ನವದೆಹಲಿ : ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕದ ಮುಖ್ಯಸ್ಥರಾಗಿ ಗುಜರಾತ್ ಮಾಜಿ ಡಿಜಿಪಿ ಶಬೀರ್ ಹುಸೇನ್ ಶೇಖದಮ್ ಖಾಂಡ್ವಾಲಾ ನೇಮಕವಾಗಿದ್ದಾರೆ. ಅವರಿಗೆ ಅಜಿತ್ ಸಿಂಗ್ ಸೋಮವಾರ ಅಧಿಕಾರ ಹಸ್ತಾಂತರಿಸಿದ್ದಾರೆ.
ರಾಜಸ್ಥಾನದ ಮಾಜಿ ಡಿಜಿಪಿ ಅಜಿತ್ ಸಿಂಗ್ 2018ರಲ್ಲಿ ಎಸಿಯು(ಭ್ರಷ್ಟಾಚಾರ ನಿಗ್ರಹ ಘಟಕ) ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು. ಅವರ ಅಧಿಕಾರಾವಧಿ ಮಾರ್ಚ್ 31ರಂದು ಅಂತ್ಯಗೊಂಡಿತ್ತು. ಇದೀಗ ಶಬೀರ್ ಹುಸೇನ್ಗೆ ಅಧಿಕಾರ ವಹಿಸಿಕೊಟ್ಟಿದ್ದು, ತನ್ನ ಉತ್ತರಾಧಿಕಾರಿ ಶಬೀರ್ ಈ ಹುದ್ದೆಯಲ್ಲಿ ಹಿಡಿತ ಸಾಧಿಸುವವರೆಗೆ ಸಹಾಯ ಮಾಡಲು ಇರುವುದಾಗಿ ಖಚಿತಪಡಿಸಿದ್ದಾರೆ.
ವಿಶ್ವದ ದೊಡ್ಡ ಕ್ರಿಕೆಟ್ ಸಂಸ್ಥೆಯಾಗಿರುವ ಬಿಸಿಸಿಐನ ಭಾಗವಾಗುತ್ತಿರುವುದು ದೊಡ್ಡ ಗೌರವವಾಗಿದೆ. ಭದ್ರತಾ ವಿಷಯಗಳಲ್ಲಿರುವ ನನ್ನ ಪರಿಣತಿ ಈ ಪಾತ್ರದಲ್ಲಿ ನನಗೆ ಸಹಾಯ ಮಾಡುತ್ತದೆ ಎಂದು 70 ವರ್ಷದ ಶಬೀರ್ ಹುಸೇನ್ ತಿಳಿಸಿದ್ದಾರೆ. ಹುಸೇನ್ 2010ರಲ್ಲಿ ಗುಜರಾತ್ ಡಿಜಿಪಿ ಸ್ಥಾನದಿಂದ ನಿವೃತ್ತಿ ಹೊಂದಿದ್ದರು. ಆ ನಂತರ ಎಸಾರ್(essar) ಗ್ರೂಪ್ನಲ್ಲಿ ಸಲಹೆಗಾರರಾಗಿ 10 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು.
ಇದನ್ನು ಓದಿ:ಕಳೆದ 8 ಆವೃತ್ತಿಗಳಲ್ಲಿ 5 ಬಾರಿ ಚಾಂಪಿಯನ್.. ಹ್ಯಾಟ್ರಿಕ್ ಪ್ರಶಸ್ತಿ ಮುಡಿಗೇರಿಸಿಕೊಳ್ಳುತ್ತಾ ಮುಂಬೈ ಇಂಡಿಯನ್ಸ್?