ಮುಂಬೈ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಏಪ್ರಿಲ್ 16ರಂದು 7ನೇ ಅಪೆಕ್ಸ್ ಕೌನ್ಸಿಲ್ ಸಭೆ ನಡೆಸಲಿದೆ. ಇದರಲ್ಲಿ ಟಿ-20 ವಿಶ್ವಕಪ್, ದೇಶೀಯ ಆವೃತ್ತಿ ಮತ್ತು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಭಾಗವಹಿಸುವಿಕೆಯೇ ಪ್ರಮುಖ ಅಜೆಂಡಾಗಳಾಗಲಿವೆ ಎಂದು ತಿಳಿದು ಬಂದಿದೆ.
ಬಿಸಿಸಿಐನ ಕಾರ್ಯಸೂಚಿಯಲ್ಲಿ ಪ್ರಮುಖವಾಗಿ 14 ಅಂಶಗಳಿದ್ದು, ಅಪೆಕ್ಸ್ ಕೌನ್ಸಿಲ್ ಸದಸ್ಯರಿಗೆ 'ವಿಶೇಷ ಸಭೆ'ಯ ಸಮಯ ಮತ್ತು ಸ್ಥಳದ ಬಗ್ಗೆ ಸರಿಯಾದ ಸಮಯದಲ್ಲಿ ತಿಳಿಸಲಾಗುವುದು ಎಂದು ಬೋರ್ಡ್ ಮಾಹಿತಿ ನೀಡಿದೆ.
ಮೇಲೇ ತಿಳಿಸಿರುವ ಅಂಶಗಳ ಜೊತೆಗೆ ತೆಲಂಗಾಣ ಕ್ರಿಕೆಟ್ ಅಸೋಸಿಯೇಷನ್ ಪ್ರಾತಿನಿಧ್ಯದ ಕುರಿತು ಚರ್ಚೆ ಮತ್ತು ಜಮ್ಮು ಕಾಶ್ಮೀರ್ ಕ್ರಿಕೆಟ್ ಅಸೋಸಿಯೇಷನ್ ಕುರಿತಾದ ಚರ್ಚೆಯೂ ನಡೆಯಲಿದೆ ಎಂದು ಎಎನ್ಐಗೆ ದೊರತಿರುವ ಪತ್ರದಲ್ಲಿ ಬಿಸಿಸಿಐ ತಿಳಿಸಿದೆ.
ಇದೇ ಸಂದರ್ಭದಲ್ಲಿ ತಮಿಳುನಾಡು, ಕರ್ನಾಟಕ ಸೌರಾಷ್ಟ್ರ ಸೇರಿದಂತೆ ಕೆಲವು ರಾಜ್ಯ ಕ್ರಿಕೆಟ್ ಸಂಸ್ಥೆಗಳು ಸ್ಥಳೀಯ ಟಿ-20 ಲೀಗ್ ಆಯೋಜನೆ ಮಾಡುವ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಇದನ್ನು ಓದಿ: ಭಾರತದಲ್ಲಿ ಯೋಜಿಸಿದಂತೆ ಟಿ20 ವಿಶ್ವಕಪ್ ನಡೆಯಲಿದೆ : ಐಸಿಸಿ ಸಿಇಒ