ಲಂಡನ್: ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಪ್ರಮುಖ ಪಾತ್ರವಹಿಸಿದ್ದ ಸ್ಟೋಕ್ಸ್ ಪಾಕ್ ವಿರುದ್ಧದ ಕೇವಲ ಒಂದೇ ಪಂದ್ಯವನ್ನಾಡಿ ಸರಣಿಯಿಂದ ಹೊರ ಬಂದಿರುವುದಕ್ಕೆ ಕಾರಣ ಬಹಿರಂಗಪಡಿಸಿದ್ದಾರೆ.
ಮೊದಲ ಪಂದ್ಯದ ಜಯದ ನಂತರ ದಿಢೀರ್ ತಂಡದಿಂದ ಹೊರಬಂದಿದ್ದ ಸ್ಟೋಕ್ಸ್ ವೈಯಕ್ತಿಕ ಕಾರಣದಿಂದ ಹೊರಬಂದಿರುವುದಾಗಿ ತಿಳಿಸಿದ್ದಾರೆ. ಆದರೆ ತಾವೂ ಸರಣಿಯಿಂದ ಹೊರಬಂದಿದ್ದಕ್ಕೆ ತಮ್ಮ ತಂದೆಗೆ ಬ್ರೈನ್ ಕ್ಯಾನ್ಸ್ರ ಇರುವುದು ತಿಳಿದಿದ್ದರಿಂದ ಮಾನಿಸಿಕವಾಗಿ ಸದೃಡರಾಗಿರಲು ಟೂರ್ನಿಯಿಂದ ಹೊರಬಂದಿದ್ದಾಗಿ ತಿಳಿಸಿದ್ದಾರೆ.
ಸ್ಟೋಕ್ಸ್ ತನ್ನ ಕುಟುಂಬದೊಂದಿಗೆ ಇರಲು ತನ್ನ ತವರೂರಾದ ಕ್ರೈಸ್ಟ್‌ಚರ್ಚ್‌ಗೆ ಮರಳಿದ್ದಾರೆ. ಈ ವೇಳೆ ಎರಡು ವಾರಗಳ ಕ್ವಾರಂಟೈನಲ್ಲಿರುವಾಗ ಮಾಧ್ಯಮದೊಂದಿಗೆ ಮಾತನಾಡಿದ್ದು ತಂದೆಗೆ ಬ್ರೈನ್ ಕಾನ್ಸರ್ ಇರುವುದು ತಿಳಿದ ಮೇಲೆ ತಮಗೆ ತಂಡವನ್ನು ಬಿಟ್ಟು ಬರದೆ ಬೇರೆ ದಾರಿ ಇರಲಿಲ್ಲ ಎಂದು ತಿಳಿಸಿದ್ದಾರೆ.
" ಟೆಸ್ಟ್ ಸರಣಿಯ ವೇಳೆ ನಾನು ಒಂದು ವಾರ ಸರಿಯಾಗಿ ನಿದ್ದೆ ಮಾಡಿಲ್ಲ. ನನ್ನ ತಲೆಯಲ್ಲಿ ತಂದೆಗೆ ಕ್ಯಾನ್ಸರ್ ಇರುವ ವಿಚಾರ ಇದ್ದಿದ್ದರಿಂದ ಆಟದ ಬಗ್ಗೆ ಗಮನ ನೀಡಲಾಗಲಿಲ್ಲ. ಹೀಗಾಗಿ ಸರಣಿ ಕೈಬಿಟ್ಟಿದ್ದು ನನ್ನ ಮಾನಸಿಕ ವಿಚಾರದ ದೃಷ್ಟಿಯಿಂದ ಸರಿಯಾದ ನಿರ್ಧಾರವಾಗಿತ್ತು" ಎಂದು ಸ್ಟೋಕ್ಸ್ ಹೇಳಿದ್ದಾರೆ.
ನ್ಯೂಜಿಲ್ಯಾಂಡ್ ತಂಡ ಮಾಜಿ ರಗ್ಬಿ ಆಟಗಾರರಾಗಿರುವ ಗೆರಾರ್ಡ್ ಸ್ಟೋಕ್ಸ್ ಇಂಗ್ಲೆಂಡ್ ರಗ್ಬಿ ಲೀಗ್ ತಂಡದ ಪರ ದಶಕಗಳಿಗೂ ಹೆಚ್ಚು ಕಾಲ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಈ ವೇಳೆ ಸ್ಟೋಕ್ಸ್ ಕೂಡ 12 ವರ್ಷದ ನಂತರ ಇಂಗ್ಲೆಂಡ್ನಲ್ಲಿ ವಾಸವಿದ್ದರು.
ಇತ್ತೀಚೆಗೆ ಮುಗಿದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಬಂದ ನಂತರ ಗೆರಾಲ್ಡ್ ಸ್ಟೋಕ್ಸ್ಗೆ ಆರೋಗ್ಯ ಹದಗೆಟ್ಟಿರುವುದು ತಿಳಿದುಬಂದಿತ್ತು.