ನವದೆಹಲಿ: ಬಾಂಗ್ಲಾದೇಶ ಆಯೋಜಿಸಿರುವ ಏಷ್ಯಾ ಇಲೆವೆನ್ ಮತ್ತು ವರ್ಲ್ಡ್ ಇಲೆವೆನ್ ನಡುವಿನ ಟಿ-20 ಟೂರ್ನಿ 2020ರ ಮಾರ್ಚ್ ತಿಂಗಳಲ್ಲಿ ನಡೆಯಲಿದೆ ಎಂದು ಬಿಸಿಸಿಐ ಜಂಟಿ ಕಾರ್ಯದರ್ಶಿ ಜಯೇಶ್ ಜಾರ್ಜ್ ತಿಳಿಸಿದ್ದಾರೆ.
ಬಾಂಗ್ಲಾದೇಶದ ರಾಷ್ಟ್ರಪಿತ ಎಂದು ಕರೆಯಲ್ಪಡುವ ಬಂಗಬಂಧು ಶೇಖ್ ಮುಜಿಬುರ್ ರಹಮಾನ್ ಅವರ 100ನೇ ಜನ್ಮ ದಿನಾಚರಣೆಯ ಅಂಗವಾಗಿ ಈ ಟೂರ್ನಿಯನ್ನು ಬಾಂಗ್ಲಾ ಆಯೋಜನೆ ಮಾಡುತ್ತಿದೆ. ಈ ಟೂರ್ನಿಯಲ್ಲಿ ಏಷ್ಯಾ ಇಲೆವೆನ್ ತಂಡದ ಪರ ಟೀಂ ಇಂಡಿಯಾದ ಐವರು ಆಟಗಾರರು ಭಾಗವಹಿಸಲಿದ್ದಾರೆ ಎಂದು ಜಾರ್ಜ್ ತಿಳಿಸಿದ್ದಾರೆ.
ಈ ಬಗ್ಗೆ ಪಿಂಕ್ ಬಾಲ್ ಟೆಸ್ಟ್ ಪಂದ್ಯ್ ವೇಳೆ ಚರ್ಚೆ ನಡೆದಿತ್ತು. ಯಾವುದೇ ಆಟಗಾರರಿಗೆ ಆಹ್ವಾನ ನೀಡದಿರುವ ಹಿನ್ನೆಲೆಯಲ್ಲಿ, ಈ ಏಷ್ಯಾ ಇಲೆವೆನ್ ತಂಡದಲ್ಲಿ ಪಾಕ್ ತಂಡದ ಆಟಗಾರರು ಭಾಗವಹಿಸುತ್ತಿಲ್ಲ. ಈ ವಿಚಾರ ಬಿಸಿಸಿಐ ಅಧಯಕ್ಷ ಸೌರವ್ ಗಂಗೂಲಿಗೆ ಬಿಟ್ಟದ್ದು, ಅವರು ಬಾಂಗ್ಲಾ ಕ್ರಿಕೆಟ್ ಬೋರ್ಡ್ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಜಾರ್ಜ್ ತಿಳಿಸಿದ್ದಾರೆ.
ಇನ್ನು ಏಷ್ಯಾ ಇಲೆವೆನ್ ತಂಡದಲ್ಲಿ ಭಾರತದ ಐವರು ಆಟಗಾರರು ಇರಲಿದ್ದು, ಆಟಗಾರರ ಆಯ್ಕೆ ವಿಚಾರ ಕುರಿತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಿರ್ಧರಿಸಲಿದ್ದಾರೆ ಎಂದು ಜಾರ್ಜ್ ಸ್ಪಷ್ಟಪಡಿಸಿದ್ದಾರೆ.