ETV Bharat / sports

ಐಪಿಎಲ್​ ವೇಳೆ ಕೋವಿಡ್-19 ಟೆಸ್ಟ್​ಗಾಗಿಯೇ ₹10 ಕೋಟಿ ಖರ್ಚು ಮಾಡುತ್ತಿದೆ ಬಿಸಿಸಿಐ!! - BCCI spent around 10 crore for 20000 plus COVID tests

ಐಪಿಎಲ್‌ನ 8 ಪ್ರಾಂಚೈಸಿಗಳು ಭಾರತದಲ್ಲಿ ನಡೆದ ಪರೀಕ್ಷೆಗಳ ಖರ್ಚನ್ನು ವ್ಯಯಿಸಿದ್ದವು. ಎಲ್ಲಾ ತಂಡಗಳು ಯುಎಇಗೆ ತಲುಪಿದ್ದ ನಂತರ ಅಂದರೆ ಆಗಸ್ಟ್​ 20ರಿಂದ ನಡೆದ RT-PCR ಟೆಸ್ಟ್​ಗಳಿಂದ ಎಲ್ಲಾ ಪರೀಕ್ಷೆಗಳನ್ನು ಬಿಸಿಸಿಐ ನೋಡಿಕೊಳ್ಳುತ್ತಿದೆ..

IPL 2020
IPL 2020
author img

By

Published : Sep 1, 2020, 7:23 PM IST

ದುಬೈ: ಭಾರತದಲ್ಲಿ ಕೋವಿಡ್​ 19 ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆ ಬಿಸಿಸಿಐ ಯುಎಇನಲ್ಲಿ 13ನೇ ಆವೃತ್ತಿಯ ಐಪಿಎಲ್​ ಆಯೋಜನೆ ಮಾಡುತ್ತಿದೆ. ಆದರೆ, ಆಟಗಾರರ ಆರೋಗ್ಯದ ಹಿತದೃಷ್ಟಿಯಿಂದ ಟೂರ್ನಿಯ ವೇಳೆ ಕೋವಿಡ್​-19 ಟೆಸ್ಟ್​ಗಾಗಿಯೇ ಸುಮಾರು 10 ಕೋಟಿ ರೂ. ಖರ್ಚು ಮಾಡುತ್ತಿದೆ ಎಂದು ತಿಳಿದು ಬಂದಿದೆ.

ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ಯುಎಇಯ ಶಾರ್ಜಾ, ಅಬುಧಾಬಿ ಹಾಗೂ ದುಬೈನಲ್ಲಿ 53 ದಿನಗಳ ಟೂರ್ನಿ ನಡೆಯಲಿದೆ. ಈ ಅವಧಿಯಲ್ಲಿ ಆಟಗಾರರಿಗೆ ಸುಮಾರು 20,000 ಕೋವಿಡ್-19 ಪರೀಕ್ಷೆಗಳನ್ನು ನಡೆಸಲು ಬಿಸಿಸಿಐ ಚಿಂತಿಸಿದೆ. ಅದಕ್ಕಾಗಿ 10 ಕೋಟಿ ರೂ. ವ್ಯಯಿಸಲು ಸಿದ್ಧವಾಗಿದೆ.

ಐಪಿಎಲ್‌ನ 8 ಪ್ರಾಂಚೈಸಿಗಳು ಭಾರತದಲ್ಲಿ ನಡೆದ ಪರೀಕ್ಷೆಗಳ ಖರ್ಚನ್ನು ವ್ಯಯಿಸಿದ್ದವು. ಎಲ್ಲಾ ತಂಡಗಳು ಯುಎಇಗೆ ತಲುಪಿದ್ದ ನಂತರ ಅಂದರೆ ಆಗಸ್ಟ್​ 20ರಿಂದ ನಡೆದ RT-PCR ಟೆಸ್ಟ್​ಗಳಿಂದ ಎಲ್ಲಾ ಪರೀಕ್ಷೆಗಳನ್ನು ಬಿಸಿಸಿಐ ನೋಡಿಕೊಳ್ಳುತ್ತಿದೆ. ಅಷ್ಟೇ ಅಲ್ಲ, ಟೂರ್ನಿಯ ಆರಂಭದಿಂದ ಅಂತ್ಯದವರೆಗಿನ ಕೊರೊನಾ ಪರೀಕ್ಷೆಗಳಿಗಾಗಿ ಸುಮಾರು 10 ಕೋಟಿ ರೂ. ತೆಗೆದಿಟ್ಟಿದೆ ಎಂದು ತಿಳಿದು ಬಂದಿದೆ.

"ನಾವು ಯುಎಇ ಮೂಲದ ವಿಪಿಎಸ್​ ಹೆಲ್ತ್‌ಕೇರ್ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ. ನಾವು ಇಷ್ಟೇ ಪ್ರಮಾಣದ ಟೆಸ್ಟ್​ಗಳನ್ನು ನಡೆಸಲಿದ್ದೇವೆ ಎಂದು ಹೇಳಲಾಗದು. ಸುಮಾರು 20 ಸಾವಿರಕ್ಕೂ ಹೆಚ್ಚು ಟೆಸ್ಟ್​ ನಡೆಸಬಹುದು. ಎಲ್ಲಾ ತೆರಿಗೆಯನ್ನು ಸೇರಿ ಪ್ರತಿ ಟೆಸ್ಟ್​ಗೆ 200 ದಿರ್ಹಾಮ್​ ವೆಚ್ಚವನ್ನು ಬಿಸಿಸಿಐ ಖರ್ಚು ಮಾಡುತ್ತಿದೆ" ಎಂದು ಐಪಿಎಲ್​ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಟೂರ್ನಾಮೆಂಟ್​ನ ಭಾಗವಾಗಿರುವ ಎಲ್ಲರನ್ನು ಸೇರಿಸಿ ಆಗಸ್ಟ್​ 20ರಿಂದ 29ರವರೆಗ 1998 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.