ಹೈದರಾಬಾದ್: ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಡಿ.15ರಿಂದ ಆರಂಭವಾಗಲಿರುವ ವಿಂಡೀಸ್ ವಿರುದ್ಧದ ಏಕದಿನ ಸರಣಿಗೆ ಅಲಭ್ಯರಾಗಲಿದ್ದಾರೆ ಎನ್ನುವ ಮಾಹಿತಿ ದೊರೆತಿದೆ.
ಹಲವು ತಿಂಗಳ ಬಳಿಕ ಬ್ಲೂ ಜೆರ್ಸಿ ತೊಟ್ಟು ವಿಂಡೀಸ್ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಮೈದಾನಕ್ಕಿಳಿದಿದ್ದ ಭುವಿ ಮತ್ತೆ ಗಾಯಕ್ಕೆ ತುತ್ತಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
![Bhuvneshwar Kumar doubtful for the ODI series against Windies](https://etvbharatimages.akamaized.net/etvbharat/prod-images/5359727_bk.jpg)
2018ರ ದ.ಆಫ್ರಿಕಾ ಪ್ರವಾಸದ ಬಳಿಕ ಭುವನೇಶ್ವರ್ ಕುಮಾರ್ ಯಾವುದೇ ಟೆಸ್ಟ್ ಪಂದ್ಯ ಆಡಿಲ್ಲ. 2019ರ ವಿಶ್ವಕಪ್ ಟೂರ್ನಿಯಲ್ಲಿ ಹ್ಯಾಮ್ಸ್ಟ್ರಿಂಗ್ ಗಾಯಕ್ಕೆ ತುತ್ತಾಗಿದ್ದ ಭುವಿ ನಂತರದಲ್ಲಿ ಹಲವು ಸರಣಿಯಿಂದ ಹೊರಗುಳಿಯಬೇಕಾಯಿತು.
ಹಲವು ತಿಂಗಳ ಬಳಿಕ ಇತ್ತೀಚೆಗೆ ಮುಕ್ತಾಯವಾದ ವಿಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಭುವಿ ಬೌಲಿಂಗ್ ಮಾಡಿದ್ದರು. ಈ ಸರಣಿಯಲ್ಲಿ ಅವರು ಕೇವಲ 2 ವಿಕೆಟ್ ಮಾತ್ರ ಕೀಳುವಲ್ಲಿ ಸಫಲರಾಗಿದ್ದಾರೆ. ಜೊತೆಗೆ ಎಕಾನಮಿ ಸಹ ಒಂಭತ್ತಕ್ಕಿಂತ ಹೆಚ್ಚಾಗಿತ್ತು.
ಟೀಂ ಇಂಡಿಯಾ ಈ ವರ್ಷದ ಕೊನೆಯ ಸರಣಿಯನ್ನು ಡಿ.15ರಂದು ಆರಂಭಿಸಲಿದೆ. ಚೆನ್ನೈನಲ್ಲಿ ಭಾರತ-ವಿಂಡೀಸ್ ಮೊದಲ ಏಕದಿನ ಪಂದ್ಯ ನಡೆಯಲಿದೆ.