ETV Bharat / sports

ಐಪಿಎಲ್​​​​​​​​​​​​ ನಡೆಸುವ ಬಗ್ಗೆ ಚಿಂತನೆ ನಡೆಸಿಲ್ಲ: ಬಿಸಿಸಿಐ

ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್ ಆರಂಭ ಮಾಡುವ ಬಗ್ಗೆ ಇಲ್ಲಿಯವರೆಗೆ ಯಾವುದೇ ರೀತಿಯ ಚಿಂತನೆ ನಡೆಸಿಲ್ಲ ಎಂದು ಬಿಸಿಸಿಐ ಸ್ಪಷ್ಟನೆ ನೀಡಿದೆ.

Indian Premier League
Indian Premier League
author img

By

Published : May 8, 2020, 7:33 PM IST

ಮುಂಬೈ: ಡೆಡ್ಲಿ ವೈರಸ್​ ಕೊರೊನಾದಿಂದಾಗಿ ಮೂಂದೂಡಿಕೆಯಾಗಿರುವ ಇಂಡಿಯನ್​ ಪ್ರೀಮಿಯರ್​ ಲೀಗ್​​ ನಡೆಸುವ ಬಗ್ಗೆ ಯಾವುದೇ ಚಿಂತನೆ ನಡೆಸಿಲ್ಲ ಎಂದು ಭಾರತೀಯ ಕ್ರಿಕೆಟ್​ ಮಂಡಳಿ ಖಂಜಾಚಿ ಅರುಣ್​ ದುಮ್ಲಾ ಹೇಳಿಕೆ ನೀಡಿದ್ದಾರೆ.

13ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್​ ಲೀಗ್​​ನ ದಿನಾಂಕ ಮರು ನಿಗದಿ ಪಡಿಸುವುದಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾವುದೇ ರೀತಿಯಲ್ಲೂ ನಾವು ಚಿಂತನೆ ನಡೆಸಿಲ್ಲ. ದೇಶದಲ್ಲಿನ ಲಾಕ್​ಡೌನ್​ ಸಂಪೂರ್ಣವಾಗಿ ಮುಕ್ತಾಯಗೊಂಡ ಬಳಿಕ ಇದರ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​​​ ಮಾರ್ಚ್​ 29ರಿಂದ ಆರಂಭಗೊಳ್ಳಬೇಕಾಗಿತ್ತು. ಆದರೆ, ಲಾಕ್​​ಡೌನ್ ಜಾರಿಯಲ್ಲಿರುವ ಕಾರಣ ಮುಂದೂಡಿಕೆ ಮಾಡಲಾಗಿದ್ದು, ಭಾರತೀಯ ಕ್ರಿಕೆಟ್ ಮಂಡಳಿಯಿಂದ ಇಲ್ಲಿಯವರೆಗೆ ಯಾವುದೇ ದಿನಾಂಕ ನಿಗದಿಗೊಂಡಿಲ್ಲ. ಇದರ ಮಧ್ಯೆ ಅದು ನಡೆಯುವುದೇ ಡೌಟ್​ ಎಂಬ ಮಾತುಗಳು ಕೇಳಿ ಬರುತ್ತಿವೆ.

ಟೂರ್ನಮೆಂಟ್​​​ನಲ್ಲಿ ಭಾಗಿಯಾಗಲು ಬೇರೆ ಬೇರೆ ದೇಶಗಳಿಂದ ಪ್ಲೇಯರ್ಸ್​​ ಭಾರತಕ್ಕೆ ಬರಬೇಕಾಗಿದ್ದು, ಅವರಿಗೆ 14 ದಿನಗಳ ಕಾಲ ಕ್ವಾರಂಟೈನ್​ ಮಾಡಿ ಐಪಿಎಲ್​ ನಡೆಸುವುದು ಹೇಗೆ? ಎಂದು ಪ್ರಶ್ನೆ ಮಾಡಿರುವ ಅವರು, ಕೆಲವೊಂದು ಕಡೆ ಐಪಿಎಲ್​ ಬೇಗ ಆರಂಭಗೊಳ್ಳಲಿದೆ ಎಂಬ ಮಾತು ಹರಿದಾಡುತ್ತಿದ್ದು, ಅದು ಸತ್ಯಕ್ಕೆ ದೂರವಾದ ಮಾತಾಗಿದೆ ಎಂದಿದ್ದಾರೆ. ಇಂಡಿಯನ್​ ಪ್ರೀಮಿಯರ್​ ಲೀಗ್​ ನಡೆಸದೇ ಇರುವುದರಿಂದ ಪ್ರಸಕ್ತ ವರ್ಷ ಭಾರತೀಯ ಕ್ರಿಕೆಟ್​ ಮಂಡಳಿಗೆ ಬರೋಬ್ಬರಿ 3,869.5 ಕೋಟಿ ರೂ ನಷ್ಟವಾಗಲಿದ್ದು, ಇದರಲ್ಲಿ 3269.5 ರೂ ಬ್ರಾಡ್​ಕಾಸ್ಟ್​ಗೆ ಸೇರಿದ್ದಾಗಿದೆ

ಭಾರತ-ಆಸ್ಟ್ರೇಲಿಯಾ ಸರಣಿ ಆರಂಭಿಸುವುದೇ ಉತ್ತಮ: ರೋಹಿತ್​

ಇಂಡಿಯನ್​​ ಪ್ರೀಮಿಯರ್​ ಲೀಗ್​ ಆರಂಭಗೊಳ್ಳುವ ಬಗ್ಗೆ ನನಗೆ ಯಾವುದೇ ಮಾಹಿತಿ ಗೊತ್ತಿಲ್ಲ. ಆದರೆ, ಅಕ್ಟೋಬರ್​​ 2020ರಿಂದ ಜನವರಿ 2021ವರೆಗೆ ಆರಂಭಗೊಳ್ಳಲಿರುವ ಭಾರತ - ಆಸ್ಟ್ರೇಲಿಯಾ ಕ್ರಿಕೆಟ್​ ಸರಣಿ ಆರಂಭ ಮಾಡುವ ಮೂಲಕ ಕ್ರಿಕೆಟ್​ಗೆ ಚಾಲನೆ ನೀಡುವುದು ಉತ್ತಮ ಎಂದು ರೋಹಿತ್​ ಶರ್ಮಾ ಹೇಳಿದ್ದಾರೆ.

ಭಾರತ - ಆಸ್ಟ್ರೇಲಿಯಾ ಈ ಸರಣಿಯಲ್ಲಿ ನಾಲ್ಕು ಟೆಸ್ಟ್​, ಮೂರು ಏಕದಿನ ಹಾಗೂ ಮೂರು ಟಿ - 20 ಪಂದ್ಯಗಳು ಸೇರಿಕೊಂಡಿವೆ. ಡೇವಿಡ್​ ವಾರ್ನರ್ ಜತೆ ಇನ್​ಸ್ಟಾಗ್ರಾಂ ಲೈವ್​ ಚಾಟ್​ನಲ್ಲಿ ಭಾಗಿಯಾಗಿದ್ದ ವೇಳೆ ಈ ಮಾಹಿತಿ ಅವರು ಹಂಚಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.