ಮುಂಬೈ: ಮಾಜಿ ನಾಯಕ ಮನ್ಸೂರ್ ಅಲಿ ಖಾನ್ ಪಟೌಡಿ ಅವರ 80 ನೇ ಜನ್ಮ ದಿನಾಚರಣೆ ಹಿನ್ನೆಲೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟ್ವೀಟ್ ಮಾಡಿ ಗೌರವ ಸಲ್ಲಿಸಿದೆ.
ಭಾರತದ ಕ್ರಿಕೆಟ್‌ನ ಅತ್ಯುನ್ನತ ನಾಯಕರಲ್ಲಿ ಒಬ್ಬರಾಗಿದ್ದ ಪಟೌಡಿಯರ, ಫೋಟೋ ಶೇರ್ ಮಾಡಿ ಬಿಸಿಸಿಐ ಗೌರವ ಸಲ್ಲಿಸಿದೆ.
"ಎಂಎಕೆ ಪಟೌಡಿ ಅವರು ಭಾರತದ ಮಾಜಿ ನಾಯಕ ಮತ್ತು ಇದುವರೆಗೆ ಆಡಿದ ಧೈರ್ಯಶಾಲಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು, ಇಂದು ಅವರ 80 ನೇ ಜನ್ಮದಿನ" ಎಂದು ಬಿಸಿಸಿಐ ಟ್ವೀಟ್ ಮಾಡಿದೆ.
-
Remembering MAK Pataudi - former India captain and one of the bravest batsmen to have ever played the game - on his 80th birth anniversary. 🙏 pic.twitter.com/ctNgKFeta3
— BCCI (@BCCI) January 5, 2021 " class="align-text-top noRightClick twitterSection" data="
">Remembering MAK Pataudi - former India captain and one of the bravest batsmen to have ever played the game - on his 80th birth anniversary. 🙏 pic.twitter.com/ctNgKFeta3
— BCCI (@BCCI) January 5, 2021Remembering MAK Pataudi - former India captain and one of the bravest batsmen to have ever played the game - on his 80th birth anniversary. 🙏 pic.twitter.com/ctNgKFeta3
— BCCI (@BCCI) January 5, 2021
ಪಟೌಡಿ ಅವರು ಕಾರು ಅಪಘಾತದಲ್ಲಿ ತಮ್ಮ ಬಲಗಣ್ಣಿನ ದೃಷ್ಟಿ ಕಳೆದುಕೊಂಡಿದ್ದರು. ಅವರು ಟೀಮ್ ಇಂಡಿಯಾ ಪರ 46 ಟೆಸ್ಟ್ ಪಂದ್ಯಗಳನ್ನಾಡಿದ್ದು, 34.91ರ ಸರಾಸರಿಯಲ್ಲಿ 6 ಶತಕ, 16 ಅರ್ಧಶತಕಗಳೊಂದಿಗೆ 2793 ರನ್ ಗಳಿಸಿದ್ದಾರೆ. ಅವರು ಆಡಿದ 46 ಟೆಸ್ಟ್ ಪಂದ್ಯಗಳಲ್ಲಿ 40 ರಲ್ಲಿ ನಾಯಕನಾಗಿ ಭಾರತವನ್ನು ಮುನ್ನಡೆಸಿದ್ದು, 9 ಪಂದ್ಯಗಳಲ್ಲಿ ಗೆಲವು ಪಡೆದಿದ್ದರು.