ನವದೆಹಲಿ: ದೇಶದ ತಾರಾ ಬಾಕ್ಸರ್ಗಳಾದ ಅಮಿತ್ ಪಂಘಲ್ ಹಾಗೂ ವಿಕಾಶ್ ಕೃಷ್ಣನ್ ಹೆಸರನ್ನು ಪ್ರತಿಷ್ಟಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಬಾಕ್ಸಿಂಗ್ ಫೆಡರೇಷನ್ ಆಫ್ ಇಂಡಿಯಾ ನಾಮನಿರ್ದೇಶನ ಮಾಡಿದೆ.
ಬಾಕ್ಸಿಂಗ್‌ನಲ್ಲಿ ಕಳೆದ ಕೆಲವು ವರ್ಷಗಳಿಂದ ಅಮಿತ್ ಪಂಘಲ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. 2019ರ ವಿಶ್ವ ಚಾಂಪಿಯನ್ಶಿಪ್ನ 52 ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕ ಹಾಗೂ 2018ರ ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಹಾಗೂ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಗೆದ್ದ ಸಾಧನೆ ತೋರಿದ್ದಾರೆ.

ವಿಜೇಂದರ್ ಸಿಂಗ್ ನಂತರ ಹೆಚ್ಚು ಒಲಿಂಪಿಕ್ಸ್ನಲ್ಲಿ ಭಾಗವಹಿಸಿರುವ ಬಾಕ್ಸರ್ ಆಗಿರುವ 28 ವರ್ಷದ ವಿಕಾಶ್ ಕೃಷ್ಣನ್ 2018ರಲ್ಲಿ ತಮ್ಮ ಮೂರನೇ ಏಷ್ಯನ್ ಗೇಮ್ಸ್ನಲ್ಲಿ ಪದಕ (ಕಂಚು) ಹಾಗೂ ಅದೇ ವರ್ಷ ಗೋಲ್ಡ್ ಕೋಸ್ಟ್ನಲ್ಲಿ ಚಿನ್ನದ ಪದಕ ಪಡೆದಿದ್ದರು.

ಮಹಿಳಾ ಬಾಕ್ಸರ್ಗಳಾದ ಸಿಮ್ರಾನ್ಜಿತ್ ಕೌರ್, ಲೌವ್ಲಿನಾ ಬೋರ್ಗೈನ್ ಹಾಗೂ ಯುವ ಬಾಕ್ಸರ್ ಮನೀಶ್ ಕೌಶಿಕ್ ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.
ಎನ್.ಉಷಾ ಧ್ಯಾನ್ ಚಂದ್ ಪ್ರಶಸ್ತಿಗೆ ಹಾಗೂ ಕೋಚ್ಗಳಾದ ಚೋಟ್ ಲಾಲ್ ಯಾದವ್ ಹಾಗೂ ಮೊಹಮ್ಮದ್ ಅಲಿ ಕಮಾರ್ ಹೆಸರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಶಿಪಾರಸ್ಸು ಮಾಡಿದ್ದಾರೆ.
