ತದೆ.

Big Bash League
Big Bash League
author img

By

Published : Jan 22, 2020, 5:10 PM IST

ಮೆಲ್ಬೋರ್ನ್​: ಇದುವರೆಗೂ ಎಲ್ಲ ಟಿ20 ಲೀಗ್​ಗಳಲ್ಲೂ ಮೊದಲ ನಾಲ್ಕು ತಂಡಗಳು ಅಥವಾ ಮೂರು ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸುತ್ತಿದ್ದವು. ಆದರೆ, ಬಿಬಿಎಲ್​ ಮೊದಲ 5 ತಂಡಗಳಿಗೆ ಅನುಕೂಲವಾಗುವಂತೆ ಹೊಸ ಪದ್ಧತಿಯನ್ನು ಪರಿಚಯಿಸುತ್ತಿದೆ.

ಟಿ-20 ಇತಿಹಾಸದಲ್ಲಿ ಮೊದಲ ಪ್ರಾಂಚೈಸಿ ಲೀಗ್​ ಆದ ಐಪಿಎಲ್​ನಲ್ಲಿ ಎಲಿಮಿನೇಟರ್​, ಕ್ವಾಲಿಫೈಯರ್​ ಪದ್ದತಿಯಿದೆ. ಅಲ್ಲಿ ಮೊದಲೆರಡು ತಂಡಗಳು ಫೈನಲ್​ಗೇರಲು ಎರಡು ಅವಕಾಶವಿರುತ್ತದೆ. ಮೂರು-ನಾಲ್ಕನೇ ತಂಡಗಳು ಫೈನಲ್​​ಗೆ ಏರಲು ಎರಡು ಪಂದ್ಯಗಳನ್ನು ಆಡಬೇಕಿರುತ್ತದೆ.

ಕೆಲವು ಲೀಗ್​ಗಳಲ್ಲಿ ನಾಕೌಟ್​ ಪದ್ದತಿಯಿರುತ್ತದೆ. ಮೊದಲ ನಾಲ್ಕು ತಂಡಗಳು ಸೆಮಿಫೈನಲ್​ ಪಂದ್ಯವನ್ನಾಡಿ, ಅಲ್ಲಿ ಗೆದ್ದ ತಂಡಗಳು ಫೈನಲ್​ ಆಡಲಿವೆ. ಆದರೆ ಬಿಬಿಎಲ್​ ಇದೇ ಮೊದಲ ಬಾರಿಗೆ 5 ತಂಡಗಳು ಕ್ವಾಲಿಫೈಯರ್​ ಹಂತದಲ್ಲಿ ಆಡಲು ಅವಕಾಶ ಒದಗಿಸುತ್ತಿದೆ.

ಎಲಿಮಿನೇಟರ್​: 4 ಮತ್ತು 5ನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್​ ಪಂದ್ಯವನ್ನಾಡಲಿದೆ.

ಕ್ವಾಲಿಫೈಯರ್​: ಟೂರ್ನಿಯಲ್ಲಿ ಮೊದಲ ಎರಡು ಸ್ಥಾನ ಪಡೆದ ತಂಡಗಳು ಕ್ವಾಲಿಫೈಯರ್​ ಪಂದ್ಯವನ್ನಾಡಲಿವೆ. ಇದರಲ್ಲಿ ಗೆದ್ದ ತಂಡ ಫೈನಲ್​ ಗೇರಲಿದೆ.

ನಾಕೌಟ್​: ಎಲಿಮಿನೇಟರ್​ನಲ್ಲಿ ಗೆದ್ದ ತಂಡ ಟೂರ್ನಿಯಲ್ಲಿ 3ನೇ ಸ್ಥಾನ ಪಡೆದ ತಂಡದೊಂದಿಗೆ ನಾಕೌಟ್​ ಪಂದ್ಯವನ್ನಾಡಲಿದೆ.

ಚಾಲೆಂಜರ್: ಕ್ವಾಲಿಫೈಯರ್​ನಲ್ಲಿ ಸೋತ ಹಾಗೂ ನಾಕೌಟ್​ನಲ್ಲಿ ಗೆದ್ದ ತಂಡಗಳು ಚಾಲೆಂಜರ್​ ಹಂತದಲ್ಲಿ ಸೆಣಸಾಡಲಿವೆ. ಇಲ್ಲಿ ಗೆದ್ದ ತಂಡ ಫೈನಲ್​ ಪ್ರವೇಶಿಸಿದೆ.

ಫೈನಲ್​: ಕ್ವಾಲಿಫೈಯರ್​ನಲ್ಲಿ ಗೆದ್ದ ತಂಡ ಹಾಗೂ ಚಾಲೆಂಜರ್​ನಲ್ಲಿ ಗೆದ್ದ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.