ETV Bharat / sports

2020ರ ದೇಶಿ ಕ್ರಿಕೆಟ್​ ಋತುವಿನಲ್ಲಿ ರಣಜಿ, ಸಯ್ಯದ್​ ಮುಷ್ತಾಕ್​ ಅಲಿ ಟಿ20ಗೆ ಮಾತ್ರ ಅವಕಾಶ - ದೇವಧರ್​ ಟ್ರೋಫಿ

ಐಪಿಎಲ್​ ಸೆಪ್ಟೆಂಬರ್​ನಲ್ಲಿ ನಡೆಯಲಿರುವುದರಿಂದ ಈ ಅವಧಿಯಲ್ಲಿ ನಡೆಯಬೇಕಿದ್ದ ದುಲೀಪ್ ಟ್ರೋಫಿ, ದೇವಧರ್ ಟ್ರೋಫಿ ಮತ್ತು ವಿಜಯ್ ಹಜಾರೆ ಟೂರ್ನಿಗಳನ್ನು ಬಿಸಿಸಿಐ ರದ್ದುಗೊಳಿಸಲಿದ ಎನ್ನಲಾಗಿದೆ.

Ranji Trophy
Ranji Trophy
author img

By

Published : Aug 9, 2020, 12:30 PM IST

ನವದೆಹಲಿ: ಕೋವಿಡ್​ 19 ನಿಂದ ಈಗಾಗಲೆ ಬಹುತೇಕ ಕ್ರಿಕೆಟ್​ ಟೂರ್ನಿಗಳು ರದ್ದಾಗಿವೆ. ಇನ್ನು ಕೆಲವು ಟೂರ್ನಮೆಂಟ್​ಗಳು ಮುಂದೂಡಲಾಗಿದೆ. ಇದೀಗ ಬಿಸಿಸಿಐ 2020ರ ದೇಶಿ ಋತುವಿನಲ್ಲಿ ಕೇವಲ ರಣಜಿ ಮತ್ತು ಸಯ್ಯದ್​ ಮುಷ್ತಾಕ್​ ಅಲಿ ಟೂರ್ನಿಗಳನ್ನು ಮಾತ್ರ ಆಯೋಜಿಸಲಿದೆ ಎಂದು ತಿಳಿದುಬಂದಿದೆ.

ಕೊರೊನಾ ವೈರಸ್​ ಹಾಗೂ ಐಪಿಎಲ್​ ಕಾರಣದಿಂದ ನವೆಂಬರ್​ವರೆಗೂ ಬಿಸಿಸಿಐ ವ್ಯಾಪ್ತಿಯಲ್ಲಿ ನಡೆಯಬೇಕಿದ್ದ ಕೆಲವು ಟೂರ್ನಿಗಳು ರದ್ದಾಗುವ ಸಾಧ್ಯತೆಯಿದೆ. ರಣಜಿ ಮತ್ತು ಸಯ್ಯದ್​ ಮುಷ್ತಾಕ್​ ಅಲಿ ಟೂರ್ನಮೆಂಟ್​ಗಳನ್ನು ಆಯೋಜಿಸಿ, ದುಲೀಪ್​ ಟ್ರೋಫಿ , ವಿಜಯ್​ ಹಜಾರೆ ಟ್ರೋಪಿ ಸೇರಿದಂತೆ ಕೆಲವು ಟೂರ್ನಮೆಂಟ್​ಗಳನ್ನು ಬಿಸಿಸಿಐ ರದ್ದುಗೊಳಿಸಲಿದೆ ಎಂದು ತಿಳಿದುಬಂದಿದೆ.

ಸೆಪ್ಟೆಂಬರ್‌ನಲ್ಲಿ ಬಹುತೇಕ ಬಿಸಿಸಿಐ ವ್ಯಾಪ್ತಿಯ ದೇಶಿ ಕ್ರಿಕೆಟ್ ಟೂರ್ನಿಗಳು ಆರಂಭವಾಗುತ್ತವೆ. ಆದರೆ ಈ ಬಾರಿ ಮಾರ್ಚ್‌ನಲ್ಲಿ ನಡೆಯಬೇಕಿದ್ದ ಐಪಿಎಲ್​ ಕೊರೊನಾ ವೈರಸ್‌ ಕಾರಣದಿಂದ ಸೆಪ್ಟೆಂಬರ್‌ 19ರಿಂದ ನವೆಂಬರ್ 10ರ ವರೆಗೆ ನಡೆಯಲಿದೆ. ಹೀಗಾಗಿ ಮಿಲಿಯನ್​ ಡಾಲರ್​ ಟೂರ್ನಮೆಂಟ್​ಗಾಗಿ ಕೆಲವು ಟೂರ್ನಿಗಳನ್ನು ರದ್ದುಗೊಳಿಸಲು ಬಿಸಿಸಿಐ ನಿರ್ಧರಿಸಿದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ.

ಐಪಿಎಲ್​ ಸೆಪ್ಟೆಂಬರ್​ನಲ್ಲಿ ನಡೆಯಲಿರುವುದರಿಂದ ಈ ಅವಧಿಯಲ್ಲಿ ನಡೆಯಬೇಕಿದ್ದ ದುಲೀಪ್ ಟ್ರೋಫಿ, ದೇವಧರ್ ಟ್ರೋಫಿ ಮತ್ತು ವಿಜಯ್ ಹಜಾರೆ ಟೂರ್ನಿಗಳನ್ನು ಬಿಸಿಸಿಐ ರದ್ದುಗೊಳಿಸಲಿದ ಎನ್ನಲಾಗಿದೆ.

ಇನ್ನು ಈ ಎರಡು ಟೂರ್ನಿಗಳು ಪ್ರಮುಖ 2 ನಗರದ ನಾಲ್ಕು ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ. ರಣಜಿ ಟೂರ್ನಿಯ ಅಂತರವನ್ನು ತಗ್ಗಿಸಲು ಬಿಸಿಸಿಐ ಹೊಸ ಯೋಜನೆ ರೂಪಿಸಲು ಮುಂದಾಗಿದೆ. ಮುಷ್ತಾಕ್​ ಅಲಿ ಟಿ20ಯಲ್ಲಿ 38 ತಂಡಗಳು ಭಾಗವಹಿಸಲಿದ್ದು, 6 ಗುಂಪುಗಳಾಗಿ ವಿಂಗಡಿಸಲಿದೆ. ಈ ಟೂರ್ನಿ ಪ್ರತಿ ಗುಂಪಿನ ಪಂದ್ಯಗಳು ಒಂದು ನಗರದ ಎರಡು ಕ್ರೀಡಾಂಗಣದಲ್ಲಿ ನಡೆಯಲಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.