ETV Bharat / sports

ಒತ್ತಡ ನಿವಾರಿಸಲು ವಿಶ್ವಕಪ್​ ಫೈನಲ್​ನ ಸೂಪರ್ ಓವರ್​ ವೇಳೆ ಸಿಗರೇಟ್​ ಸೇದಿದ್ದರು ಈ ಆಂಗ್ಲ ಆಟಗಾರ!!

author img

By

Published : Jul 14, 2020, 4:19 PM IST

241 ರನ್​ಗಳ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್​ ತಂಡಕ್ಕೆ ಆಧಾರವಾಗಿದ್ದ ಸ್ಟೋಕ್ಸ್​ 98 ಎಸೆತಗಳಲ್ಲಿ ಔಟಾಗದೆ 84 ರನ್​ಗಳಿಸಿದ್ದರು. ಇವರ ಬ್ಯಾಟಿಂಗ್​ ನೆರವಿನಿಂದ ಪಂದ್ಯ ಟೈ ಆಗಿತ್ತು. ಜೊತೆಗೆ ಸೂಪರ್​ ಓವರ್​ನಲ್ಲೂ ಅವರು 8 ರನ್​ಗಳಿಸಿ 16 ರನ್​ಗಳ ಟಾರ್ಗೆಟ್​ಗೆ ನೆರವಾಗಿದ್ದರು..

ಬೆನ್​ ಸ್ಟೋಕ್ಸ್​
ಬೆನ್​ ಸ್ಟೋಕ್ಸ್​

ಲಂಡನ್​ : ವಿಶ್ವಕಪ್​ ಇತಿಹಾಸದಲ್ಲೇ 2019ರ ಫೈನಲ್​ ಪಂದ್ಯ ಮಹತ್ವವಾದ ಸ್ಥಾನ ಪಡೆದುಕೊಂಡಿದೆ. ಏಕದಿನ ಕ್ರಿಕೆಟ್​ ಇತಿಹಾಸದಲ್ಲೇ ಮೊದಲ ಬಾರಿಗೆ ಚಾಂಪಿಯನ್​ ಘೋಷಣೆಗಾಗಿ ಸೂಪರ್​ ಓವರ್​ ನಡೆದಿದ್ದ ಪಂದ್ಯದ ಕೋಟ್ಯಾಂಟರ್​ ಅಭಿಮಾನಿಗಳನ್ನು ರೋಮಾಂಚನವನ್ನುಂಟು ಮಾಡಿತ್ತು. ಈ ಸೂಪರ್​ ಓವರ್​ಗೂ ಮುನ್ನ ಇಂಗ್ಲೆಂಡ್​ನ ಸ್ಟಾರ್​ ಬ್ಯಾಟ್ಸ್​ಮನ್ ಬೆನ್​ ಸ್ಟೋಕ್ಸ್​ ಸಿಗರೇಟ್​ ಬ್ರೇಕ್​ ತೆಗೆದುಕೊಂಡಿದ್ದ ವಿಷಯ ಈಗ ಬಹಿರಂಗಗೊಂಡಿದೆ.

241 ರನ್​ಗಳ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್​ ತಂಡಕ್ಕೆ ಆಧಾರವಾಗಿದ್ದ ಸ್ಟೋಕ್ಸ್​ 98 ಎಸೆತಗಳಲ್ಲಿ ಔಟಾಗದೆ 84 ರನ್​ ಗಳಿಸಿದ್ದರು. ಇವರ ಬ್ಯಾಟಿಂಗ್​ ನೆರವಿನಿಂದ ಪಂದ್ಯ ಟೈ ಆಗಿತ್ತು. ಜೊತೆಗೆ ಸೂಪರ್​ ಓವರ್​ನಲ್ಲೂ ಅವರು 8 ರನ್​ಗಳಿಸಿ 16 ರನ್​ಗಳ ಟಾರ್ಗೆಟ್​ಗೆ ನೆರವಾಗಿದ್ದರು.

ಬೆನ್​ ಸ್ಟೋಕ್ಸ್​
ಬೆನ್​ ಸ್ಟೋಕ್ಸ್​

ಸುಮಾರು 27 ಸಾವಿರ ಮಂದಿ ವೀಕ್ಷಕರಿದ್ದ ಲಾರ್ಡ್ಸ್​ ಮೈದಾನದಲ್ಲಿ ಸೂಪರ್​ ಓವರ್​ಗೂ ಮುನ್ನ ತೀವ್ರ ಒತ್ತಡಕ್ಕೊಳಗಾಗಿದ್ದ ಸ್ಟೋಕ್ಸ್​ ಡ್ರೆಸ್ಸಿಂಗ್​ ರೂಮ್​ಗೆ ಓಡಿ ಹೋಗಿ ಸಿಗರೇಟ್​ ಸೇದಿ ಬಂದಿದ್ದರು ಎಂಬುದು ಬಹಿರಂಗಗೊಂಡಿದೆ.

"ಸುಮಾರು 2 ಗಂಟೆ 27 ನಿಮಿಷಗಳ ಕಾಲ ನಂಬಲಸಾಧ್ಯವಾದ ಬ್ಯಾಟಿಂಗ್​ ನಡೆಸಿದ್ದ ಸ್ಟೋಕ್ಸ್​ ಬೆವರು ಮತ್ತು ಕೊಳಕಿನಿಂದ ಆವೃತ್ತರಾಗಿದ್ದರು. ಈ ಸಂದರ್ಭದಲ್ಲಿ ಸ್ಟೋಕ್ಸ್​ ಡ್ರೆಸ್ಸಿಂಗ್ ರೂಮಿನ ಹಿಂಭಾಗಕ್ಕೆ ತೆರಳುತ್ತಾರೆ. ನಂತರ ಸ್ನಾನ ಮಾಡಿ, ಒಂದು ಸಿಗರೇಟ್​ ಸೇದುವ ಮೂಲಕ ತಮ್ಮ ತಲೆಯಲ್ಲಿದ್ದ ಎಲ್ಲಾ ಒತ್ತಡವನ್ನು ತಕ್ಕ ಮಟ್ಟಿಗೆ ನಿವಾರಣೆ ಮಾಡಿಕೊಂಡು ಸೂಪರ್​ ಓವರ್​ನಲ್ಲಿ ಬ್ಯಾಟಿಂಗ್​ ನಡೆಸಲು ಬಂದಿದ್ದರೆಂದು" ನಿಕ್​ ಹಾಲ್ಟ್​ ಹಾಗೂ ಸ್ಟೇವ್​ ಜೇಮ್ಸ್​ ಬರೆದಿರುವ ಮಾರ್ಗನ್​ ಬಾಯ್ಸ್​ ಪುಸ್ತಕದಲ್ಲಿ ತಿಳಿಸಿದ್ದಾರೆ.

ಬೆನ್​ ಸ್ಟೋಕ್ಸ್​
ಬೆನ್​ ಸ್ಟೋಕ್ಸ್​

ಇಂಗ್ಲೆಂಡ್​ ನೀಡಿದ್ದ 16 ರನ್​ಗಳನ್ನು ಬೆನ್ನೆತ್ತಿದ ನ್ಯೂಜಿಲ್ಯಾಂಡ್​ ತಂಡ ದುರಾದೃಷ್ಟವಸಾತ್​ 15 ರನ್​ಗಳಿಸಲಷ್ಟೇ ಶಕ್ತವಾಗುತ್ತದೆ. ಆದರೆ, ಮೊದಲೇ ನಿರ್ಣಯಿಸಿದಂತೆ ಬೌಂಡರಿ ಲೆಕ್ಕಾಚಾರದಲ್ಲಿ ಇಂಗ್ಲೆಂಡ್ ತಂಡವನ್ನು ವಿಜೇತ ತಂಡ ಎಂದು ಘೋಷಣೆ ಮಾಡಲಾಗುತ್ತದೆ. ಪಂದ್ಯದಲ್ಲಿ ಇಂಗ್ಲೆಂಡ್​ 16 ಹಾಗೂ ನ್ಯೂಜಿಲ್ಯಾಂಡ್​ 17 ಬೌಂಡರಿ ಸಿಡಿಸಿರುತ್ತವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.