ಮುಂಬೈ: ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಡೇ-ನೈಟ್ ಟೆಸ್ಟ್ ಪಂದ್ಯ ನಡೆಯಲಿದೆ. ಬಾಂಗ್ಲಾದೇಶದ ವಿರುದ್ಧ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನವೆಂಬರ್ 22ರಿಂದ ಈ ಟೆಸ್ಟ್ ಆರಂಭಗೊಳ್ಳಲಿದೆ.
ಚೊಚ್ಚಲ ಹಗಲು ರಾತ್ರಿ ಟೆಸ್ಟ್ ಪಂದ್ಯಕ್ಕಾಗಿ ಭಾರತೀಯ ಕ್ರಿಕೆಟ್ ಮಂಡಳಿ ಸಕಲ ರೀತಿಯಲ್ಲೂ ತಯಾರಿ ಮಾಡಿಕೊಳ್ಳುತ್ತಿದ್ದು, ಪಂದ್ಯಕ್ಕಾಗಿ 72 ಗುಲಾಬಿ ಚೆಂಡುಗಳನ್ನು ಪೂರೈಸುವಂತೆ ಎಸ್ಜಿ ಕಂಪನಿಗೆ ಬೇಡಿಕೆ ಇಟ್ಟಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-
West Bengal: The second Test match of the upcoming Bangladesh tour of India 2019, scheduled to be played at the Eden Gardens in Kolkata from November 22nd, will be India’s first Day-Night Test match. #INDvBAN pic.twitter.com/hCoivWIH77
— ANI (@ANI) October 31, 2019 " class="align-text-top noRightClick twitterSection" data="
">West Bengal: The second Test match of the upcoming Bangladesh tour of India 2019, scheduled to be played at the Eden Gardens in Kolkata from November 22nd, will be India’s first Day-Night Test match. #INDvBAN pic.twitter.com/hCoivWIH77
— ANI (@ANI) October 31, 2019West Bengal: The second Test match of the upcoming Bangladesh tour of India 2019, scheduled to be played at the Eden Gardens in Kolkata from November 22nd, will be India’s first Day-Night Test match. #INDvBAN pic.twitter.com/hCoivWIH77
— ANI (@ANI) October 31, 2019
ಈ ವಿಶೇಷ ಟೆಸ್ಟ್ ಪಂದ್ಯಕ್ಕಾಗಿ ಕ್ರೀಡಾಭಿಮಾನಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಬಿಸಿಸಿಐ ಉದ್ದೇಶಿಸಿದ್ದು, ಕೇವಲ 50 ರೂಪಾಯಿಗೆ ಟಿಕೆಟ್ ಮಾರಾಟ ಮಾಡಲು ಮುಂದಾಗಿದೆ. ಸುಮಾರು 68 ಸಾವಿರ ಪ್ರೇಕ್ಷಕರ ಸಾಮರ್ಥ್ಯ ಹೊಂದಿರುವ ಈಡನ್ ಗಾರ್ಡನ್ಸ್‌ನಲ್ಲಿ ಪ್ರತಿ ದಿನದಾಟಕ್ಕೆ 50, 100, 150 ರೂ. ಮುಖಬೆಲೆಯ ಟಿಕೆಟ್ ಮಾರಾಟ ಮಾಡಲು ತೀರ್ಮಾನಿಸಲಾಗಿದೆ. ಜೊತೆಗೆ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ನೀಡಲು ಮಂಡಳಿ ಮುಂದಾಗಿದೆ.