ETV Bharat / sports

ಬಿಸಿಸಿಐ ವಾರ್ಷಿಕ ಪ್ರಶಸ್ತಿ ಪ್ರದಾನ: ಮಯಾಂಕ್, ಶಫಾಲಿ ಸೇರಿ ಹಲವರಿಗೆ ಗೌರವ

author img

By

Published : Jan 12, 2020, 8:59 PM IST

Updated : Jan 12, 2020, 9:28 PM IST

2018-19ನೇ ಸಾಲಿನ ಬಿಸಿಸಿಐ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಮುಂಬೈಯಲ್ಲಿ ನಡೆಯಿತು.

BCCI Awards,ಬಿಸಿಸಿಐ ವಾರ್ಷಿಕ ಪ್ರಶಸ್ತಿ
ಬಿಸಿಸಿಐ ವಾರ್ಷಿಕ ಪ್ರಶಸ್ತಿ

ಮುಂಬೈ: ಬಿಸಿಸಿಐ ಕೊಡಮಾಡುವ ವಾರ್ಷಿಕ 2018-19ನೇ ಸಾಲಿನ ಹಲವು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದ್ದು, ಕನ್ನಡಿಗ ಮಯಾಂಕ್ ಅಗರ್ವಾಲ್ ಕೂಡ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿ 827 ರನ್​ ಸಿಡಿಸಿರುವ ಮಯಾಂಕ್ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಬೆಸ್ಟ್ ಆಟಗಾರರ ವಿಭಾಗದಲ್ಲಿ ಗೌರವಕ್ಕೆ ಪಾತ್ರರಾಗಿದ್ದಾರೆ. ಕಳೆದ ವರ್ಷ ನಡೆದ ಟೆಸ್ಟ್​ ಟೂರ್ನಿಯಲ್ಲಿ ಮಯಾಂಕ್ ದ್ವಿಶತಕ ಸಿಡಿಸಿ ಮಿಂಚಿದ್ದರು.

ವನಿತೆಯರ ವಿಭಾಗದಲ್ಲಿ ಭವಿಷ್ಯದ ತಾರೆ ಶಫಾಲಿ ವರ್ಮಾ ಭಾರತದ ಪರ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಬೆಸ್ಟ್ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಭಾರತ ವನಿತೆಯರ ತಂಡದಲ್ಲಿ ಕೇವಲ ಟಿ-20 ಪಂದ್ಯಗಳನ್ನಾಡಿರುವ ಶಫಾಲಿ 9 ಪಂದ್ಯಗಳಿಂದ 222 ರನ್​ ಸಿಡಿಸಿದ್ದು 73 ರನ್​ ವಯಕ್ತಿಕ ಗರಿಷ್ಠ ರನ್​ಗಳಿಸಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ಕಿರಿಯ ವಯಸ್ಸಿನಲ್ಲೇ ಅರ್ಧಶತಕ ಸಿಡಿಸಿದ ದಾಖಲೆ ಶಫಾಲಿ ಹೆಸರಲ್ಲಿದೆ. ಇದಕ್ಕೂ ಮೊದಲು ಸಚಿನ್ ಈ ದಾಖಲೆ ಹೊಂದಿದ್ದರು.

ಟೆಸ್ಟ್ ಕ್ರಿಕೆಟ್​ನಲ್ಲಿ ಅತಿಹೆಚ್ಚು ರನ್​ಗಳಿಸಿದ ಚೇತೇಶ್ವರ್ ಪುಜಾರ ಮತ್ತು ಅತಿಹೆಚ್ಚು ವಿಕೆಟ್​ ಪಡೆದಿದ್ದಕ್ಕಾಗಿ ಜಸ್ಪ್ರಿತ್ ಬುಮ್ರಾಗೆ ದಿಲಿಪ್ ಸರ್ದೇಸಾಯಿ ಪ್ರಶಸ್ತಿ ನೀಡಲಾಗಿದೆ.

HIGHEST WICKETS IN ONE DAY INTERNATIONALS - 2018-19 - WOMEN.#NAMAN pic.twitter.com/efw0RdecjV

— BCCI (@BCCI) January 12, 2020 ">

ವನಿತೆಯರ ಏಕದಿನ ಕ್ರಿಕೆಟ್​​ನಲ್ಲಿ ಅತಿಹೆಚ್ಚು ರನ್​ ಗಳಿಸಿದ ಸ್ಮೃತಿ ಮಂದಾನಾ ಮತ್ತು ಅತಿಹೆಚ್ಚು ವಿಕೆಟ್ ಪಡೆದ ಜೂಲನ್ ಗೋಸ್ವಾಮಿ ಕೂಡ ಪ್ರಶಸ್ತಿ ಪಡೆದುಕೊಂಡಿದ್ದಾರೆ.

2018-19ನೇ ಸಾಲಿನ ರಣಜಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಆಲ್​ರೌಂಡ್​ ಆಟಗಾರ ಶಿವಂ ದುಬೆ, ಲಾಲಾ ಅಮರನಾಥ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.

2018 ಮತ್ತು 2019ನೇ ಸಾಲಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತ್ಯುತ್ತಮ ಸಾಧನೆ ತೋರಿದ್ದಕ್ಕಾಗಿ ಬುಮ್ರಾಗೆ ಅತ್ಯುತ್ತಮ ಅಂತರಾಷ್ಟ್ರೀಯ ಕ್ರಿಕೆಟಿಗ ಪಾಲಿ ಉಮ್ರಿಗರ್ ಪ್ರಶಸ್ತಿ ನೀಡಲಾಗಿದ್ದು, ಪೂನಮ್ ಯಾದವ್​ಗೆ ಅತ್ಯುತ್ತಮ ಅಂತರಾಷ್ಟ್ರೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ ಪ್ರಶಸ್ತಿ ನೀಡಲಾಗಿದೆ.

Intro:Body:Conclusion:
Last Updated : Jan 12, 2020, 9:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.